ಮಡಿಕೇರಿ: ಮೂರ್ನಾಡು ಹೋಬಳಿ ವ್ಯಾಪ್ತಿಯ ಕಿಗ್ಗಾಲು ಗ್ರಾಮದ ಪುದಿಯೊಕ್ಕಡ ಕುಟುಂಬದ ಮನೆ ಮನೆಗೆ ತಾ. ೧೭ ರಂದು ಶ್ರೀ ರಾಮ ಜನ್ಮಭೂಮಿ ಅಯೋಧ್ಯೆಯ ಪವಿತ್ರ ಮಂತ್ರಾಕ್ಷತೆ ವಿತರಣೆ ಮಾಡಲಾಯಿತು.

ಈ ಸಂದರ್ಭ ವಿ.ಹಿಂ.ಪ. ನಿಕಟಪೂರ್ವ ಕೊಡಗು ಜಿಲ್ಲೆಯ ಕಾರ್ಯದರ್ಶಿ ಹಾಗೂ ಅಯೋಧ್ಯೆಯ ೧೯೯೦ರ ಐತಿಹಾಸಿಕ ಕರಸೇವೆಯಲ್ಲಿ ಪಾಲ್ಗೊಂಡಿದ್ದ ಚಿ.ನಾ. ಸೋಮೇಶ್ ಹಾಗೂ ಬಿ. ಸುಬ್ಬಯ್ಯ ಅವರುಗಳನ್ನು ಗೌರವಿಸಲಾಯಿತು.

ಕುಟುಂಬದ ಹಿರಿಯರಾದ ಬೆಲ್ಲು ಸೋಮಯ್ಯ, ಈರಪ್ಪ, ವಿಶ್ವನಾಥ, ಮಧುಕುಮಾರ್, ವಿಫುಲ್ ಸೋಮಯ್ಯ ಅಮ್ಮಂಡ ರಾಜ ಮೇದಪ್ಪ ಹಾಗೂ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಪಿ.ಈ. ರಮೇಶ್ ಸೇರಿದಂತೆ ಇತರ ಪ್ರಮುಖರು ಪಾಲ್ಗೊಂಡಿದ್ದರು.