ಮಡಿಕೇರಿ, ಜ. ೨೮: ಸ್ವತಂತ್ರ ಭಾರತದ ಪ್ರಪ್ರಥಮ ಸೇನಾ ಮಹಾದಂಡ ನಾಯಕ, ಶಿಸ್ತು, ಶ್ರದ್ಧೆ, ಸಮಯ ಪಾಲನೆಯ ಧೀಮಂತ ವ್ಯಕ್ತಿ ಫೀಲ್ಡ್ ಮಾರ್ಷಲ್ ಖ್ಯಾತಿಯ ಕೊಡಂದೇರ ಎಂ. ಕಾರ್ಯಪ್ಪ ಅವರಿಗೆ ಇಂದು ಅವರ ೧೨೫ನೆಯ ಜನ್ಮದಿನದ ಅಂಗವಾಗಿ ಹಲವೆಡೆ ಗೌರವ ನಮನ ಸಲ್ಲಿಸಲಾಯಿತು.

ಜಿಲ್ಲಾ ಕೇಂದ್ರ ಮಡಿಕೇರಿ ಯಲ್ಲಿರುವ ಕಾರ್ಯಪ್ಪ ಪ್ರತಿಮೆ, ರೋಷನಾರದಲ್ಲಿರುವ ಸಮಾಧಿ ಸ್ಥಳ, ಗೋಣಿಕೊಪ್ಪಲು, ಕಾವೇರಿ ಕಾಲೇಜು ಆವರಣದಲ್ಲಿರುವ ಫೀ.ಮಾ. ಕಾರ್ಯಪ್ಪ, ಜನರಲ್ ತಿಮ್ಮಯ್ಯ ಪ್ರತಿಮೆ ಸ್ಥಳ, ಶನಿವಾರಸಂತೆಯಲ್ಲಿನÀ ಕಾರ್ಯಪ್ಪ ಅವರು ಜನ್ಮತಳೆದ ಸ್ಥಳ, ಮೈಸೂರಿನಲ್ಲಿರುವ ಕಾರ್ಯಪ್ಪ ವೃತ್ತ ಹಾಗೂ ಪ್ರತಿಮೆ ಸ್ಥಳ ಸೇರಿದಂತೆ ರಾಜಧಾನಿ ಬೆಂಗಳೂರಿನ ವಸಂತ ನಗರದ ಕೊಡವ ಸಮಾಜದ ಸನಿಹದ ಕಾರ್ಯಪ್ಪ ವೃತ್ತ ಸೇರಿದಂತೆ ಹಲವೆಡೆಗಳಲ್ಲಿ ವಿಶ್ವಖ್ಯಾತಿಯ ಸೇನಾಧಿಕಾರಿಗೆ ಗೌರವ ಸೂಚಿಸಲಾಯಿತು.

ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ:

ಭಾರತೀಯ ಸೇನೆಯ ಮೊದಲ ಮಹಾದಂಡನಾಯಕ ಫೀಲ್ಡ್ ಮಾರ್ಷಲ್ ಕೊಡಂದೇರ ಎಂ. ಕಾರ್ಯಪ್ಪ ಅವರ ಜೀವನ ಆದರ್ಶ ಹಾಗೂ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿದ್ದು, ಪ್ರತಿಯೊಬ್ಬರು ಇವುಗಳನ್ನು ಅಳವಡಿಸಿಕೊಂಡು ಉತ್ತಮ ಪ್ರಜೆಯಾಗಬೇಕೆಂದು ಗಣ್ಯರು ಕರೆ ನೀಡಿದರು.

ನಗರದ ಫೀ.ಮಾ. ಕಾರ್ಯಪ್ಪ ಪ್ರತಿಮೆ ಬಳಿ ಫೀ.ಮಾ. ಕಾರ್ಯಪ್ಪ ಅವರ ೧೨೫ನೇ ಜನ್ಮ ಜಯಂತಿ ಅಂಗವಾಗಿ ನಡೆದ ಗೌರವ ಸಮರ್ಪಣೆಯಲ್ಲಿ ಗಣ್ಯರು ಪುಷ್ಪನಮನ ಸಲ್ಲಿಸಿ ಅಪ್ರತಿಮ ಸೇನಾನಿಯ ಗುಣಗಾನ ಮಾಡಿದರು.

ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಮಾತನಾಡಿ, ಕಾರ್ಯಪ್ಪ ಅವರ ಸ್ಫೂರ್ತಿ ತುಂಬುವ ವ್ಯಕ್ತಿತ್ವವಾಗಿದೆ. ಭಾರತ-ಪಾಕಿಸ್ತಾನ ಯುದ್ಧ ಸಂದರ್ಭದಲ್ಲಿ ಮಗ ಮುಖ್ಯವಲ್ಲ ದೇಶ ಮುಖ್ಯ ಎಂದು ಹೇಳುವ ಮೂಲಕ ದೇಶಾಭಿಮಾನ ತೋರಿದ್ದಾರೆ. ಫೀಲ್ಡ್ ಮಾರ್ಷಲ್ ಗೌರವ ಇಡೀ ನಾಡಿಗೆ ಹೆಮ್ಮೆ ತರುವ ವಿಚಾರ. ಕೊಡಗಿನ ಸೇನಾನಿಗಳು ಜನರಲ್ ಸ್ಥಾನ ತೆಗೆದುಕೊಳ್ಳಬೇಕು. ಭಾರತ ರತ್ನಕ್ಕೆ ಸಮಾನದ ಫೀಲ್ಡ್ ಮಾರ್ಷಲ್ ಗೌರವ ಕಾರ್ಯಪ್ಪ ಅವರಿಗೆ ದೊರೆತಿದೆ ಎಂದರು.

ಫೀ.ಮಾ. ಕಾರ್ಯಪ್ಪ ಅವರ ಪುತ್ರ ನಿವೃತ್ತ ಏರ್ ಮಾರ್ಷಲ್ ಕೊಡಂದೇರ ನಂದ ಕಾರ್ಯಪ್ಪ ಮಾತನಾಡಿ, ನನ್ನ ತಂದೆ ನನಗೆ ಮಾದರಿ, ಶಿಸ್ತು, ಶ್ರದ್ಧೆ ಮತ್ತು ಸಮಯಪ್ರಜ್ಞೆಗೆ ಹೆಸರಾಗಿದ್ದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರು ರಾಷ್ಟçದ ರಕ್ಷಣಾ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು ಪ್ರತಿಯೊಬ್ಬರಲ್ಲಿಯೂ ರಾಷ್ಟç ಮೊದಲು ಎಂಬುದು ಮೊಳಗಬೇಕು ಎಂದು ತಿಳಿಸಿದರು.

ಮಡಿಕೇರಿ ಶಾಸಕ ಡಾ. ಮಂಥರ್ ಗೌಡ ಮಾತನಾಡಿ, ಕಾರ್ಯಪ್ಪ ಅವರನ್ನು ನಿತ್ಯ ಸ್ಮರಿಸಬೇಕು. ಅವರ ತ್ಯಾಗ, ಆದರ್ಶ ಪಾಲನೆ ಮಾಡಬೇಕು. ಕಾರ್ಯಪ್ಪ ಅವರು ಭಾರತ ಸೇನೆಗೆ ಹೆಮ್ಮೆ ತಂದಿದ್ದಾರೆ. ಹಲವು ರಸ್ತೆಗಳಿಗೆ ಅವರ ಹೆಸರಿದೆ. ಅವರ ಹೆಸರು ಚಿರಸ್ಥಾಯಿಗೊಳಿಸುವ ಕೆಲಸ ಎಲ್ಲರೂ ಮಾಡಬೇಕು ಎಂದು ತಿಳಿಹೇಳಿದರು.

ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ದೇಶ ಕಂಡ ಮಹಾನ್ ಶಕ್ತಿ ಫೀ.ಮಾ ಕಾರ್ಯಪ್ಪ ಅವರಾಗಿದ್ದಾರೆ. ಅವರ ಸ್ಮರಣೆ ದಿನನಿತ್ಯ ನಡೆಯಬೇಕು. ಅವರ ಸಮಯಪಾಲನೆ, ಶಿಸ್ತು ಅಳವಡಿಸಿಕೊಳ್ಳಬೇಕು. ದೇಶದ ಬಗೆಗಿನ ಅಭಿಮಾನ ನಾವೆಲ್ಲ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, ಕಾರ್ಯಪ್ಪ ಸೇರಿದಂತೆ ಸೇನಾ ನಾಯಕರು ಜನಿಸಿದ ಜಿಲ್ಲೆಯಲ್ಲಿ ಸೇವೆ ಮಾಡುತ್ತಿರುವುದು ಹೆಮ್ಮೆಯ ವಿಚಾರ. ಮೊದಲು ಭಾರತೀಯ ಎಂಬುದು ಮರೆಯಬಾರದು. ಅವರು ಇಲ್ಲದಿದ್ದರು ಅವರ ಸ್ಫೂರ್ತಿದಾಯಕ ಬದುಕು ಜೀವಂತವಾಗಿದೆ. ಕೊಡಗು ಸೇನೆಗೆ ಅಪಾರ

