ಮಡಿಕೇರಿ, ಜ. ೧೯: ಸಾಲ ಮೇಳದ ಮೂಲಕ ಕೊಡಗು ಡಿಸಿಸಿ ಬ್ಯಾಂಕ್, ಜನಸ್ನೇಹಿ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿರುವುದು ಶ್ನಾಘನೀಯ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು.
ಮಡಿಕೇರಿಯ ಗಾಂಧಿ ಮೈದಾನದಲ್ಲಿ ಬ್ಯಾಂಕಿನ ಸಾಲ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೊಡಗು ಭಾಗದ ಸಂಸದರೂ ಆಗಿದ್ದ ಜನಾರ್ಧನ ಪೂಜಾರಿಯವರು ದಶಕಗಳ ಹಿಂದೆ ಲೋನ್ ಮೇಳ ಆಯೋಜಿಸಿ ಜನರ ಮನಸು ಗೆದ್ದಿದ್ದು, ಸಾಲ ಮೇಳ ಎಂದಾಗ ಜನಾರ್ಧನ ಪೂಜಾರಿ ನೆನಪಿಗೆ ಬರುತ್ತಾರೆ ಎಂದರು. ಬ್ಯಾಂಕ್ ಹಮ್ಮಿಕೊಂಡಿರುವ ಈ ಕಾರ್ಯಕ್ರಮದಿಂದ ಜನÀರಿಗೆ ರಿಯಾಯಿತಿ ಸಿಕ್ಕಿ, ಹಣವೂ ಉಳಿದಂತಾಗುತ್ತದೆ. ಅಲ್ಲದೆ, ಬ್ಯಾಂಕಿನ ಪ್ರಗತಿಗೂ ಪೂರಕವಾಗುತ್ತದೆ ಎಂದು ಅವರು ಹೇಳಿದರು.
ಸಾಲ ಮೇಳದಲ್ಲಿ ಕೃಷಿ ಯಂತ್ರೋಪಕರಣಗಳಿಗೆ ಪ್ರಾಮುಖ್ಯತೆ ನೀಡಿರುವುದು ಶ್ಲಾಘನೀಯ ಎಂದು ಮಡಿಕೇರಿ ಶಾಸಕ ಡಾ ಮಂಥರ್ ಗೌಡ ಹೇಳಿದರು. ಬದಲಾಗುತ್ತಿರುವ ವ್ಯವಸ್ಥೆಯಲ್ಲಿ ಯಾಂತ್ರೀಕೃತ ಕೃಷಿ ಅನಿವಾರ್ಯ ಎಂದ ಮಂಥರ್, ರಾಜಕಾರಣಿಗಳು ಮಡಿಕೇರಿ, ಜ. ೧೯: ಸಾಲ ಮೇಳದ ಮೂಲಕ ಕೊಡಗು ಡಿಸಿಸಿ ಬ್ಯಾಂಕ್, ಜನಸ್ನೇಹಿ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿರುವುದು ಶ್ನಾಘನೀಯ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು.
ಮಡಿಕೇರಿಯ ಗಾಂಧಿ ಮೈದಾನದಲ್ಲಿ ಬ್ಯಾಂಕಿನ ಸಾಲ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೊಡಗು ಭಾಗದ ಸಂಸದರೂ ಆಗಿದ್ದ ಜನಾರ್ಧನ ಪೂಜಾರಿಯವರು ದಶಕಗಳ ಹಿಂದೆ ಲೋನ್ ಮೇಳ ಆಯೋಜಿಸಿ ಜನರ ಮನಸು ಗೆದ್ದಿದ್ದು, ಸಾಲ ಮೇಳ ಎಂದಾಗ ಜನಾರ್ಧನ ಪೂಜಾರಿ ನೆನಪಿಗೆ ಬರುತ್ತಾರೆ ಎಂದರು. ಬ್ಯಾಂಕ್ ಹಮ್ಮಿಕೊಂಡಿರುವ ಈ ಕಾರ್ಯಕ್ರಮದಿಂದ ಜನÀರಿಗೆ ರಿಯಾಯಿತಿ ಸಿಕ್ಕಿ, ಹಣವೂ ಉಳಿದಂತಾಗುತ್ತದೆ. ಅಲ್ಲದೆ, ಬ್ಯಾಂಕಿನ ಪ್ರಗತಿಗೂ ಪೂರಕವಾಗುತ್ತದೆ ಎಂದು ಅವರು ಹೇಳಿದರು.
