ಪೊನ್ನAಪೇಟೆ, ಜ. ೨೨: ಪೊನ್ನಂಪೇಟೆಯಲ್ಲಿ ಅಕ್ರಮವಾಗಿ ದನದ ಮಾಂಸ ಸಾಗಿಸುತ್ತಿದ್ದ ಅಸ್ಸಾಂ ಮೂಲದ ಮೂವರು ಆರೋಪಿಗಳನ್ನು ಮಾಂಸದ ಸಮೇತ ಪೊನ್ನಂಪೇಟೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.
ಹೈ ಸೊಡ್ಲೂರು ಗ್ರಾಮದ ಕಾಫಿ ತೋಟವೊಂದರಲ್ಲಿ ವಾಸವಾಗಿರುವ ಅಸ್ಸಾಂ ಮೂಲದ ಜಾಕಿರ್ ಹುಸೇನ್ (೨೫), ಅಬ್ದುಲ್ ರಶೀದ್ (೨೯) ಹಾಗೂ ರಾಹುಲ್ ಅಮೀನ್ (೧೯) ಬಂಧಿತ ಆರೋಪಿಗಳು ೩ಐದನೇ ಪುಟಕ್ಕೆ
(ಮೊದಲ ಪುಟದಿಂದ) ಸಂಜೆ ೬.೩೦ ರ ಸಮಯದಲ್ಲಿ ಆಟೋ ಚಾಲಕ ಮಹೇಶ್ ಎಂಬವರನ್ನು ಅಸ್ಸಾಂ ಮೂಲದ ೩ ಜನ ಕಾರ್ಮಿಕರು ಮುಗುಟಗೇರಿಗೆ ಬಾಡಿಗೆಗೆ ಬರುವಂತೆ ಕರೆದಿದ್ದಾರೆ. ನಂತರ ಆಟೋದಲ್ಲಿ ಕುಳಿತ ಮೂವರು ಆಟೋ ನಿಲ್ದಾಣದಿಂದ ಸ್ವಲ್ಪ ದೂರದಲ್ಲಿ ಆಟೋ ನಿಲ್ಲಿಸಿ, ದನದ ಮಾಂಸ ತುಂಬಿದ್ದ ಚೀಲವನ್ನು ಆಟೋಗೆ ಹಾಕಿಕೊಂಡಿದ್ದಾರೆ.
ಆಗ ಆಟೋ ಚಾಲಕನಿಗೆ ಮಾಂಸ ವಾಸನೆ ಬರುತ್ತಿದ್ದ ಕಾರಣ ಅನುಮಾನ ಬಂದು, ಪೊನ್ನಂಪೇಟೆ ಕಾನೂರು ಜಂಕ್ಷನ್ ಬಳಿ ಆಟೋ ನಿಲ್ಲಿಸಿ ಸಂಗಡಿಗರಿಗೆ ವಿಷಯ ತಿಳಿಸಿದ್ದಾರೆ. ಈ ಸಂದರ್ಭ ಹಿಂದು ಸಂಘಟನೆಯ ಕಾರ್ಯಕರ್ತರಾದ ಚೀರಂಡ ಚಂಗಪ್ಪ, ಮುದ್ದಿಯಡ ಮಂಜು ಗಣಪತಿ, ಆಲೆಮಾಡ ನವೀನ್, ಅಡ್ಡಂಡ ನಿಲನ್, ಮತ್ರಂಡ ಕಬೀರ್ ದಾಸ್, ಪಿ.ಆರ್. ಸುಧೀರ್, ಮಹೇಶ್ ಸ್ಥಳಕ್ಕೆ ಆಗಮಿಸಿ ಆರೋಪಿಗಳನ್ನು ಹಿಡಿದು ಘಟನೆ ಬಗ್ಗೆ ಪೊನ್ನಂಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರ ತಂಡ ಸ್ಥಳಕ್ಕೆ ತೆರಳಿ ಆರೋಪಿಗಳನ್ನು ೫೫ ಕೆ.ಜಿ. ಗೋ ಮಾಂಸ ಸಮೇತ ಬಂಧಿಸಿದೆ.
ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ನವೀನ್, ಸಿಬ್ಬಂದಿಗಳಾದ ಮಹದೇಶ್ವರ ಸ್ವಾಮಿ, ವೇಣುಗೋಪಾಲ್, ಸಂತೋಷ್, ನಟರಾಜ್, ಪ್ರವೀಣ್, ಬಾಳಪ್ಪ ನಾಯಕ್, ಉತ್ತಪ್ಪ, ಶೋಭಾ ಪಾಲ್ಗೊಂಡಿದ್ದರು.
- ಚನ್ನನಾಯಕ