(ಮೊದಲ ಪುಟದಿಂದ) ಕೊಡುಗೆ ನೀಡಿದ ಜಿಲ್ಲೆಯಾಗಿದೆ ಎಂದ ಅವರು, ರೋಹನ್ ಬೋಪಣ್ಣ, ಜೋಷ್ನಾ ಚಿಣ್ಣಪ್ಪಗೆ ಪದ್ಮಶ್ರೀ ದೊರೆತಿರುವುದು ಹೆಮ್ಮೆಯ ವಿಚಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮೊದಲು ಗಣ್ಯರು ಕಾರ್ಯಪ್ಪ ಪ್ರತಿಮೆಗೆ ಹೂಗುಚ್ಛ ಇಟ್ಟು ಗೌರವ ವಂದನೆ ಸಲ್ಲಿಸಿ ಸ್ಮರಣೆ ಮಾಡಿದರು.

ಈ ಸಂದರ್ಭ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವರ್ಣಿತ್ ನೇಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ, ಮಡಿಕೇರಿ ತಹಶೀಲ್ದಾರ್ ಪ್ರವೀಣ್ ಕುಮಾರ್, ನಗರಸಭೆ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಸದಸ್ಯೆ ಸಬಿತಾ, ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಸಿ. ಸತೀಶ್, ಸೈನಿಕ ಶಾಲೆ ಪ್ರಾಂಶುಪಾಲ ಕರ್ನಲ್ ಅಮರ್‌ಜಿತ್ ಸಿಂಗ್, ಜಿಲ್ಲಾ ಎನ್.ಸಿ.ಸಿ. ಕಮಾಂಡಿAಗ್ ಅಧಿಕಾರಿ ಜಫ್ರ‍್ರಿನ್ ಅರಾನ್ಹಾ, ಫೀ.ಮಾ. ಕಾರ್ಯಪ್ಪ ಕಾಲೇಜು ಪ್ರಾಂಶುಪಾಲ ಮೇಜರ್ ಡಾ. ರಾಘವ, ಕೊಡವ ಸಮಾಜದ ಅಧ್ಯಕ್ಷ ಮಂಡುವAಡ ಮುತ್ತಪ್ಪ, ನಿರ್ದೇಶಕ ಮಂಡೀರ ಸದಾಮುದ್ದಪ್ಪ, ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ, ಸ್ಕೌಟ್ಸ್ ಮತ್ತು ಗೈಡ್ಸ್ನ ಜಿಲ್ಲಾ ಪ್ರಧಾನ ಆಯುಕ್ತ ಕೆ.ಟಿ. ಬೇಬಿ ಮ್ಯಾಥ್ಯೂ, ಜಾನಪದ ಪರಿಷತ್ತು ಮಡಿಕೇರಿ ತಾಲೂಕು ಘಟಕದ ಅಧ್ಯಕ್ಷ ಅನಿಲ್ ಎಚ್.ಟಿ, ಕೂಡಿಗೆ ಸೈನಿಕ ಶಾಲೆಯ ಕನ್ನಡ ಉಪನ್ಯಾಸಕ, ಜಿ.ಕೆ. ಮಂಜಪ್ಪ, ಬಿಪಿನ್ ಅಪ್ಪಚ್ಚು, ಫೀ,ಮಾ. ಕಾರ್ಯಪ್ಪ ಅಭಿಮಾನಿಗಳ ಸಂಘದ ಅಧ್ಯಕ್ಷ ಮುನೀರ್ ಮಾಚರ್ ಸೇರಿದಂತೆ ಇನ್ನಿತರರು ಹಾಜರಿದ್ದರು. ಬೆಂಗಳೂರು ಕೊಡವ ಸಮಾಜದ ವತಿಯಿಂದ ವಸಂತನಗರದ ಕಂಟೋನ್ಮೆAಟ್‌ನಲ್ಲಿರುವ ಕಾರ್ಯಪ್ಪ ಪ್ರತಿಮೆ ಎದುರು ಪುಷ್ಪಾರ್ಚನೆಯೊಂದಿಗೆ ಗೌರವ ನಮನ ಸಲ್ಲಿಸಲಾಯಿತು.

ಕೊಡವ ಸಮಾಜದ ಅಧ್ಯಕ್ಷ ಕರವಟ್ಟೀರ ಪೆಮ್ಮಯ್ಯ, ಉಪಾಧ್ಯಕ್ಷೆ ಪಾಂಡAಡ ಕಮಲ, ಕಾರ್ಯದರ್ಶಿ ಲೆ|| ಕ. ಚಿರಿಯಪಂಡ ವಿವೇಕ್ ಮುತ್ತಣ್ಣ ಸೇರಿದಂತೆ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಮುಖ್ಯ ಅತಿಥಿಗಳಾಗಿ ಮೇಜರ್ ಜನರಲ್ ಮುಕ್ಕಾಟಿರ ದೇವಯ್ಯ ಭಾಗವಹಿಸಿದ್ದರು. ಪುಷ್ಪ ನಮನದ ಬಳಿಕ ಕೊಡವ ಸಮಾಜದಲ್ಲಿ ಕೊಡವ ಸಾಂಸ್ಕೃತಿಕ ದಿನ ಕಾರ್ಯಕ್ರಮ ಜರುಗಿತು.ಮೈಸೂರಿನ ಫೀ.ಮಾ. ಕಾರ್ಯಪ್ಪ ವೃತ್ತದಲ್ಲಿನ ಪ್ರತಿಮೆ ಎದುರು ಮೈಸೂರು ಕೊಡವ ಸಮಾಜದ ನೇತೃತ್ವದಲ್ಲಿ ಸೇನಾನಿಗೆ ಪುಷ್ಪಾರ್ಚನೆಯೊಂದಿಗೆ ಗೌರವ ಸೂಚಿಸಲಾಯಿತು. ಈ ಸಂದರ್ಭದಲ್ಲಿ ಚಾಮರಾಜ ಕ್ಷೇತ್ರದ ಶಾಸಕ ಹರೀಶ್ ಗೌಡ, ಕೃಷ್ಣರಾಜ ಕ್ಷೇತ್ರದ ಶಾಸಕ ಶ್ರೀವತ್ಸ, ವಿಧಾನಪರಿಷತ್ ಸದಸ್ಯರಾದ ಮಂಜೇಗೌಡ, ಮಾಜಿ ಶಾಸಕ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ಒ. ನಾಗೇಂದ್ರ, ಮಾಜಿ ಮೇಯರ್ ರವಿಕುಮಾರ್, ನಗರಪಾಲಿಕೆ ಸದಸ್ಯ ಮಾಳೇಟಿರ ಸುಬ್ಬಯ್ಯ, ಕೊಡವ ಸಮಾಜದ ಅಧ್ಯಕ್ಷ ಪೊಂಜಾAಡ ಗಣಪತಿ, ಕೊಡವ ಸಮಾಜ ಕಲ್ಚರಲ್ ಮತ್ತು ಸ್ಪೋರ್ಟ್ಸ್ ಶ್ರೀವತ್ಸ, ವಿಧಾನಪರಿಷತ್ ಸದಸ್ಯರಾದ ಮಂಜೇಗೌಡ, ಮಾಜಿ ಶಾಸಕ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ಒ. ನಾಗೇಂದ್ರ, ಮಾಜಿ ಮೇಯರ್ ರವಿಕುಮಾರ್, ನಗರಪಾಲಿಕೆ ಸದಸ್ಯ ಮಾಳೇಟಿರ ಸುಬ್ಬಯ್ಯ, ಕೊಡವ ಸಮಾಜದ ಅಧ್ಯಕ್ಷ ಪೊಂಜಾAಡ ಗಣಪತಿ, ಕೊಡವ ಸಮಾಜ ಕಲ್ಚರಲ್ ಮತ್ತು ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಕುಟ್ಟಿಮಾಡ ಮುತ್ತಪ್ಪ, ಕಾರ್ಯಪ್ಪ ಅಭಿಮಾನಿ ಬಳಗದ ಅಧ್ಯಕ್ಷ ನಾಯಕಂಡ ತಿಮ್ಮಯ್ಯ, ಕೊಡಗು ಕಾವೇರಿ ಮಹಿಳಾ ಸಂಘದ ಅಧ್ಯಕ್ಷೆ ಪೊಂಜಾAಡ ಲೌಲಿ ಅಪ್ಪಯ್ಯ ಸೇರಿದಂತೆ ಕೊಡವ ಸಮಾಜ, ಕ್ಲಬ್‌ನ ಪದಾಧಿಕಾರಿಗಳು, ಮಾಜಿ ಸೈನಿಕರು ಪಾಲ್ಗೊಂಡಿದ್ದರು.ಇAದಿನ ಯುವಪೀಳಿಗೆಗೆ ಚಿತ್ರತಾರೆಯರು, ಕ್ರಿಕೆಟಿಗರು, ಭ್ರಷ್ಟ ರಾಜಕಾರಣಿಗಳೇ ಆದರ್ಶಪ್ರಾಯ ರಾಗುತ್ತಿದ್ದಾರೆಯೇ ವಿನಾ ದೇಶಕ್ಕಾಗಿ ಹೋರಾಡುವ ಸೈನಿಕರನ್ನು ಯುವಜನಾಂಗ ಮರೆಯುತ್ತಿದೆ ಎಂದು ನಿವೃತ್ತ ಏರ್ ಮಾರ್ಷಲ್ ಕೆ.ಸಿ. ನಂದಕಾರ್ಯಪ್ಪ ವಿಷಾದಿಸಿದರು.

