ಮುಳ್ಳೂರು, ಜ. ೨೪: ಬೇಸಾಯಕ್ಕೆ ಟ್ರಾö್ಯಕ್ಟರ್, ಟಿಲ್ಲರ್ ಯಂತ್ರೋಪಕರಣಗಳ ಬಳಕೆಯಿಂದ ಜಾನುವಾರುಗಳ ಸಾಕಾಣಿಕೆ ಕಡಿಮೆಯಾಗಿರುವುದರಿಂದ ಜಾತ್ರೋತ್ಸವಗಳ ಹಿಂದಿನ ವೈಭವವನ್ನು ಕಳೆದುಕೊಳ್ಳುತ್ತಿದೆ ಎಂದು ಕೊಡ್ಲಿಪೇಟೆ ಕಲ್ಲುಮಠದ ಪೀಠಾಧ್ಯಕ್ಷ ಶ್ರೀ ಮಹಾಂತ ಸ್ವಾಮೀಜಿ ಅಭಿಪ್ರಾಯಪಟ್ಟರು.

ಅವರು ಸಮಿಪದ ಗುಡುಗಳಲೆ ಜಾತ್ರಾ ಮೈದಾನದಲ್ಲಿ ಪ್ರಾರಂಭ ಗೊಂಡಿರುವ ೮೦ನೇ ವರ್ಷದ ಗುಡುಗಳಲೆ ಜಯದೇವ ಜಾನುವಾರುಗಳ ಜಾತ್ರೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಇಂದು ಆಧುನಿಕ ಬದಲಾವಣೆಯಿಂದ ಗ್ರಾಮೀಣ ಪ್ರದೇಶಗಳಲ್ಲಿ ಯುವಕರು ಡಾಕ್ಟರ್, ಇಂಜಿನಿಯರ್‌ಗಳಾಗಿ ಪಟ್ಟಣ ಸೇರಿರುವುದರಿಂದ ಮನೆಗಳು ವೃದ್ಧಾಶ್ರಮಗಳಾಗುತ್ತಿದೆ. ರೈತರು ಯಂತ್ರೋಪಕರಣಗಳನ್ನು ಬಳಸಿ ವ್ಯವಸಾಯ ಮಾಡುತ್ತಿರುವುದರಿಂದ ಜಾನುವಾರುಗಳ ಸಾಕಾಣಿಕೆ ಮರೆಯಾಗುತ್ತಿವೆ. ರೈತರು ಹಿಂದಿನ ಕಾಲದಂತೆ ಜಾನುವಾರುಗಳನ್ನು ಬಳಸಿ ಬಸವಣ್ಣನವರು ಹೇಳಿದಂತೆ ಕಾಯಕವೇ ಕೈಲಾಸ ಎಂಬAತೆ ಶ್ರಮವಹಿಸಿ ವ್ಯವಸಾಯ ಮಾಡಲು ಪ್ರಯತ್ನಿಸಿದರೆ ಜಾನುವಾರುಗಳ ಸಂಖ್ಯೆಯು ವೃದ್ಧಿಯಾಗುತ್ತದೆ ಎಂದರು. ಇತ್ತೀಚಿನ ವರ್ಷಗಳಲ್ಲಿ ಗುಡುಗಳಲೆ ಜಯದೇವ ಜಾನುವಾರುಗಳ ಜಾತ್ರೆಯು ಕಳೆÀಗುಂದುತ್ತಿದ್ದು ಈ ನಿಟ್ಟಿನಲ್ಲಿ ಜಾತ್ರಾ ಸಮಿತಿಯವರು ಜಾತ್ರೆ ಹೆಸರಿನಲ್ಲಿ ರಥೋತ್ಸವವನ್ನು ಹಮ್ಮಿಕೊಂಡರೆ ಜಾತ್ರೆಯ ವೈಭವ ಮರುಕಳಿಸಲು ಸಾಧ್ಯವಾಗಬಹುದು ಎಂದು ಸಲಹೆ ನೀಡಿದರು.

