ಮಡಿಕೇರಿ, ಜ. ೨೨: ೫೦೦ ವರ್ಷಗಳ ಸುದೀರ್ಘ ಕಾಯುವಿಕೆಯ ಬಳಿಕ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಬಾಲರಾಮ ದೇವರಿಗೆ ಪ್ರಾಣಪ್ರತಿಷ್ಠಾಪನೆಯ ಸುದಿನವನ್ನು ಜಿಲ್ಲೆಯಲ್ಲಿ ಸಂಭ್ರಮದಿAದ ಆಚರಿಸಲಾಯಿತು. ಜಿಲ್ಲೆಯಾದ್ಯಂತ ಶ್ರೀರಾಮನನ್ನು ಸ್ಮರಿಸಿದ ಭಕ್ತಗಣ ಪ್ರಾಣಪ್ರತಿಷ್ಠಾಪನೆಯ ಐತಿಹಾಸಿಕ ಕ್ಷಣವನ್ನು ನೇರಪ್ರಸಾರದಲ್ಲಿ ವೀಕ್ಷಿಸಿ ಪುಳಕಿತರಾದರು.
ಶತ-ಶತಮಾನಗಳ ಕನಸು ಸಾಕಾರಗೊಂಡಿದ್ದು, ಅಯೋಧ್ಯೆರಾಮ ವಿರಾಜಮಾನವಾಗುವ ಕ್ಷಣ ದೇಶಾದ್ಯಂತ ಸಂಚಲನ ಮೂಡಿಸಿತು. ಎಂದೆAದೂ ಕಾಣದ ಉತ್ಸಾಹ, ಸಂತೃಪ್ತಿ ಭಾವ ಈ ರಾಮೋತ್ಸವದ ಮೂಲಕ ಕಂಡುಬAತು.
ಕೊಡಗು ಜಿಲ್ಲೆಯ ಮನೆಮನಗಳಲ್ಲಿ ರಾಮೋತ್ಸವ ಸಂಭ್ರಮಕ್ಕೆ ಕಾರಣವಾಯಿತು. ದೇವಾಲಯ, ಊರು-ಕೇರಿಗಳು ಕೇಸರಿ ತೋರಣ, ಶ್ರೀರಾಮನ ಬೃಹತ್ ಕಲಾಕೃತಿ, ಭಾವಚಿತ್ರಗಳಿಂದ ಕಂಗೊಳಿಸುತಿತ್ತು. ಆಯೋಧ್ಯೆಯಲ್ಲಿ ರಾಮಲಲ್ಲ (ಬಾಲರಾಮ) ನಿಗೆ ಪ್ರಾಣಪ್ರತಿಷ್ಠೆ ಸಂದರ್ಭ ಜಿಲ್ಲೆಯ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನೆರವೇರಿದವು. ಭಜನಾ ತಂಡಗಳು ಶ್ರೀರಾಮನನ್ನು ಸ್ತುತಿಸಿದವು. ಭಕ್ತಸಾಗರ ದೇವಾಲಯಕ್ಕೆ ಆಗಮಿಸಿ ಪೂಜೆಗಳಲ್ಲಿ ಪಾಲ್ಗೊಂಡು ಅಯೋಧ್ಯೆಗೆ ಮರುಪ್ರವೇಶಿಸುವ ರಾಮನಿಗೆ ಇಲ್ಲಿಂದಲೇ ಕೈಮುಗಿದು ಪ್ರಾರ್ಥಿಸಿದರು. ರಾಮೋತ್ಸವದ ಸವಿಘಳಿಗೆಯಲ್ಲಿ ಪಾನಕ, ಪ್ರಸಾದ ವಿತರಿಸಿದ್ದಲ್ಲದೆ ಅನ್ನಸಂತರ್ಪಣೆ ಮೂಲಕ ತಮ್ಮ ಭಕ್ತಿ ತೋರಿದರು. ಮನೆಗಳಲ್ಲಿಯೂ ರಾಮನಿಗೆ ಪೂಜೆ ಸಲ್ಲಿಸಿ, ಅಯೋಧ್ಯೆ ಮಂತ್ರಾಕ್ಷತೆಯನ್ನು ಅರ್ಪಿಸಲಾಯಿತು.
ಬ್ಯಾನರ್, ಬಂಟಿAಗ್ಸ್, ತೋರಣಗಳಿಂದ ಜಿಲ್ಲೆ ಕೇಸರಿಮಯವಾಗಿತ್ತು. ಎಲ್ಲೆಲ್ಲೂ ‘ಜೈ ಶ್ರೀರಾಮ’ ಜಯಘೋಷ ಮೊಳಗಿತು. ಆಟೋ, ಬಸ್, ಕಾರು, ಬೈಕ್ ಸೇರಿದಂತೆ ಎಲ್ಲಾ ರೀತಿಯ ವಾಹನಗಳಲ್ಲಿಯೂ ಕೇಸರಿ ಧ್ವಜ ರಾರಾಜಿಸುತಿತ್ತು. ಖಾಸಗಿ ಬಸ್ಗಳಲ್ಲಿ ದಿನನಿತ್ಯ ರಾಮನ ೩ಆರನೇ ಪುಟಕ್ಕೆ
(ಮೊದಲ ಪುಟದಿಂದ) ಹಾಡುಗಳು ಪ್ರತಿಧ್ವನಿಸಿದವು. ಬೃಹತ್ ಎಲ್.ಇ.ಡಿ. ಪರದೆಯ ಮೂಲಕ ಅಯೋಧ್ಯೆಯಲ್ಲಿ ಪ್ರಾಣಪ್ರತಿಷ್ಠಾಪನೆಯ ಐತಿಹಾಸಿಕ ಕ್ಷಣವನ್ನು ಭಕ್ತಗಣ ಕಣ್ತುಂಬಿಕೊAಡು ಭಾವಪರವಶರಾದರು.
ಇದೇ ಸಂದರ್ಭ ಅಯೋಧ್ಯೆಯಲ್ಲಿ ಕರಸೇವೆಯಲ್ಲಿ ಪಾಲ್ಗೊಂಡವರನ್ನು ವಿವಿಧೆಡೆ ಸನ್ಮಾನಿಸಿ ಗೌರವಿಸಲಾಯಿತು.
ಮಡಿಕೇರಿ ‘ರಾಮಮಯಂ’
ಜಿಲ್ಲಾ ಕೇಂದ್ರ ಮಡಿಕೇರಿ ಸಂಪೂರ್ಣ ರಾಮಮಯವಾಗಿತ್ತು. ಎಲ್ಲಿ ನೋಡಿದರೂ ಕೇಸರಿ ಬಣ್ಣ ಕಂಗೊಳಿಸುತ್ತಿದ್ದರೆ, ಜೈಶ್ರೀರಾಮ್ ಘೋಷಣೆಯ ಮೂಲಕ ಭಕ್ತಿಯ ಅನಾವರಣವಾಯಿತು. ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನೆರವೇರಿದವು. ಹಲವು ದೇವಾಲಯಗಳಲ್ಲಿ ಭಕ್ತಸಾಗರ ಕಂಡುಬAತು.
ನಗರದ ಅಂಜನೇಯ ಸನ್ನಿಧಿ ಆವರಣದಲ್ಲಿ ೨ ಸಾವಿರ ಭಕ್ತಾದಿಗಳು ರಾಮೋತ್ಸವದಲ್ಲಿ ಪಾಲ್ಗೊಂಡು ಮರ್ಯಾದ ಪುರುಷೋತ್ತಮನಿಗೆ ನಮಿಸಿದರು. ರಾಮತಾರಕ ಹೋಮ, ಮಹಾಮಂಗಳಾರತಿ ನಡೆಯಿತು. ವಿಶ್ವ ಹಿಂದೂ ಪರಿಷತ್ತು ಸೇರಿದಂತೆ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೃಹತ್ ಎಲ್.ಇ.ಡಿ. ಪರದೆ ಮೂಲಕ ಆಯೋಧ್ಯೆಯಲ್ಲಿ ನಡೆದ ಪ್ರಾಣಪ್ರತಿಷ್ಠಾಪನೆಯನ್ನು ವೀಕ್ಷಿಸಿದರು. ೨ ಸಾವಿರ ಭಕ್ತಾದಿಗಳಿಗೆ ಅನ್ನದಾನ ಮಾಡಲಾಯಿತು. ಜೊತೆಗೆ ಮಡಿಕೇರಿಯಿಂದ ೧೯೯೦-೯೨ರಲ್ಲಿ ಕರಸೇವೆಯಲ್ಲಿ ಪಾಲ್ಗೊಂಡವರನ್ನು ಇದೇ ವೇಳೆ ಸನ್ಮಾನಿಸಲಾಯಿತು. ಶ್ರೀರಾಮಾಂಜನೇಯ ಭಜನಾ ಮಂಡಳಿಯಿAದ ರಾಮಭಜನೆ ನಡೆಯಿತು.