ಸಾಲ ಮೇಳದಲ್ಲಿ ಕೃಷಿ ಯಂತ್ರೋಪಕರಣಗಳಿಗೆ ಪ್ರಾಮುಖ್ಯತೆ ನೀಡಿರುವುದು ಶ್ಲಾಘನೀಯ ಎಂದು ಮಡಿಕೇರಿ ಶಾಸಕ ಡಾ ಮಂಥರ್ ಗೌಡ ಹೇಳಿದರು. ಬದಲಾಗುತ್ತಿರುವ ವ್ಯವಸ್ಥೆಯಲ್ಲಿ ಯಾಂತ್ರೀಕೃತ ಕೃಷಿ ಅನಿವಾರ್ಯ ಎಂದ ಮಂಥರ್, ರಾಜಕಾರಣಿಗಳು ಸಿಬ್ಬಂದಿಗಳು ಅಷ್ಟೇ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿದರೆ ಮಾತ್ರ ಬ್ಯಾಂಕ್ ಲಾಭ ಗಳಿಸಲು ಸಾಧ್ಯ ಎಂದು ಹೇಳಿದರು.
ರೈತರು ದÀÄಂದುವೆಚ್ಚಕ್ಕೆ ಕಡಿವಾಣ ಹಾಕಿ, ಪಡೆದ ಸಾಲವನ್ನು ಪ್ರಾಮಾಣಿಕವಾಗಿ ಮರುಪಾವತಿಸಿದರೆ ಜೀವನ ಸುಲಲಿತವಾಗುತ್ತದೆ ಎಂದು ದೊಡ್ಡಕೊಡ್ಲಿ ಕಲ್ಲುಮಠದ ಮಹಾಂತ ಸ್ವಾಮೀಜಿ ಕಿವಿಮಾತು ಹೇಳಿದರು. ಒಬ್ಬ ವ್ಯಕ್ತಿ ಬದುಕಿನಲ್ಲಿ ಮೇಲೇರಬೇಕಾದರೆ ‘ಬ್ಲಡ್ಡು, ದುಡ್ಡು ಮತ್ತು ಹೆಡ್ಡು’ ಮುಖ್ಯ ಎಂದು ಮಾರ್ಮಿಕವಾಗಿ ಹೇಳಿದ ಸ್ವಾಮೀಜಿ, ಮನಸ್ಥಿತಿ ಉತ್ತಮವಾಗಿದ್ದರೆ ಮನೆಯ ಸ್ಥಿತಿ ಉತ್ತಮವಾಗುತ್ತದೆ ಹಾಗೂ ಮನಸ್ಥಿತಿಯೂ ಚೆನ್ನಾಗಿರುತ್ತದೆ ಎಂದು ಹಿತವಚನ ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಪಿ ಗಣಪತಿ, ಶತಮಾನೋತ್ಸವ ನೆನಪಿಗಾಗಿ ಭವ್ಯ ಕಟ್ಟಡ ಸಾಕಾರವಾಗಿದ್ದು, ಇದರ ನೆನಪಿಗಾಗಿ ಸಾಲ ಮೇಳ ಆಯೋಜಿಸಲಾಗಿದೆ ಎಂದರು. ಕೇವಲ ಲಾಭ ಗಳಿಸುವುದೇ ಬ್ಯಾಂಕ್ ಗುರಿಯಲ್ಲ. ಈ ಕಾರಣದಿಂದ ಜನೋಪಯೋಗಿ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ. ಇಂತಹ ಕಾರ್ಯಕ್ರಮ ಜಿಲ್ಲೆಯಲ್ಲಿ ನಡೆದ ಉದಾಹರಣೆಯಿಲ್ಲ ಎಂದ ಬಾಂಡ್ ಗಣಪತಿ, ಸ್ಥಳದಲ್ಲೇ ದಾಖಲೆ ಕಲೆಹಾಕಿ, ಅರ್ಹ ರೈತರಿಗೆ ಸಾಲ ಸೌಲಭ್ಯ ನೀಡಲಾಗುತ್ತಿದೆ ಎಂದರು.