ಮಡಿಕೇರಿಯಲ್ಲಿನ ಫೀಲ್ಡ್ ಮಾರ್ಷಲ್ ಕೆ.ಸಿ. ಕಾರ್ಯಪ್ಪ ಅವರ ನಿವಾಸ ರೋಶನಾರದಲ್ಲಿರುವ ಕಾರ್ಯಪ್ಪ ಸಮಾಧಿ ಸ್ಥಳದಲ್ಲಿ ಮಾತನಾಡಿದರು. ಯುವಪೀಳಿಗೆಗೆ ಸೈನಿಕರ ದೇಶಸೇವೆಯನ್ನು ಪರಿಣಾಮಕಾರಿಯಾಗಿ ತಿಳಿಹೇಳುವ ಅನಿವಾರ್ಯತೆ ಹಿಂದೆAದಿಗಿAತ ಹೆಚ್ಚಾಗಿದೆ ಎಂದರು.

ಮಾದಾಪುರದ ಶ್ರೀಮತಿ ಡಿ.ಚೆನ್ನಮ್ಮ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಿವೃತ್ತ ಕರ್ನಲ್ ಬಿ.ಜಿ.ವಿ. ಕುಮಾರ್ ಮಾತನಾಡಿ, ದೇಶಕ್ಕಾಗಿ ಕಾರ್ಯಪ್ಪ ಅವರ ಕರ್ತವ್ಯಪರತೆಯನ್ನು ಕೊಂಡಾಡಿದರು.

ಫೀಲ್ಡ್ ಮಾರ್ಷಲ್ ಕೆ.ಸಿ. ಕಾರ್ಯಪ್ಪ ಅವರ ಮಕ್ಕಳಾದ ನಂದಾ ಕಾರ್ಯಪ್ಪ, ನಳಿನಿ ಕಾರ್ಯಪ್ಪ ಸಮಾಧಿ ಸ್ಥಳದಲ್ಲಿ ದೀಪ ಬೆಳಗಿ ಗೌರವ ನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ರಾದ ನಾಪೋಕ್ಲುವಿನ ಅಂಕುರ್ ಪಬ್ಲಿಕ್ ಶಾಲಾ ವಿದ್ಯಾರ್ಥಿನಿ ಅಮ್ ಅಬೀಬಾ ಪಿ.ಎಂ. ಅವರಿಗೆ ಏರ್ ಮಾರ್ಷಲ್ ಕಾರ್ಯಪ್ಪ ಮತ್ತು ಮೀನಾ ಕಾರ್ಯಪ್ಪ ಟ್ರೋಫಿ ವಿತರಿಸಿದರು. ವಿದ್ಯಾರ್ಥಿನಿ ಅಕ್ಷರ ಟಿ.ಅಪ್ಪಣ್ಣ ಈ ಸಂದರ್ಭ ಫೀಲ್ಡ್ ಮಾರ್ಷಲ್ ಜೀವನ ಕುರಿತಾಗಿ ಮಾತನಾಡಿದರು.

