ಹಿಂದಿನ ವರ್ಷಕ್ಕೆ ಹೋಲಿಸಿದರೆ ಒಂದಷ್ಟು ಉತ್ತಮ ಫಸಲು ಬಂದಿತ್ತು... ಇದರೊಂದಿಗೆ ದರವೂ ಈ ಬಾರಿ ಸ್ವಲ್ಪಮಟ್ಟಿಗೆ ಹೆಚ್ಚಿದೆ. ಆದರೆ ಕಾಫಿ ಬೆಳೆಗಾರರಿಗೆ ಇದರ ನೆಮ್ಮದಿ ಮಾತ್ರ ಕಷ್ಟಸಾಧ್ಯವಾಗುತ್ತಿದೆ. ಫಸಲು- ದರ ಒಂದಷ್ಟು ಉತ್ತಮವೇ ಎನಿಸಿದ್ದರೂ, ಹತ್ತಾರು ಸಮಸ್ಯೆಗಳ ನಡುವೆ ಕಾಫಿ ಬೆಳೆಗಾರರು ಪರದಾಡುತ್ತಿದ್ದಾರೆ. ಒಂದೆಡೆ ಈ ಹಿಂದಿನ ವರ್ಷಕ್ಕಿಂತ ಈ ಬಾರಿ ಕಾರ್ಮಿಕರ ಸಮಸ್ಯೆ ಎದುರಾಗಿದ್ದರೆ, ಮತ್ತೊಂದೆಡೆ ವಾತಾವರಣದಲ್ಲಿನ ಈಗಿನ ಸನ್ನಿವೇಶ ಮತ್ತೊಂದು ರೀತಿಯ ಆತಂಕದ ಪರಿಸ್ಥಿತಿ ತಂದೊಡ್ಡುತ್ತಿದೆ. ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಈ ಬಾರಿ ಕಾರ್ಮಿಕರ ಕೊರತೆ ಹೆಚ್ಚಿದೆ. ಕಾಫಿ ಕಾರ್ಮಿಕರ ಕೊರತೆಯಿಂದಾಗಿ ಇರುವ ಫಸಲನ್ನು ಮನೆ ತುಂಬಿಸಿಕೊಳ್ಳಲು ಬೆಳೆಗಾರರು ಹರ ಸಾಹಸಪಡುತ್ತಿದ್ದಾರೆ. ಅಸ್ಸಾಂ ಸೇರಿದಂತೆ ಉತ್ತರ ಭಾರತದ ರಾಜ್ಯಗಳಿಂದ ಕಾಫಿ ಕೆಲಸದ ಸಂದರ್ಭದಲ್ಲಿ ಹೆಚ್ಚಿರುತ್ತಿದ್ದ ಕಾರ್ಮಿಕರ ಸಂಖ್ಯೆ ಪ್ರಸಕ್ತ ವರ್ಷ ಕಡಿಮೆ ಕಂಡುಬರುತ್ತಿದೆ. ನಿರೀಕ್ಷೆಗೂ ಮೀರಿ ಕಂಡುಬರುತ್ತಿದ್ದ ಉತ್ತರ ಭಾರತ ವಿಭಾಗದ ಜನರು ಈ ಬಾರಿ ಜಿಲ್ಲೆಯತ್ತ ಮುಖ ಮಾಡಿಲ್ಲ ಎಂಬ ಮಾತು ಹಿಂದಿನ ವರ್ಷಕ್ಕೆ ಹೋಲಿಸಿದರೆ ಒಂದಷ್ಟು ಉತ್ತಮ ಫಸಲು ಬಂದಿತ್ತು... ಇದರೊಂದಿಗೆ ದರವೂ ಈ ಬಾರಿ ಸ್ವಲ್ಪಮಟ್ಟಿಗೆ ಹೆಚ್ಚಿದೆ. ಆದರೆ ಕಾಫಿ ಬೆಳೆಗಾರರಿಗೆ ಇದರ ನೆಮ್ಮದಿ ಮಾತ್ರ ಕಷ್ಟಸಾಧ್ಯವಾಗುತ್ತಿದೆ. ಫಸಲು- ದರ ಒಂದಷ್ಟು ಉತ್ತಮವೇ ಎನಿಸಿದ್ದರೂ, ಹತ್ತಾರು ಸಮಸ್ಯೆಗಳ ನಡುವೆ ಕಾಫಿ ಬೆಳೆಗಾರರು ಪರದಾಡುತ್ತಿದ್ದಾರೆ. ಒಂದೆಡೆ ಈ ಹಿಂದಿನ ವರ್ಷಕ್ಕಿಂತ ಈ ಬಾರಿ ಕಾರ್ಮಿಕರ ಸಮಸ್ಯೆ ಎದುರಾಗಿದ್ದರೆ, ಮತ್ತೊಂದೆಡೆ ವಾತಾವರಣದಲ್ಲಿನ ಈಗಿನ ಸನ್ನಿವೇಶ ಮತ್ತೊಂದು ರೀತಿಯ ಆತಂಕದ ಪರಿಸ್ಥಿತಿ ತಂದೊಡ್ಡುತ್ತಿದೆ. ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಈ ಬಾರಿ ಕಾರ್ಮಿಕರ ಕೊರತೆ ಹೆಚ್ಚಿದೆ. ಕಾಫಿ ಕಾರ್ಮಿಕರ ಕೊರತೆಯಿಂದಾಗಿ ಇರುವ ಫಸಲನ್ನು ಮನೆ ತುಂಬಿಸಿಕೊಳ್ಳಲು ಬೆಳೆಗಾರರು ಹರ ಸಾಹಸಪಡುತ್ತಿದ್ದಾರೆ. ಅಸ್ಸಾಂ ಸೇರಿದಂತೆ ಉತ್ತರ ಭಾರತದ ರಾಜ್ಯಗಳಿಂದ ಕಾಫಿ ಕೆಲಸದ ಸಂದರ್ಭದಲ್ಲಿ ಹೆಚ್ಚಿರುತ್ತಿದ್ದ ಕಾರ್ಮಿಕರ ಸಂಖ್ಯೆ ಪ್ರಸಕ್ತ ವರ್ಷ ಕಡಿಮೆ ಕಂಡುಬರುತ್ತಿದೆ. ನಿರೀಕ್ಷೆಗೂ ಮೀರಿ ಕಂಡುಬರುತ್ತಿದ್ದ ಉತ್ತರ ಭಾರತ ವಿಭಾಗದ ಜನರು ಈ ಬಾರಿ ಜಿಲ್ಲೆಯತ್ತ ಮುಖ ಮಾಡಿಲ್ಲ ಎಂಬ ಮಾತು