ಮಾಜಿ ಶಾಸಕ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ತು ಮಾಜಿ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ, ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿಕಾಳಪ್ಪ, ನಗರಸಭೆ ಅಧ್ಯಕೆÀ್ಷ ನೆರವಂಡ ಅನಿತಾ ಪೂವಯ್ಯ, ವೈದ್ಯ ಎಂ.ಜಿ. ಪಾಟ್ಕರ್, ವಿಶ್ವಹಿಂದೂ ಪರಿಷತ್, ಓಂಕಾರ್ ಯುವವೇದಿಕೆ ಪ್ರಮುಖರು, ನಗರಸಭಾ ಸದಸ್ಯರು ಹಾಜರಿದ್ದರು.
ಮಡಿಕೇರಿಯ ಮಲ್ಲಿಕಾರ್ಜುನ ನಗರದ ಕೋದಂಡರಾಮ ದೇವಾಲಯದಲ್ಲಿಯೂ ವಿಶೇಷ ಪೂಜೆಗಳ ಮೂಲಕ ರಾಮೋತ್ಸವ ಆಚರಣೆ ಮಾಡಲಾಯಿತು. ನಿತ್ಯಪೂಜೆಯ ಬಳಿಕ ಶ್ರೀ ವಿಷ್ಣು ಸಹಸ್ರ ನಾಮಾರ್ಚನೆ ನಡೆದು ಪ್ರಸಾದ ವಿತರಿಸಲಾಯಿತು. ನಂತರ ಅಯೋಧ್ಯೆಯಲ್ಲಿ ನಡೆದ ಪ್ರಾಣಪ್ರತಿಷ್ಠಾಪನೆಯ ನೇರಪ್ರಸಾರವನ್ನು ಭಕ್ತಾದಿಗಳು ವೀಕ್ಷಿಸಿದರು. ಮಹಿಳಾ ತಂಡದಿAದ ಭಜನೆ ನಡೆಯಿತು.
ಮಹದೇವಪೇಟೆಯ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ಧಾರ್ಮಿಕ ಕೈಂಕರ್ಯಗಳು ನಡೆದವು. ಪ್ರಾರ್ಥನೆ, ಮಹಾಸಂಕಲ್ಪ, ಗುರುಗಣಪತಿ ಪೂಜೆ, ಕಳಶ ಪ್ರತಿಷ್ಠಾಪನೆ, ಪೂರ್ವಕ, ಶ್ರೀಮಹಾವಿಷ್ಣು ಸಹಿತ ಶ್ರೀರಾಮಚಂದ್ರನಿಗೆ ಶೋಡ, ಶೋಡೋಪಚಾರ ಪೂಜೆ, ವಿಷ್ಣು ಸಹಸ್ರನಾಮ ಪಠಣ, ವಿಷ್ಣು ಸಹಸ್ರನಾಮ ಹೋಮ ನಡೆದು ಜಿ.ಟಿ. ರಾಘವೇಂದ್ರ ರಾವ್ ಅವರು ಧಾರ್ಮಿಕ ಪ್ರವಚನ ನೀಡಿದರು. ಪ್ರಸಾದ ವಿನಿಯೋಗ ನಡೆದು ಶ್ರೀನಿವಾಸ ಕಲ್ಯಾಣ, ದೀಪಾರಾಧನೆ, ಮಹಾಪೂಜೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ಮಡಿಕೇರಿಯ ಶ್ರೀವಿಜಯ ವಿನಾಯಕ ದೇವಾಲಯದಲ್ಲಿ ಶ್ರೀರಾಮನಿಗೆ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀ ವಿಜಯ ವಿನಾಯಕ ಮಹಿಳಾ ಮಂಡಳಿಯಿAದ ಭಜನಾ ಕಾರ್ಯಕ್ರಮ ಹಾಗೂ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನಡೆಯಿತು.
ದೇಚೂರು ಶ್ರೀರಾಮ ವಿದ್ಯಾಗಣಪತಿ ಸನ್ನಿಧಿಯಲ್ಲಿ ವಿಶೇಷ ಪೂಜೆ ನಡೆಯಿತು. ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಕಾಲೇಜು ರಸ್ತೆಯ ಪೇಟೆ ಶ್ರೀರಾಮ ಮಂದಿರದಲ್ಲಿ ವಿಶೇಷ ಪೂಜೆ, ಭಜನೆ ನಡೆಯಿತು. ಕನ್ನಂಡಬಾಣೆಯ ಶ್ರೀದೃಷ್ಠಿ ಗಣಪತಿ ದೇಗುಲದಲ್ಲಿ ಗಣ ಹೋಮ, ಭಜನೆ, ಕರಸೇವಕರಿಗೆ ಸನ್ಮಾನ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ನೇರಪ್ರಸಾರ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು.
