ಗೋಣಿಕೊಪ್ಪಲು, ಜ. ೨೦: ಕಾಮಗಾರಿಯನ್ನು ಗುತ್ತಿಗೆ ಪಡೆದಿರುವ ಗುತ್ತಿಗೆದಾರರು ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರೈಸಬೇಕು. ತಪ್ಪಿದಲ್ಲಿ ಅಂತಹ ಗುತ್ತಿಗೆದಾರರ ಕಾಮ ಗಾರಿಯನ್ನು ರದ್ದುಗೊಳಿಸುತ್ತೇನೆ.
ಕಾಮಗಾರಿ ಇನ್ನೂ ಕೂಡ ಆರಂಭಿಸದೆ ಇರುವುದನ್ನು ಗಮನಿಸಿದ್ದೇನೆ, ಅಂತಹ ಗುತ್ತಿಗೆದಾರರ ಅವಶ್ಯಕತೆ ಇರುವುದಿಲ್ಲ. ಕಾಮಗಾರಿ ಆರಂಭಗೊAಡು ನಿಧಾನಗೊಂಡಲ್ಲಿ, ಕಳಪೆ ಮಟ್ಟದಿಂದ ಕೂಡಿರುವುದು ಕೇಳಿಬಂದಲ್ಲಿ ಅಂತಹ ಗುತ್ತಿಗೆದಾರರ ಕಾಮಗಾರಿ ರದ್ದುಗೊಳಿಸಿ. ಹೊಸ ಗುತ್ತಿಗೆದಾರರಿಗೆ ಜವಾಬ್ದಾರಿ ವಹಿಸಲಾಗುವುದು. ನಿರ್ಲಕ್ಷö್ಯ ವಹಿಸುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಗೆ ತಾಕೀತು ಮಾಡಿದರು.
ದ.ಕೊಡಗಿನ ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಟ್ಟಂಗಾಲ-ಕೂಟಿಯಾಲ ರಸ್ತೆಯ ಪೂರ್ಣಗೊಂಡ ೨.೫ ಕಿ.ಮೀ. ರಸ್ತೆ ಕಾಮಗಾರಿಯನ್ನು ಲೋಕಾರ್ಪಣೆ ಮಾಡುವ ಮೂಲಕ ಮಾತನಾಡಿದ ಎ.ಎಸ್. ಪೊನ್ನಣ್ಣ ರಸ್ತೆಯು ಅಗಲೀಕರಣದೊಂದಿಗೆ ಉತ್ತಮ ಕಾಮಗಾರಿ ನಡೆದಿದೆ ಎಂದು ಗ್ರಾಮಸ್ಥರು ಅಭಿಪ್ರಾಯ ತಿಳಿಸಿದ್ದಾರೆ. ಸರ್ಕಾರದ ಹಣ ಎಲ್ಲಿಯೂ ಕೂಡ ಪೋಲಾಗದಂತೆ ಎಚ್ಚರ ವಹಿಸಬೇಕು. ಗುತ್ತಿಗೆದಾರರು ನಡೆಸುವ ಕಾಮಗಾರಿಗಳು ನಿಗದಿತ ಅವಧಿಯಲ್ಲಿ ಜನರ ಅನುಕೂಲಕ್ಕೆ ಲಭಿಸಬೇಕು. ಕೇವಲ ಕಾಮಗಾರಿ ಗುತ್ತಿಗೆ ಪಡೆದರೆ ಸಾಲದು ಅದನ್ನು ಉತ್ತಮ ರೀತಿಯಲ್ಲಿ ಮುಗಿಸಿ ಜನರ ಸೇವೆಗೆ ಸಿಗುವಂತಾಗಬೇಕು ಎಂದು ಹೇಳಿದರು.
ರಸ್ತೆ ಉದ್ಘಾಟನೆ ಸಂದರ್ಭ ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೊಲ್ಲೀರ ಬೋಪಣ್ಣ, ತಾ.ಪಂ. ಮಾಜಿ ಅಧ್ಯಕ್ಷ ಉಮೇಶ್ ಕೇಚಮಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್, ಬಿ.ಶೆಟ್ಟಿಗೇರಿ ವಲಯ ಕಾಂಗ್ರೆಸ್ ಅಧ್ಯಕ್ಷ ತೀತಿಮಾಡ ಸದಾ, ಡಿಸಿಸಿ ಸದಸ್ಯ ಕಡೇಮಾಡ ಕುಸುಮಜೋಯಪ್ಪ ಸೇರಿದಂತೆ ಗುತ್ತಿಗೆದಾರ ನಾಮೇರ ನವೀನ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಹಾಗೂ ಇಂಜಿನಿಯರ್ಗಳು ಈ ವೇಳೆ ಹಾಜರಿದ್ದರು.