ಮಡಿಕೇರಿ, ಜ. ೨೪: ಮಡಿಕೇರಿ ಮೂಲದ ಪೆಮ್ಮಚಂಡ ಪುಣ್ಯ ಪೊನ್ನಮ್ಮ ದೆಹಲಿಯಲ್ಲಿ ತಾ. ೨೬ರಂದು ನಡೆಯುವ ಗಣರಾಜ್ಯೋತ್ಸವ ಪೆರೇಡ್ನಲ್ಲಿ ಎನ್.ಸಿ.ಸಿ.ಯ ಅಖಿಲ ಭಾರತ ಯುವತಿಯರ ಪಡೆಯ ಪೆರೇಡ್ ಕಮಾಂಡರ್ ಆಗಿ ಪಾಲ್ಗೊಂಡು ಮುನ್ನಡೆಸಲಿದ್ದಾರೆ.
ಪುಣ್ಯ ಪೊನ್ನಮ್ಮ ಮಡಿಕೇರಿಯ ಪೊಲೀಸ್ ವೃತ್ತನಿರೀಕ್ಷಕ ಅನೂಪ್ ಮಾದಪ್ಪ ಮತ್ತು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಉಪನ್ಯಾಸಕಿ ವಿನಿತ ದೇಚಮ್ಮ ದಂಪತಿಯ ಪುತ್ರಿ.
ಎನ್ಸಿಸಿ ಕೆಡೆಟ್ ಆಗಿ ಹಲವಾರು ಕ್ಯಾಂಪ್ಗಳಲ್ಲಿ ಪಾಲ್ಗೊಂಡು ಅತ್ಯುತ್ತಮ ಸಾಧನೆ ತೋರಿದ್ದಾಳೆ. ಪ್ರಸ್ತುತ ಬೆಂಗಳೂರಿನ ಕ್ರೆöÊಸ್ಟ್ ವಿಶ್ವವಿದ್ಯಾನಿಲಯದಲ್ಲಿ ಮೂರನೇ ವರ್ಷದ ಶಿಕ್ಷಣ ಪಡೆಯುತ್ತಿದ್ದಾಳೆ.