ಸುಂಟಿಕೊಪ್ಪ, ಜ. ೨೮: ಸುಂಟಿಕೊಪ್ಪ ಪಟ್ಟಣದಲ್ಲಿ ಶನಿವಾರ ಮಧ್ಯರಾತ್ರಿ ಬಳಿಕ ಇಂದು ಬೆಳಗ್ಗಿನ ಜಾವ ೨ ಗಂಟೆ ನಂತರ ಸರಣಿ ಕಳ್ಳತನವಾಗಿದ್ದು ಸುಂಟಿಕೊಪ್ಪದ ಅಂಗಡಿ ಮಾಲೀಕರು, ಸಾರ್ವಜನಿಕರು, ವಾಹನ ಮಾಲೀಕರು ಆತಂಕಗೊAಡಿದ್ದಾರೆ.

ರಾಷ್ಟಿçÃಯ ಹೆದ್ದಾರಿ ಬದಿಯ ಮನು ಅಚ್ಚಮ್ಮಯ್ಯ ಕಾಂಪ್ಲೆಕ್ಸ್ನಲ್ಲಿರುವ ರಾಷ್ಟಿçÃಯ ಮಹಿಳಾ ಹಾಕಿ ತರಬೇತುದಾರರಾದ ಅಂಕಿತಾ ಅವರ ಪತಿ ಸುರೇಶ್ ಕುಶಾಲಪ್ಪ ಅವರು ನಡೆಸುತ್ತಿದ್ದ ಹೊಗೆ ತಪಾಸಣಾ ಕೇಂದ್ರದಲ್ಲಿ ನಿಲ್ಲಿಸಿದ್ದ ಬೈಕನ್ನು ಕಳವು ಮಾಡಲಾಗಿದ್ದು, ನಂತರ ವಾಹನ ಚಾಲಕರ ನಿಲ್ದಾಣ ಮುಂಭಾಗದ ಪೆಟ್ರೋಲ್ ಬಂಕ್‌ಗೆ ನುಗ್ಗಿದ ಇಬ್ಬರು ಕಳ್ಳರು ಮೊಬೈಲ್ ಟಾರ್ಚ್ ಬಳಸಿ ಅಲ್ಲಿದ್ದ ಗಲ್ಲಾಪೆಟ್ಟಿಗೆಯನ್ನು ಜಾಲಾಡಿದ್ದಾರೆ. ನಂತರ ಹಿಂಭಾಗದ ಕೋಣೆಗೆ ನುಗ್ಗಿ ಅಲ್ಲಿಯೂ ಏನು ಸಿಗದಿದ್ದಾಗ ೫೦ ಎಂಎಲ್ ಆಯಿಲ್ ಪ್ಯಾಕೇಟನ್ನು ತೆಗೆದುಕೊಂಡು ಹೊರ ಬಂದು ಸಮೀಪದಲ್ಲಿದ್ದ ನಂದಿನಿ ಹಾಲಿನ ಡೈರಿ ಬೀಗ ಮುರಿದು ಒಳ ನುಗ್ಗಿ ೨೦೦೦ ಹಣ ಕದ್ದಿದ್ದಾರೆ. ಬಳಿಕ ರಾಷ್ಟಿçÃಯ ಹೆದ್ದಾರಿ ಬದಿಯಲ್ಲಿರುವ ಸ್ವಾಗತ್ ಬಾರ್ ಮುಂಭಾಗದ ಟೀನೆಜ್ ಸೆಲೆಕ್ಷನ್ ಬಟ್ಟೆ ಅಂಗಡಿಯ ಬೀಗ ಮುರಿದು

(ಮೊದಲ ಪುಟದಿಂದ) ಒಳನುಗ್ಗಿ ಗಲ್ಲಾ ಪೆಟ್ಟಿಗೆಯಲ್ಲಿದ್ದ ೧ ಲಕ್ಷ ನಗದು ಹಾಗೂ ಹೊಸ ಬಟ್ಟೆ, ಕನ್ನಡಕಗಳನ್ನು ಕಳವು ಮಾಡಿ ತಾವು ಧರಿಸಿದ್ದ ಹಳೆ ಬಟ್ಟೆಯನ್ನು ಕಳಚಿ ಹೊಸ ಬಟ್ಟೆ ಧರಿಸುವ ಸಂದರ್ಭ ಸೆನ್ಸಾರ್ ಲೈಟ್ ಬಂದ ಕಾರಣ ಅಲ್ಲಿಂದ ಪರಾರಿಯಾಗಿದ್ದಾರೆ. ನಂತರ ಶ್ರೀ ರಾಮ ಮೆಡಿಕಲ್ಸ್ ಮಾಲೀಕರಾದ ಕೆ.ಪಿ. ಜಗನಾಥ್ ಅವರ ಹಳೆಯ ಮನೆಗೆ ನುಗ್ಗಿ ಎಲ್ಲವನ್ನು ಜಾಲಾಡಿ ಸೂಟ್‌ಕೇಸ್ ತೆರೆದು ಏನು ಸಿಗದೆ ಪಲಾಯನ ಮಾಡಿದ್ದಾರೆ.

ಈ ಎಲ್ಲಾ ಕಳ್ಳತನ ೨ ಗಂಟೆಯ ನಂತರ ನಡೆದಿರುವುದು ಅಂಗಡಿ ಮತ್ತು ಬಂಕ್‌ನಲ್ಲಿ ಅಳವಡಿದ್ದ ಸಿ.ಸಿ. ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಬ್ಬರು ಕಳ್ಳರಲ್ಲಿ ಒಬ್ಬಾತ ಮುಖಕ್ಕೆ ಮಾಸ್ಕ್ ಧರಿಸಿದ್ದು, ಇನ್ನೊಬ್ಬ ಮಾಸ್ಕ್ ಧರಿಸದಿರುವುದು ಗೋಚರಿಸಿದೆ. ಕಳ್ಳತನ ನಡೆದ ಅಂಗಡಿಗಳಿಗೆ ಅಪರಾಧ ಪತ್ತೆ ದಳದ ಪಿಎಸ್‌ಐ ಸ್ವಾಮಿ ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದೆ.