ಮಡಿಕೇರಿ, ಜ. ೧೯: ಕೊಡಗು ವಿದ್ಯಾಲಯದಲ್ಲಿ ೯ನೇ ತರಗತಿ ಓದುತ್ತಿರುವ ಎನ್.ಸಿ.ಸಿ. ಕೆಡೆಟ್ ಸಾರ್ಜೆಂಟ್ ರಘುವಂಶಿ ಸಿ.ಎಸ್. ಕರ್ನಾಟಕ ಗೋವಾ ಡೈರೆಕ್ಟ್ರೇಟಿನ ಜೂನಿಯರ್ ವಿಭಾಗದ ಬೆಸ್ಟ್ ಕೆಡೆಟ್ ಆಗಿ ತಾ. ೨೬ ರಂದು ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪೆರೇಡ್‌ಗೆ ಆಯ್ಕೆಯಾಗಿದ್ದಾರೆ.

೧೯ನೇ ಕರ್ನಾಟಕ ಬೆಟಾಲಿಯನ್‌ನ ಎನ್.ಸಿ.ಸಿ. ಕೆಡೆಟ್ ಆಗಿದ್ದು ಮಡಿಕೇರಿಯ ಸಿವಿಲ್ ಇಂಜಿನಿಯರ್ ಶಿವಕುಮಾರ್ ಹಾಗೂ ಸಂದ್ಯಾ ಪಿ. ದಂಪತಿ ಪುತ್ರ.

ವೀರಾಜಪೇಟೆ: ತಾ. ೨೬ ರಂದು ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ ಪಥಸಂಚಲನಕ್ಕೆ ಮೂಲತಃ ವೀರಾಜಪೇಟೆ ಸಮೀಪದ ಬೇಟೋಳಿ ಗ್ರಾಮದವರಾದ ರಕ್ಷಿತಾ ಬಿ.ಎಸ್. ಅವರು ಆಯ್ಕೆಯಾಗಿದ್ದಾರೆ.

ಬೆಂಗಳೂರಿನ ಜ್ಯೋತಿ ನಿವಾಸ್ ಕಾಲೇಜಿನಲ್ಲಿ ಅಂತಿಮ ಬಿ.ಎಸ್.ಸಿ. ವ್ಯಾಸಂಗ ಮಾಡುತ್ತಿರುವ ಇವರು, ಎನ್.ಸಿ.ಸಿ. ಘಟಕದಿಂದ ಪೆರೇಡ್‌ಗೆ ಆಯ್ಕೆಯಾಗಿದ್ದಾರೆ. ರಕ್ಷಿತಾ ಬಿ.ಎಸ್. ಅವರು ಬೆಂಗಳೂರಿನಲ್ಲಿ ರಾಜ್ಯ ಮೀಸಲು ಪೊಲೀಸ್ ಪಡೆಯ ಅಧಿಕಾರಿ ಶುಭ ಶಂಕರ್ ಬಿ.ಆರ್. ಹಾಗೂ ಶಿಕ್ಷಕಿ ನಳಿನಾಕ್ಷಿ ಬಿ.ಎನ್. ಅವರ ಪುತ್ರಿ.

ಮಡಿಕೇರಿ: ಇಬ್ನಿವಳವಾಡಿ ಗ್ರಾಮದ ಅಯ್ಯಂಡ ಬೋಪಣ್ಣ ಮತ್ತು ಸುಮ ಬೋಪಣ್ಣ ಅವರ ಪುತ್ರ ಬೆಂಗಳೂರಿನ ಸಿ.ಎಂ.ಆರ್. ಕಾಲೇಜಿನ ಅಂತಿಮ ವರ್ಷದ ಬಿ.ಬಿ.ಎ ವಿದ್ಯಾರ್ಥಿ ವಿಧಿತ್ ಪೂಣಚ್ಚ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪೆರೇಡ್‌ಗೆ ಆಯ್ಕೆಯಾಗಿದ್ದಾರೆ.