ಸಿದ್ದಾಪುರ, ಜ. ೩೧: ಗುಹ್ಯ ಗ್ರಾಮದ ನಂದ ಎಂಬವರ ಕಾಫಿ ತೋಟವೊಂದರ ಕಣದಲ್ಲಿ ನಾಗರಹಾವು ಕಾಣಿಸಿಕೊಂಡಿದ್ದು, ತಕ್ಷಣ ಉರಗ ರಕ್ಷಕ ಸುರೇಶ್ ಪೂಜಾರಿಗೆ ಮಾಹಿತಿ ನೀಡಿದ ಹಿನ್ನೆಲೆ ಸ್ಥಳಕ್ಕೆ ಬಂದ ಸುರೇಶ್ ಬೃಹತ್ ಗಾತ್ರದ ನಾಗರಹಾವು ಪತ್ತೆಯಾಗಿ ಸೆರೆಹಿಡಿಯುವ ಸಂದರ್ಭ ಮತ್ತೊಂದು ನಾಗರಹಾವು ಪ್ರತ್ಯಕ್ಷವಾಗಿದೆ. ಎರಡು ನಾಗರ ಹಾವುಗಳನ್ನು ಸುರಕ್ಷಿತವಾಗಿ ಸೆರೆಹಿಡಿದು ಮಾಲ್ದಾರೆ ಅರಣ್ಯಕ್ಕೆ ಬಿಟ್ಟಿದ್ದಾರೆ.