ಮಡಿಕೇರಿ, ಜ. ೨೨: ಕೊಡಗಿನ ಕ್ಯಾಪ್ಟನ್ ಶರಣ್ಯ ರಾವ್ ಈ ಬಾರಿಯ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭೂ ಸೇನೆಯ ಅಗ್ನಿವೀರರ ತಂಡವನ್ನು ಮುನ್ನಡೆ ಸಲಿದ್ದಾರೆ. ಭಾರತದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಸೇನೆಯ ಮೂರು ವಿಭಾಗಗಳು ಒಟ್ಟಿಗೆ ಗಣ ರಾಜ್ಯೋತ್ಸವದ ಪಥಸಂಚಲನದಲ್ಲಿ ಪಾಲ್ಗೊಳ್ಳುತ್ತಿವೆ.
ಕ್ಯಾಪ್ಟನ್ ಶರಣ್ಯ ರಾವ್ ಅವರು ಮೂಲತಃ ವೀರಾಜಪೇಟೆಯ ಕುಕ್ಕಲೂರು ಗ್ರಾಮದ ನಿವಾಸಿಯಾದ ಬಿಟ್ಟಂಗಾಲದ ಗಾಲ್ಫ್ ಕ್ಲಬ್ನ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವ ಹಿಸುತ್ತಿರುವ ಹರೀಶ್ ರಾವ್ ಹಾಗೂ ಎಸ್.ಎಂ.ಎಸ್ ವಿದ್ಯಾ ಸಂಸ್ಥೆಯ ಶಿಕ್ಷಕಿಯಾದ ಮೈತ್ರಿ ರಾವ್ ಅವರ ಪುತ್ರಿ. ಇವರು ವೀರಾಜಪೇಟೆಯ ಸೈಂಟ್ ಆನ್ಸ್ ಶಾಲೆಯಲ್ಲಿ ಎಸ್ಎಸ್ಎಲ್ಸಿವರೆಗೆ ವ್ಯಾಸಂಗ ಮಾಡಿ ೩ಐದನೇ ಪುಟಕ್ಕೆ
(ಮೊದಲ ಪುಟದಿಂದ) ನಂತರ ಕಾವೇರಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪೂರೈಸಿ, ಸಿಐಟಿ ಇಂಜಿನಿಯರಿAಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿAಗ್ ಪದವಿಗಳಿಸಿ ಮೂಡುಬಿದರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಎಂ.ಎಸ್ ಡಬ್ಲ್ಯೂ ವ್ಯಾಸಂಗ ಮಾಡಿರುತ್ತಾಳೆ. ಕಳೆದ ಮೂರು ವರ್ಷಗಳ ಹಿಂದೆ ಸೇನೆಗೆ ಆಯ್ಕೆಗೊಂಡ ಇವರು ಪ್ರಸ್ತುತ ಸೇನೆಯ (೬೦೮) ಇ.ಎಂ.ಇ ವಿಭಾಗದ ಕಾರ್ಗಿಲ್ನಲ್ಲಿ ಕ್ಯಾಪ್ಟನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಈ ಬಾರಿಯ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಪ್ರಧಾನ ಮಂತ್ರಿಗಳು ಘೋಷಿಸಿದ ‘ನಾರಿ ಶಕ್ತಿ’ ವಿಷಯದ ಭೂ ಸೇನೆಯ ತಂಡವನ್ನು ಮುನ್ನಡೆಸಲು ಆಯ್ಕೆಗೊಂಡಿದ್ದಾರೆ. ಇದೀಗ ದೆಹಲಿಯಲ್ಲಿ ಪಥಸಂಚಲನದ ತಾಲಿಮು ವಿನಲ್ಲಿ ಪಾಲ್ಗೊಂಡಿದ್ದಾಳೆ.