ಮಡಿಕೇರಿ, ಜ. ೨೧: ಬಾಳೆಲೆ ವಿಜಯಲಕ್ಷ್ಮಿ ಸಂಯುಕ್ತ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಬಾಳೆಲೆ ವಿಜಯಲಕ್ಷಿö್ಮ ಪ್ರೌಢಶಾಲಾ ವಿದ್ಯಾರ್ಥಿ ಲೇಖಾ ಅವರ ಅಧ್ಯಕ್ಷತೆಯಲ್ಲಿ ಬಾಳೆಲೆ ಗ್ರಾಮ ಪಂಚಾಯಿತಿ ವತಿಯಿಂದ ಮಕ್ಕಳ ಗ್ರಾಮ ಸಭೆ ನಡೆಯಿತು. ಕಾರ್ಯಕ್ರಮವನ್ನು ತಾಲೂಕು ಮಹಿಳಾ ಮತ್ತು ಮಕ್ಕಳ ಆಪ್ತ ಸಮಾಲೋಚಕಿ ಅನುಷಾ ಉದ್ಘಾಟಿಸಿ ಮಾತನಾಡಿ, ಮಕ್ಕಳ ಹಕ್ಕುಗಳು ಹದಿನೆಂಟು ವರ್ಷ ವಯಸ್ಸಿನ ಕೆಳಗಿನ ಮಕ್ಕಳಿಗೆ ಸಾಮಾಜಿಕ ವ್ಯವಸ್ಥೆಯಲ್ಲಿ ಶಕ್ತಿ ತುಂಬಿದೆ. ಈ ನಿಟ್ಟಿನಲ್ಲಿ ಬದುಕುವ, ರಕ್ಷಣೆಯ, ವಿಕಸನದ, ಶಿಕ್ಷಣದ ಮತ್ತು ಭಾಗವಹಿಸುವ ಹಕ್ಕುಗಳನ್ನು ಬಳಸಿಕೊಂಡು ಮಕ್ಕಳು ಬೆಳೆದು ಸಮಾಜದ ಮುಖ್ಯವಾಹಿನಿಗೆ ಬರುವಂತೆ ಕರೆ ನೀಡಿದರು.
ಬಾಳೆಲೆ ಹೋಬಳಿಯ ಕುಗ್ರಾಮಗಳಾದ ಮಲ್ಲೂರು, ಕುಂಬಾರಕಟ್ಟೆ ರಾಜಾಪುರ, ವಡ್ಡರಮಾಡು, ನಿಟ್ಟೂರು ಭಾಗಗಳಿಂದ ಶಾಲೆಗಳಿಗೆ ಬಂದು ಹೋಗಲು ಬಸ್ ಸಂಚಾರವಿಲ್ಲದಿರುವ ಬಗ್ಗೆ ವಿದ್ಯಾರ್ಥಿಗಳು ಸಭೆಯ ಮುಂದಿಟ್ಟು ಗಮನ ಸೆಳೆದರು. ವಿದ್ಯಾರ್ಥಿ ಸುಶ್ಮಿತಾ ಮಾತನಾಡಿ, ಮಡಿಕೇರಿ ರಾಜ್ಯ ರಸ್ತೆ ಸಾರಿಗೆ ನಿಗಮದ ಮಾರ್ಗ ಸಂಖ್ಯೆ ೭೯/೮೦ ಮತ್ತು ೧೪೨ ಸಂಚಾರವನ್ನು ಸರಿಯಾಗಿ ನಡೆಸುತ್ತಿಲ್ಲ. ಇದರಿಂದಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ತಾಯಂದಿರು ಉಚಿತ ಸೇವೆಯಿಂದ ವಂಚಿತರಾಗಿದ್ದಾರೆAದು ಅಭಿಪ್ರಾಯ ವ್ಯಕ್ತಪಡಿಸಿದರು.
ಗ್ರಾ.ಪಂ. ಸದಸ್ಯ ಅದೇಂಗಡ ವಿನು ಉತ್ತಪ್ಪ ಮಡಿಕೇರಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಘಟಕದ ವ್ಯವಸ್ಥಾಪಕರಿಗೆ ಕರೆ ಮಾಡಿ ತಕ್ಷಣದಿಂದಲೇ ಬಸ್ ವ್ಯವಸ್ಥೆ ಸರಿಪಡಿಸಲು ಸೂಚನೆ ನೀಡಿದರು. ಮುಂದುವರಿದು ಶಾಸಕರ ಗಮನಕ್ಕೂ ತಂದು ಪ್ರಸ್ತುತ ಚಾಲ್ತಿಯಲ್ಲಿರುವ ಮಾರ್ಗಗಳಿಂದ ಉತ್ತಮ ಸೇವೆ ನೀಡುವ ಭರವಸೆಯನ್ನು ನೀಡಿದರು.
ಪ್ರಾಥಮಿಕ ಶಾಲಾ ವಿದ್ಯಾರ್ಥಿ ಗೌತಮ್ ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗಾಗಿ ಬೇಡಿಕೆ ಸಲ್ಲಿಸಿದರು. ಶಾಲೆಗೆ ಸುಸಜ್ಜಿತ ಕಾಂಪೌAಡ್, ಮೈದಾನ, ತರಗತಿಗಳಿಗೆ ಉತ್ತಮ ಗುಣಮಟ್ಟದ ಕಪ್ಪು ಹಲಿಗೆ ವ್ಯವಸ್ಥೆಗೆ ಬೇಡಿಕೆ ಕೇಳಿಬಂತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮುಕ್ಕಾಟಿರ ಜಾನಕಿ ಕಾವೇರಪ್ಪ ಮಾತನಾಡಿ, ಮಕ್ಕಳ ಎಲ್ಲಾ ಬೇಡಿಕೆಗಳನ್ನು ಸಂಬAಧಿಸಿದ ಇಲಾಖೆಗಳೊಂದಿಗೆ ವ್ಯವಹರಿಸಿ ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸುವ ಭರವಸೆ ನೀಡಿದರು.
ವಿದ್ಯಾರ್ಥಿಗಳು ಶಾಲೆಗಳನ್ನು ಅರ್ಧದಲ್ಲಿ ಬಿಡುವ ಮತ್ತು ನಿರಂತರ ಗೈರು ಹಾಜರಾಗುವ ಪರಿಪಾಠವನ್ನು ಬಿಟ್ಟು ಶೈಕ್ಷಣಿಕವಾಗಿ ತೊಡಗಿಸಿಕೊಂಡು ಉತ್ತಮ ಪ್ರಜೆಗಳಾಗಿ ಸಶಕ್ತ ದೇಶವನ್ನು ಕಟ್ಟಬೇಕೆಂದು ಕರೆ ನೀಡಿದರು. ಸದಸ್ಯರಾದ ಪೊಡಮಾಡ ಸುಖೇಶ್, ಭೀಮಯ್ಯ, ಗ್ರೇಸಿ, ಪ್ರಮೀಳ, ಸಿಂಗ, ಪ್ರಾಂಶುಪಾಲ ಪ್ರಭು ಹಾಜರಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪರಮೇಶ್ವರ್ ಸ್ವಾಗತಿಸಿದರು. ಶಿಕ್ಷಕರಾದ ಸುಬ್ಬಯ್ಯ ಮತ್ತು ಶಿಕ್ಷಕಿ ನಾಗಶ್ರೀ ಕಾರ್ಯಕ್ರಮದ ಪ್ರಾಮುಖ್ಯತೆಯ ಬಗ್ಗೆ ಮಾಹಿತಿ ನೀಡಿದರು. ಶಿಕ್ಷಕ ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು.