ಕುಶಾಲನಗರ, ಜ. ೨೦ : ಕುಶಾಲ ನಗರದ ಶ್ರೀ ಬಸವೇಶ್ವರ ಸೌಹಾರ್ದ ಸಹಕಾರ ಸಂಘದ ಉದ್ಘಾಟನಾ ಕಾರ್ಯಕ್ರಮವು ತಾ.೨೨ ರಂದು ಕುಶಾಲನಗರದ ಎ.ಪಿ.ಸಿ.ಎಂ.ಎಸ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘದ ನಿರ್ದೇಶಕರಾದ ಹೆಚ್.ವಿ. ಶಿವಪ್ಪರವರು ತಿಳಿಸಿದರು.

ಕುಶಾಲನಗರದ ಸಂಘದ ಕಚೇರಿ ಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೌಹಾರ್ದ ಸಂಘದ ಕಚೇರಿಯನ್ನು ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾ ಶಿವ ಸ್ವಾಮೀಜಿಯವರು ಉದ್ಘಾಟಿಸಲಿ ದ್ದಾರೆ. ಸಭಾ ಕಾರ್ಯಕ್ರಮವನ್ನು ವೀರಾಜಪೇಟೆ ಅರಮೇರಿ ಕಳಂಚೇರಿ ಮಠಾಧೀಶ ರಾದ ಶ್ರೀ ಶಾಂತಮಲ್ಲಿ ಕಾರ್ಜುನ ಸ್ವಾಮೀಜಿಯವರು ಉದ್ಘಾಟಿ ಸಲಿದ್ದಾರೆ.

ಕೊಡ್ಲಿಪೇಟೆ ಕಲ್ಮಠ ಶ್ರೀ ಮಹಾಂತ ಸ್ವಾಮೀಜಿ ಅವರ ದಿವ್ಯಸಾನಿಧ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಭಾಂ ಗಣದ ಉದ್ಘಾಟನೆಯನ್ನು ಅಮ್ಮತ್ತಿ ಕನ್ನಡ ಮಠದ ಶ್ರೀ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿಯವರು ನೆರವೇರಿಸಲಿರುವರು ಎಂದು ತಿಳಿಸಿದರು. ಈ ಸಂದರ್ಭ ವಿವಿಧ ಮಠಾಧೀಶರು ಹಾಗೂ ಮುಖ್ಯ ಅತಿಥಿಗಳಾಗಿ ಸಹಕಾರ ಸಂಘಗಳ ಅಧಿಕಾರಿಗಳು ಉಪಸ್ಥಿತರಿರುವರು ಎಂದು ಮಾಹಿತಿ ನೀಡಿದ್ದಾರೆ.

ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಟಿ.ಎಸ್. ಶಾಂಭಶಿವಯ್ಯ, ಸಂಘದ ಉಪಾಧ್ಯಕ್ಷ ಎಚ್.ಪಿ. ಉದಯ್ ಕುಮಾರ್ ಹಾಗೂ ನಿರ್ದೇಶಕ ಹೆಚ್.ಎಸ್. ಪುಟ್ಟರಾಜು ಇದ್ದರು.