ಮುದ್ದಿನಕಟ್ಟೆ ಮಠಾದೀಶ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮನುಷ್ಯನ ದುರಾಸೆಯಿಂದ ವಿಶ್ವಾಸ ಎಂಬುದು ಮರೆಯಾಗುತ್ತಿದೆ. ಇಂದು ರೈತರು ದೇಶೀಯ ತಳಿಯ ಹಸುಗಳನ್ನು ಸಾಕಾಣಿಕೆ ಮಾಡುತ್ತಿಲ್ಲ. ಹೆಚ್ಚು ಹಣ ಸಂಪಾದನೆ ತಂದುಕೊಡುವAತಹ ವಿದೇಶಿ ತಳಿಯ ಹಸುಗಳನ್ನು ಸಾಕಾಣಿಕೆ ಮಾಡುತ್ತಿರುವುದರಿಂದ ದೇಶೀಯ ತಳಿಯ ಹಸುಗಳ ಸಾಕಾಣಿಕೆ ಕಡಿಮೆಯಾಗುತ್ತಿದೆ ಎಂದರು. ಜಾನುವಾರುಗಳಿಂದ ಎಲ್ಲಾ ರೀತಿಯಲ್ಲೂ ಉಪಯೋಗವಿದ್ದು, ಇದರ ಸಗಣಿಯಿಂದ ಸಾವಯವ ಗೊಬ್ಬರ, ಉತ್ತಮ ಆಮ್ಲಜನಕ ದೊರೆಯುತ್ತದೆ. ಈ ನಿಟ್ಟಿನಲ್ಲಿ ಜಾನುವಾರುಗಳ ಸಂಖ್ಯೆ ವೃದ್ಧಿಗೊಳ್ಳಬೇಕಿದೆ ಎಂದ ಅವರು ಇಂದಿನ ಯುವಕರು ಆಧುನಿಕತೆಗೆ ಮಾರುಹೋಗಿ ತನ್ನ ಬದುಕನ್ನು ಕಳೆದುಕೊಳ್ಳುತ್ತಿರುವುದು ದುರಂತ. ಭೂಮಿಯ ಸ್ಪರ್ಶಕ್ಕಿಂತ ಕಾಂಕ್ರಿಟ್ ಸ್ಪರ್ಶವೆ ಹೆಚ್ಚಾಗುತ್ತಿರುವುದರಿಂದ ಅವರ ಆಯುಷ್ಯ ಸಹ ಕಮ್ಮಿಯಾಗುತ್ತಿದೆ ಎಂದು ವಿಷಾದಿಸಿದರು.

(ಮೊದಲ ಪುಟದಿಂದ)

ಜಾತ್ರೆಯನ್ನು ಶನಿವಾರಸಂತೆ ಸಿಐ ಚಂದ್ರಶೇಖರ್ ಉದ್ಘಾಟಿಸಿದರು. ಜಾತ್ರಾ ಸಮಿತಿ ಅಧ್ಯಕ್ಷ ವಿನಿತ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಶಿಡುಗಳಲೆ ಮಠದ ಶ್ರೀ ಇಮ್ಮಡಿ ಶಿವಲಿಂಗ ಸ್ವಾಮೀಜಿ, ಹಂಡ್ಲಿ ಗ್ರಾ.ಪಂ. ಅಧ್ಯಕ್ಷೆ ಸುಧಾ ಈರೇಶ್, ಗ್ರಾ.ಪಂ. ಉಪಾಧ್ಯಕ್ಷ ಹೆಚ್.ಎಸ್. ಅಶೋಕ್ ಪ್ರಮುಖರಾದ ಡಿ.ಬಿ. ಸೋಮಪ್ಪ, ಡಿ.ಬಿ. ಧರ್ಮಪ್ಪ, ಪೂರ್ಣಿಮಾ ಕಿರಣ್, ವೀರೇಂದ್ರ ಕುಮಾರ್, ಹಾಲಪ್ಪ, ವಿನೂತ್ ಶಂಕರ್, ಉಮಾಶಂಕರ್, ತಾ.ಪಂ. ಮಾಜಿ ಸದಸ್ಯ ಕುಶಾಲಪ್ಪ, ಜಾತ್ರಾ ಸಮಿತಿ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.

ಜಾತ್ರೆ ಪ್ರಯುಕ್ತ ಬೆಳಿಗ್ಗೆ ೯ ಗಂಟೆಯಿAದ ಗುಡುಗಳಲೆ ಜಾತ್ರಾ ಮೈದಾನದಲ್ಲಿರುವ ಬಸವೇಶ್ವರ ದೇವರ ಅಡ್ಡಪಲ್ಲಕ್ಕಿ ಮೆರವಣಿಗೆಯು ಶನಿವಾರಸಂತೆ ಬನ್ನಿಮಂಟಪದಿAದ ಮುಖ್ಯ ರಸ್ತೆ ಮೂಲಕ ಸಾಗಿ ಗುಡುಗಳಲೆ ಜಂಕ್ಷನ್‌ನಲ್ಲಿರುವ ಬಸವೇಶ್ವರ ದೇವಾಲಯದ ಸುತ್ತ ಪ್ರದಕ್ಷಣೆ ಹಾಕಿ ಗುಡುಗಳಲೆ ಜಾತ್ರಾ ಮೈದಾನದ ದ್ವಾರವನ್ನು ಪ್ರವೇಶಿಸಿದ ನಂತರ ಬಸವೇಶ್ವರ ದೇವಾಲಯದಲ್ಲಿ ಕೊನೆಗೊಂಡಿತು.

ಸಾಂಕೇತಿಕವಾಗಿ ಅಲಂಕರಿಸಿದ ಎತ್ತುಗಳು, ನಂದಿ ಧ್ವಜ, ವೀರಗಾಸೆ ಕುಣಿತ, ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ನಡೆಸಲಾಯಿತು.

-ಭಾಸ್ಕರ್ ಮುಳ್ಳೂರು