ಕೊಡಗು ವಿದ್ಯಾಲಯದ ಶಿಕ್ಷಕಿಯರಾದ ಅಲೆಮಾಡ ಚಿತ್ರ ನಂಜಪ್ಪ, ಪ್ರತಿಭಾಶೇಟ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ಕಾರ್ಯಪ್ಪ ಅವರಿಗೆ ಪ್ರಿಯವಾಗಿದ್ದ ಭಜನೆ, ದೇಶಭಕ್ತಿಗೀತೆಗಳನ್ನು ಹಾಡಿದರು. ಕೊಡಗು ವಿದ್ಯಾಲಯದ ಆಡಳಿತ ವ್ಯವಸ್ಥಾಪಕ ರವಿ ಹಾಜರಿದ್ದರು. ಪೊನ್ನಂಪೇಟೆ : ಗೋಣಿಕೊಪ್ಪಲು ಕಾವೇರಿ ಕಾಲೇಜು ಎನ್ ಸಿ ಸಿ ಘಟಕ ಮತ್ತು ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಫೋರಂ ವತಿಯಿಂದ ಕಾವೇರಿ ಕಾಲೇಜು ಆವರಣದಲ್ಲಿರುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರ ಜೋಡಿ ಪ್ರತಿಮೆಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಜನ್ಮ ದಿನವನ್ನು ಆಚರಿಸಲಾಯಿತು. ಈ ಸಂದರ್ಭ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹಿರಿಯ ವೈದ್ಯರಾದ ಡಾ. ಕಾಳಿಮಾಡ ಶಿವಪ್ಪ ಮಾತನಾಡಿ, ಕಾವೇರಿ ಮಣ್ಣಿನಲ್ಲಿ ಜನಿಸಿದ ಕಾರ್ಯಪ್ಪ ನವರು ಕೊಡಗಿನ ಕೀರ್ತಿಯನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದರು. ಭಾರತೀಯ ಸೇನೆಯಲ್ಲಿ ಶಿಸ್ತನ್ನು ಮೂಡಿಸಿದ ಮಹಾನುಭಾವ ಕಾರ್ಯಪ್ಪನವರು, ಶಿಸ್ತಿನೊಂದಿಗೆ ಸಮಯಪಾಲನೆಗೆ ಅತ್ಯಂತ ಮಹತ್ವವನ್ನು ಕೊಡುತ್ತಿದ್ದರು. ಅಪ್ರತಿಮ ದೇಶ ಪ್ರೇಮಿಯಾಗಿದ್ದ ಕಾರ್ಯಪ್ಪ ಅವರ ಬದುಕಿನ ರೀತಿ ಇಂದಿನ ಯುವ ಜನತೆಗೆ ದಾರಿದೀಪವಾಗಿದೆ. ಅವರ ಜೀವನ ಚರಿತ್ರೆಯನ್ನು ಓದುವ ಮೂಲಕ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ರಾಷ್ಟ್ರ ರಕ್ಷಣೆಗೆ ಕಂಕಣಬದ್ದರಾಗಿರಬೇಕು ಎಂದರು.

ಈ ಸಂದರ್ಭ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಜನರಲ್ ತಿಮ್ಮಯ್ಯ ಫೋರಂನ ಉಪಾಧ್ಯಕ್ಷ ಮಾಚಿಮಾಡ ರವೀಂದ್ರ, ಸಮಾಜ ಸೇವಕ ಮುರುಗೇಶ್, ಗೋಣಿಕೊಪ್ಪಲು ಇಗ್ಗುತಪ್ಪ ಸಂಘದ ಅಧ್ಯಕ್ಷ ಅಜ್ಜಿಕುಟ್ಟಿರ ದೇವಯ್ಯ, ಎನ್‌ಸಿಸಿ ಅಧಿಕಾರಿಗಳಾದ ಲೆಫ್ಟಿನೆಂಟ್ ಎಂ.ಆರ್. ಅಕ್ರಮ್, ಲೆಫ್ಟಿನೆಂಟ್. ಐ.ಡಿ. ಲೇಪಾಕ್ಷಿ, ಕನ್ನಡ ಉಪನ್ಯಾಸಕಿ ಎಸ್.ಎಂ. ರಜನಿ, ಸ್ಥಳೀಯರು ಹಾಗೂ ಎನ್‌ಸಿಸಿ ಕೆಡೆಟ್‌ಗಳು ಇದ್ದರು.

ಎನ್‌ಸಿಸಿ ಕೆಡೆಟ್ ಪುಣ್ಯ ಚೋಂದಮ್ಮ ಫೀ.ಮಾ. ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕ ಮಾತನಾಡಿದರು. ದೀಪ ಪ್ರಾರ್ಥಿಸಿ, ಮನ ಕೆ.ಆರ್. ಸ್ವಾಗತಿಸಿ, ಮಾಚಿಮಾಡ ರವೀಂದ್ರ ವಂದಿಸಿದರು.