ಕಣಿವೆ, ಜ. ೧೯: ಕುಶಾಲನಗರದ ಕೈಗಾರಿಕಾ ಪ್ರದೇಶದ ಸುಂದರನಗರ ವೃತ್ತದಲ್ಲಿ ಮಾಜಿ ಮುಖ್ಯಮಂತ್ರಿ ದಿ. ಆರ್. ಗುಂಡೂರಾವ್ ಅವರ ಪುತ್ಥಳಿ ನಿರ್ಮಿಸಲು ಸುಂದರನಗರದ ಗುಂಡೂರಾವ್ ಅಭಿಮಾನಿ ಬಳಗ ಮುಂದಾಗಿದೆ.
ಈ ಸಂಬAಧ ಸಂಘದ ಅಧ್ಯಕ್ಷ ತಂಬಿ ಮತ್ತಿತರರು ಕೈಗಾರಿಕಾ ಪ್ರದೇಶಕ್ಕೆ ಆಗಮಿಸಿದ್ದ ಶಾಸಕ ಡಾ. ಮಂಥÀರ್ ಗೌಡ ಅವರಿಗೆ ಪ್ರತಿಮೆ ನಿರ್ಮಾಣಕ್ಕೆ ಸಂಬAಧಿಸಿದ ಇಲಾಖೆಗಳಿಂದ ಸೂಕ್ತ ಅನುಮತಿಗೆ ಶಿಫಾರಸ್ಸು ಮಾಡುವಂತೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮಂಥರ್ ಗೌಡ, ಕೇವಲ ಕೈಗಾರಿಕಾ ಬಡಾವಣೆ ಮಾತ್ರವಲ್ಲ ಕುಶಾಲನಗರದ ಬೆಳವಣಿಗೆಗೆ ಟೊಂಕ ಕಟ್ಟಿನಿಂತ ಗುಂಡೂರಾಯರ ಸ್ಮರಣೆ ನಮ್ಮೆಲ್ಲರ ಹೊಣೆ ಎಂದು ಅಭಿಪ್ರಾಯಪಟ್ಟರಲ್ಲದೇ ಸುಂದರನಗರದ ಗುಂಡೂರಾವ್ ಅಭಿಮಾನಿ ಬಳಗದ ಮನವಿಗೆ ಸ್ಪಂದಿಸುವ ಭರವಸೆಯಿತ್ತರು. ಈ ಸಂದರ್ಭ ಸಂಘದ ಉಪಾಧ್ಯಕ್ಷ ರಫೀಕ್, ಸಲಹೆಗಾರ ಶಿವಣ್ಣ, ಶ್ಯಾಂ, ಕಾರ್ತಿಕ್ ಇದ್ದರು.