ನಗರದ ಸುದರ್ಶನ ಬಡಾವಣೆಯ ಮುನೀಶ್ವರ ದೇವಾಲಯದಲ್ಲಿಯೂ ಹಲವು ವಿಶೇಷ ಕಾರ್ಯಕ್ರಮ ನೆÀರವೇರಿತು. ಪೂಜಾ ಕೈಂಕರ್ಯ ಬಳಿಕ ಭಕ್ತರಿಗೆ ಪ್ರಸಾದ ವಿತರಿಸಿ ಸಾಂಪ್ರದಾಯಿಕ ಉಡುಗೆಯಲ್ಲಿ ಮೆರವಣಿಗೆ ಮೂಲಕ ಆಂಜನೇಯ ದೇವಾಲಯಕ್ಕೆ ತೆರಳಿದರು. ಅಪರಾಹ್ನವೂ ವಿಶೇಷ ಪೂಜೆ, ಸಂಜೆ ಮಹಾಮಂಗಳಾರತಿ ನಡೆದು ರಾಮಮಂದಿರ ಕರಸೇವೆಯಲ್ಲಿ ಪಾಲ್ಗೊಂಡಿದ್ದ ಬಡಾವಣೆಯ ಕರಸೇವಕರಿಗೆ ಸನ್ಮಾನ ಮಾಡಲಾಯಿತು. ಬಳಿಕ ಪುಟಾಣಿ ಮಕ್ಕಳಿಗೆ ಛದ್ಮವೇಷ, ಭಕ್ತಿಗೀತೆ ಗಾಯನ ಸ್ಪರ್ಧೆ ನಡೆದು ರಾತ್ರಿ ಅನ್ನದಾನ ನಡೆಸಲಾಯಿತು.
ನಗರದ ಅಜ್ಜಮಾಡ ದೇವಯ್ಯ ವೃತ್ತದ ಬಳಿ ಶಮಂತ್ ಕ್ಯಾಟರಿಂಗ್ ವತಿಯಿಂದ ಕಾರು, ಆಟೋ ಚಾಲಕ, ಮಾಲೀಕರ ಸಹಕಾರದೊಂದಿಗೆ ೪ ಸಾವಿರ ಜನರಿಗೆ ಅನ್ನದಾನ ಮಾಡಲಾಯಿತು. ಇಸ್ಕಾನ್ ಮಂದಿರದ ಭಕ್ತರಿಂದ ಸಾಮೂಹಿಕ ಭಜನೆ ಮೂಲಕ ರಾಮನ ಸ್ಮರಣೆ ಮಾಡಲಾಯಿತು. ಕಾನ್ವೆಂಟ್ ಜಂಕ್ಷನ್ನಲ್ಲಿ ಆಟೋ ಚಾಲಕರ ವತಿಯಿಂದ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.
ಕಣಿವೆ : ಪುರಾಣ ಪ್ರಸಿದ್ಧ ಶ್ರೀರಾಮಲಿಂಗೇಶ್ವರ ದೇವಾಲಯದಲ್ಲಿ ಅಯೋಧ್ಯೆಯ ಪೂಜಾ ಸಂಭ್ರಮದ ಹಿನ್ನೆಲೆಯಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.
ಸಾಕ್ಷಾತ್ ಶ್ರೀರಾಮನೇ ಶಿವಲಿಂಗ ಪ್ರತಿಷ್ಠಾಪನೆ ಮಾಡಿರುವ ಬಗ್ಗೆ ಐತಿಹ್ಯಗಳಿರುವ ಸನ್ನಿಧಿಯಲ್ಲಿನ ಶಿವಲಿಂಗಕ್ಕೆ ಕಾವೇರಿ ನದಿಯ ಪವಿತ್ರ ಜಲದಿಂದ ಅಭಿಷೇಕಗಳು ನೆರವೇರಿದವು.
ಬಳಿಕ ಮಧ್ಯಾಹ್ನ ಬಗೆಬಗೆಯ ಪುಷ್ಪಾಲಂಕೃತ ದೇವತಾ ಮೂರ್ತಿಗೆ ಮಹಾಮಂಗಳಾರತಿ ನೆರವೇರಿಸಲಾಯಿತು.
ಅಯೋಧ್ಯೆಯ ಮಂದಿರದಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ದೇವಾಲಯದ ಹೊರ ಆವರಣವನ್ನು ಸಂಪೂರ್ಣವಾಗಿ ಕೇಸರಿಮಯಗೊಳಿಸಲಾಗಿತ್ತು.
