ಸೋಮವಾರಪೇಟೆ, ಜ. ೧೯: ಇಲ್ಲಿನ ಇಂದಿರಾ ಗಾಂಧಿ ಅಭಿಮಾನಿಗಳ ಸಂಘದ ವತಿಯಿಂದ ಸ್ಥಳೀಯ ಸಾಕಮ್ಮನ ಬಂಗಲೆ ಮೈದಾನದಲ್ಲಿ ೩೭ನೇ ವರ್ಷದ ರಾಜ್ಯಮ್ಟಟದ ಕಬಡ್ಡಿ ಪಂದ್ಯಾಟ ತಾ. ೨೦ರಂದು(ಇAದು) ನಡೆಯಲಿದೆ. ಬೆಳಿಗ್ಗೆ ೧೧ಕ್ಕೆ ನಡೆಯುವ ಪಂದ್ಯಾವಳಿಗೆ ರಾಜ್ಯ ಉಚ್ಚ ನ್ಯಾಯಾಲಯದ ವಕೀಲರಾದ ಚಂದ್ರಮೌಳಿ ಚಾಲನೆ ನೀಡಲಿದ್ದಾರೆ. ಶಾಸಕ ಡಾ. ಮಂಥರ್ ಗೌಡ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ದಲಿತ ಹಿತರಕ್ಷಣಾ ಒಕ್ಕೂಟದ ಅಧ್ಯಕ್ಷ ಡಿ.ಎಸ್. ನಿರ್ವಾಣಪ್ಪ, ಸಮಾಜ ಸೇವಕ ಗಿರೀಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್, ಪ್ರಮುಖರಾದ ಎಸ್.ಎಂ. ಡಿಸಿಲ್ವ, ಸತೀಶ್, ಗಂಗಾಧರ್, ಎಚ್.ಎಸ್. ವೆಂಕಪ್ಪ, ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ಸಂಘದ ಅಧ್ಯಕ್ಷ ಎಚ್.ಎ. ನಾಗರಾಜು ತಿಳಿಸಿದ್ದಾರೆ.