ಜ. ೨೮: ತಮಿಳುನಾಡಿನ ದೇಗುಲವೊಂದರ ಪುನರ್ ಪ್ರತಿಷ್ಠಾಪನೆಗಾಗಿ ಭಕ್ತಾದಿಗಳು, ದೇವಸ್ಥಾನÀ ಆಡಳಿತ ಮಂಡಳಿ ಸದಸ್ಯರು ಭಕ್ತಿ ಭಾವದಿಂದ ಕಾವೇರಿ ತೀರ್ಥವನ್ನು ಕೊಂಡೊಯ್ದಿದ್ದಾರೆ. ತಲಕಾವೇರಿಗೆ ಇಂದು ಆಗಮಿಸಿದ ತಮಿಳುನಾಡಿನ ೩೫೦ಕ್ಕೂ ಹೆಚ್ಚು ಭಕ್ತರು ಪ್ರತಿಷ್ಠಾಪನಾ ಕಾರ್ಯಕ್ರಮ ಹಾಗೂ ಬ್ರಹ್ಮಕಲಶಾಭಿಷೇಕಕ್ಕೆ ಕಾವೇರಿ ತೀರ್ಥವನ್ನು ಸಂಗ್ರಹಿಸಿದ್ದಾರೆ. ತಮಿಳುನಾಡಿನ ತಿರುಪುರ ಜಿಲ್ಲೆಯಲ್ಲಿರುವ ೧೬ನೇ ಶತಮಾನದ ಶಿವ ದೇವಾಲಯದ ಬ್ರಹ್ಮಕಲಶಾಭಿಷೇಕಕ್ಕೆ ಸಂಗ್ರಹಿಸಿದ ಪವಿತ್ರ ತೀರ್ಥವನ್ನು ಬಳಸಲಾಗುವುದು ಎಂದು ತಿಳಿಸಿದ್ದಾರೆ.
ಅವಿನಾಶಿ ಲಿಂಗೇಶ್ವರ ದೇವಾಲಯವನ್ನು ಕರುನೈಯಾತ್ತಲ್ ದೇವಾಲಯ ಎಂದೂ ಕರೆಯುತ್ತಾರೆ, ಇದು ತಿರುಪುರದಲ್ಲಿರುವ ೧೬ನೇ ಶತಮಾನದ ದೇವಾಲಯವಾಗಿದೆ. ಈ ದೇವಾಲಯವನ್ನು ಚೋಳ ರಾಜವಂಶದ ಅವಧಿಯಲ್ಲಿ ನಿರ್ಮಿಸಲಾಯಿತು ಎಂದು ಇತಿಹಾಸದ ಉಲ್ಲೇಖವಿದೆ. ದೇವಾಲಯವು
(ಮೊದಲ ಪುಟದಿಂದ) ತಮಿಳುನಾಡು ಸರ್ಕಾರದ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಅಧೀನದಲ್ಲಿದ್ದು ಸಂಬAಧಿತ ಸಚಿವರು ಹಾಗೂ ಗೃಹ ಸಚಿವರು ಬ್ರಹ್ಮ ಕಲಶಕ್ಕೆ ಕಾವೇರಿ ತೀರ್ಥವನ್ನು ಮಾತ್ರ ಬಳಸಬೇಕು ಎಂದು ನಿರ್ದೇಶಿಸಿದ್ದ ಹಿನ್ನೆಲೆಯಲ್ಲಿ ದೇವಾಲಯ ಆಡಳಿತ ಮಂಡಳಿ ಮತ್ತು ಭಕ್ತಾದಿಗಳು ತಲಕಾವೇರಿಗೆ ಆಗಮಿಸಿದ್ದರು. ಬಹುತೇಕ ಮಹಿಳೆಯರೇ ಇದ್ದು ತೀರ್ಥವನ್ನು ಇಂದು ಅನೇಕ ವಾಹನಗಳಲ್ಲಿ ತಮಿಳುನಾಡುವಿಗೆ ಕೊಂಡೊಯ್ದರು.
ಸರಕಾರಿ ಧಾರ್ಮಿಕ ಸಂಸ್ಥೆಯೊAದಿಗೆ ಭಕ್ತಾದಿಗಳೂ ಕೈ ಜೋಡಿಸಿದ್ದು ಅವಿನಾಶಿ ಶಿವ ದೇಗುಲವನ್ನು ರೂ. ೨೫ ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಲಾಗಿದೆ ಎಂದು ದೇವಾಲಯದ ಜೀರ್ಣೋದ್ಧಾರ ಸಮಿತಿಯ ಸದಸ್ಯರಲ್ಲೊಬ್ಬರಾದ ಅರುಣಾಚಲಂ ಅವರು “ಶಕ್ತಿ” ಗೆ ತಿಳಿಸಿದರು. ದೇವಾಲಯದಲ್ಲಿ ಮುಂದಿನ ತಿಂಗಳು ‘ಕುಂಭಾಭಿಷೇಕ’ ನಡೆಯಲಿದೆ.
‘ಬ್ರಹ್ಮಕಲಶೋತ್ಸವ’ದಲ್ಲಿ ತಲಕಾವೇರಿಯ ಪವಿತ್ರ ತೀರ್ಥವನ್ನು ಮಾತ್ರ ಬಳಸಲಾಗುವುದು ಎಂದು ಅವರು ಮಾಹಿತಿಯಿತ್ತರು. ದೇವಾಲಯದ ೩೫೦ ಕ್ಕೂ ಹೆಚ್ಚು ಭಕ್ತರೊಂದಿಗೆ ಇಂದು ತೀರ್ಥವನ್ನು ಸಂಗ್ರಹಿಸಲು ತಲಕಾವೇರಿಗೆ ಆಗಮಿಸಿದ್ದರು. ಮಹಿಳಾ ಭಕ್ತರು ತಲಕಾವೇರಿಯ ತೀರ್ಥವನ್ನು ಬಿಂದಿಗೆಗಳಲ್ಲಿ ಸಾಗಿಸಿದರು.