ದೇವಾಲಯಕ್ಕೆ ನೆರೆಯ ಮೈಸೂರು ಜಿಲ್ಲೆಯ ಕಾವೇರಿ ನದಿಯಂಚಿನ ಗಡಿಗ್ರಾಮಗಳ ನೂರಾರು ಭಕ್ತರು ತೂಗುಸೇತುವೆ ಮಾರ್ಗದಲ್ಲಿ ಧಾವಿಸಿ ಶ್ರೀರಾಮಲಿಂಗೇಶ್ವರ ಕೃಪೆಗೆ ಪಾತ್ರರಾದರು.
ಕಣಿವೆ ಸುತ್ತಲಿನ ಕೂಡಿಗೆ, ಭುವನಗಿರಿ, ಸೀಗೆಹೊಸೂರು, ಮರೂರು, ಹುಲುಸೆ, ಹೆಬ್ಬಾಲೆ ಗ್ರಾಮಗಳ ಸಹಸ್ರಾರು ಮಂದಿ ಆಗಮಿಸಿ ದೇವರ ದರ್ಶನ ಪಡೆದು ಪುನೀತರಾದರು.
ದೇವಾಲಯ ಸಮಿತಿ ವತಿಯಿಂದ ಮಧ್ಯಾಹ್ನ ಪಾನಕ, ಅನ್ನದಾನ ನಡೆಯಿತು.
ದೇವಾಲಯ ಸಮಿತಿಯ ವತಿಯಿಂದ ದೇವಾಲಯದ ಹೊರ ಆವರಣದಲ್ಲಿ ಬೃಹತ್ ಎಲ್ ಇ ಡಿ ಪರದೆಯ ಮೇಲೆ ಅಯೋಧ್ಯೆಯಲ್ಲಿ ಜರುಗಿದ ಶ್ರೀರಾಮನ ಪ್ರತಿಷ್ಠಾಪನಾ ಪೂಜಾ ಮಹೋತ್ಸವವನ್ನು ಭಕ್ತಾಧಿಗಳಿಗೆ ತೋರಿಸಲಾಯಿತು.
ಸೋಮವಾರ ಮುಸ್ಸಂಜೆ ಕೂಡಿಗೆಯಲ್ಲಿನ ಹನುಮಸೇವಾ ಸಮಿತಿಯ ಮಹಿಳಾ ಭಕ್ತರು ಕೈಯಲ್ಲಿ ದೀಪ ಹಿಡಿದು ಕಣಿವೆ ರಾಮಲಿಂಗೇಶ್ವರ ಸನ್ನಿಧಿಗೆ ಧಾವಿಸಿದರು. ಪುರುಷ ಭಕ್ತರು ಶ್ರೀರಾಮನ ಭಾವಚಿತ್ರಗಳಿದ್ದ ಬಾವುಟಗಳನ್ನು ಹಿಡಿದು ಚಂಡೇ ವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿ ಬಂದು ದೇವರ ದರ್ಶನ ಪಡೆದರು. ದೇವಾಲಯ ಅಭಿವೃದ್ದಿ ಸಮಿತಿಯಿಂದ ರಾತ್ರಿಯೂ ಶ್ರೀ ಸ್ವಾಮಿಗೆ ವಿಶೇಷ ಪೂಜೆ ಹಾಗೂ ಮಹಾಮಂಗಳಾರತಿಯ ಬಳಿಕ ಲಾಡು ಪ್ರಸಾದ ಹಾಗೂ ಅನ್ನಸಂತರ್ಪಣೆ ನೆರವೇರಿಸಲಾಯಿತು. ದೇವಾಲಯ ಸಮಿತಿ ಅಧ್ಯಕ್ಷ ಕೆ.ಎನ್.ಸುರೇಶ್, ಕಾರ್ಯದರ್ಶಿ ಕೆ.ಎಸ್.ಮಾಧವ, ಉಪಾಧ್ಯಕ್ಷ ಮಂಜುನಾಥ ಸ್ವಾಮಿ, ಮಧು ಸೇರಿದಂತೆ ಆಡಳಿತ ಮಂಡಳಿ ಪದಾಧಿಕಾರಿಗಳಿದ್ದರು. ದೇವಾಲಯದ ಪ್ರಧಾನ ಅರ್ಚಕ ರಾಘವೇಂದ್ರ ಆಚಾರ್ ಪೂಜಾ ವಿಧಿಗಳನ್ನು ನಡೆಸಿಕೊಟ್ಟರು.