ವೇದಿಕೆಯಲ್ಲಿ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ ಹಾಗೂ ಕಾರ್ಯನಿರ್ವಹಣಾಧಿಕಾರಿ ಉಮಾಶಂಕರ್ ಉಪಸ್ಥಿತರಿದ್ದರು.
ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿರುವ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ತನ್ನ ಶತಮಾನೋತ್ಸವ ಭವನದ ಲೋಕಾರ್ಪಣೆಯ ಸವಿನೆನಪಿಗಾಗಿ ವಾಹನಗಳು ಮತ್ತು ಕೃಷಿ ಯಂತ್ರೋಪಕರಣಗಳ ಖರೀದಿಗಾಗಿ ಸಾಲ ಮೇಳ ಆಯೋಜಿಸಿದೆ. ಮಡಿಕೇರಿಯ ಗಾಂಧಿ ಮೈದಾನದಲ್ಲಿ ಮೂರು ದಿನ ನಡೆಯಲಿರುವ ಸಾಲ ಮೇಳಕ್ಕೆ ಶುಕ್ರವಾರ ಚಾಲನೆ ಸಿಕ್ಕಿದ್ದು, ಬೆಳೆಗಾರರು ಮತ್ತು ಸಾರ್ವಜನಿಕರಿಂದ ಉತ್ತಮ ಸ್ಪಂದನ ಸಿಕ್ಕಿದೆ. ಮೊದಲ ದಿನದಿಂದಲೇ ಕಾರುಗಳು ಹಾಗೂ ಕೃಷಿ ಯಂತ್ರೋಪಕರಣಗಳನ್ನು ಖರೀದಿಸಲು ಅನೇಕರು ನೋಂದಾಯಿಸಿಕೊಳ್ಳುತ್ತಿದ್ದಾರೆ. ಸುಮಾರು ೩೦ ಪ್ರತಿಷ್ಠಿತ ಕಂಪೆನಿಗಳು ಸಾಲ ಮೇಳದಲ್ಲಿ ಪಾಲ್ಗೊಂಡಿವೆ.
ಡಿಸಿಸಿ ಬ್ಯಾಂಕ್ ಸದಸ್ಯರು ತಮಗೆ ಬೇಕಾದ ವಾಹನ ಅಥವಾ ಯಂತ್ರೋಪಕರಣಗಳನ್ನು ಬ್ಯಾಂಕ್ ಸಾಲದ ಆಧಾರದಲ್ಲಿ ಖರೀದಿಸಲು ವ್ಯವಸ್ಥೆ ಮಾಡಲಾಗಿದ್ದು, ತಾ. ೩೧ರವರೆಗೆ ಖರೀದಿಸುವ ವಾಹನಗಳಿಗೆ ಶೇಕಡಾ ೫ ಮತ್ತು ಕೃಷಿ ಯಂತ್ರೋಪಕರಣಗಳಿಗೆ ಶೇಕಡಾ ೭ರಷ್ಟು ರಿಯಾಯಿತಿ ನೀಡುವುದಾಗಿ ಬ್ಯಾಂಕ್ ಘೋಷಿಸಿದೆ. ಈ ಉದ್ದೇಶಕ್ಕೆ ಜಿಲ್ಲೆಯ ಡಿಸಿಸಿ ಬ್ಯಾಂಕಿನ ಎಲ್ಲಾ ೨೩ ಶಾಖಾ ವ್ಯವಸ್ಥಾಪಕರು ಸ್ಥಳದಲ್ಲೇ ಸಾಲ ಅರ್ಹತಾ ಪತ್ರ ವಿತರಿಸುತ್ತಿದ್ದಾರೆ.