ಮಡಿಕೇರಿ, ಜ. ೧೯: ಅಯೋಧ್ಯೆಯಲ್ಲಿ ತಾ.೨೨ ರಂದು ನಡೆಯಲಿರುವ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ದೇಶಾದ್ಯಂತ ವಿವಿಧ ದೇವಾಲಯಗಳಲ್ಲಿ ಪೂಜೆ, ಭಜನೆ, ಸ್ವಚ್ಛತಾ ಕಾರ್ಯಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕೊಡಗು ಜಿಲ್ಲೆಯ ವಿವಿಧೆಡೆಗಳಲ್ಲಿಯೂ ನಗರ, ಪಟ್ಟಣಗಳ ಸಿಂಗಾರ ಸೇರಿದಂತೆ ದೇವಸ್ಥಾನಗಳಲ್ಲಿ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಆದರೆ ರಾಜ್ಯದ ಧಾರ್ಮಿಕದತ್ತಿ ಇಲಾಖೆ ವ್ಯಾಪ್ತಿಗೆ ಬರುವ ಮುಜರಾಯಿ ದೇವಸ್ಥಾನಗಳಲ್ಲಿ ಯಾವುದೇ ವಿಶೇಷ ಪೂಜೆಗಳನ್ನು ಹಮ್ಮಿಕೊಂಡಿರುವ ಬಗ್ಗೆ ಸ್ಪಷ್ಟತೆ ಕಾಣುತ್ತಿಲ್ಲ. ಧಾರ್ಮಿಕ ದತ್ತಿ ಇಲಾಖೆಯಿಂದ ರಾಜ್ಯದಲ್ಲಿ ಸಾರ್ವತ್ರಿಕವಾಗಿ ಆಯುಕ್ತರು ಹೊರಡಿಸಿರುವ ಸುತ್ತೋಲೆಯಲ್ಲಿ ಅಯೋಧ್ಯೆಯಲ್ಲಿ ಪ್ರತಿಷ್ಠಾಪನ ಕಾರ್ಯಕ್ರಮ ನಡೆಯಲಿರುವುದರಿಂದ ಆ ಸಂದರ್ಭ ಅಧಿಸೂಚಿತ ದೇವಾಲಯಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ, ಮಂಗಳಾರತಿ ನಡೆಸುವಂತೆ ಸೂಚಿಸಲಾಗಿದೆ. ಆದರೆ ಈ ಬಗ್ಗೆ ಜಿಲ್ಲಾಡಳಿತದಿಂದ ಯಾವುದೇ ನಿರ್ಧಾರ ಕೈಗೊಂಡಿರುವುದು ಕಂಡುಬAದಿಲ್ಲ. ಮುಜರಾಯಿ ವ್ಯಾಪ್ತಿಯ ಪ್ರಮುಖ ದೇವಾಲಯಗಳಲ್ಲಿ ಇನ್ನೂ ವ್ಯವಸ್ಥಾಪನಾ ಸಮಿತಿಗಳೇ ರಚನೆಗೊಂಡಿಲ್ಲ. ಆಡಳಿತಾಧಿಕಾರಿಗಳೇ ಉಸ್ತುವಾರಿ ನಡೆಸುತ್ತಿದ್ದಾರೆ. ಇದೀಗ ‘ಶಕ್ತಿ'ಗೆ ತಿಳಿದುಬಂದAತೆ ಜಿಲ್ಲೆಯ ಪ್ರಮುಖ ದೇವಾಲಯಗಳಾದ ತಲಕಾವೇರಿ - ಭಾಗಮಂಡಲ, ಮಡಿಕೇರಿಯ ಶ್ರೀ ಓಂಕಾರೇಶ್ವರ, ಈ ಯಾವ ದೇವಾಲಯಗಳಲ್ಲಿಯೂ ಯಾವುದೇ ಪೂಜೆಯನ್ನು ಹಮ್ಮಿಕೊಂಡಿಲ್ಲ ಎನ್ನುವುದು ಖಚಿತಗೊಂಡಿದೆ. ಆದರೆ ಮಡಿಕೇರಿಯ ಶ್ರೀ ಆಂಜನೇಯ ದೇವಾಲಯವು ಮುಜರಾಯಿ ವ್ಯಾಪ್ತಿಗೆ ಒಳಪಟ್ಟಿದ್ದರೂ ಮಡಿಕೇರಿಯ ಹಿಂದೂ ಸಂಘಟನೆಗಳೆಲ್ಲ ಸೇರಿ ವಿಶೇಷ ಪೂಜೆ, ಹೋಮ, ಹವನಾದಿಗಳನ್ನು ಏರ್ಪಡಿಸಿರುವುದು ಖಾತರಿಗೊಂಡಿದೆ.

ಆAಜನೇಯ ಸನ್ನಿಧಿಯಲ್ಲಿ ರಾಮತಾರಕಹೋಮ

ಮಡಿಕೇರಿ: ಅಯೋಧ್ಯೆಯಲ್ಲಿ ತಾ. ೨೨ರಂದು ಶ್ರೀ ರಾಮನ ಪ್ರತಿಷ್ಠಾಪನಾ ಮಹೋತ್ಸವದ ಹಿನ್ನೆಲೆಯಲ್ಲಿ ನಗರದ ಆಂಜನೇಯ ದೇವಾಲಯ ಹಾಗೂ ಕೋದಂಡರಾಮ ದೇವಾಲಯದಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಆಂಜನೇಯ ದೇವಾಲಯದಲ್ಲಿ ತಾ. ೨೨ರಂದು ಬೆಳಿಗ್ಗೆ ೧೦.೩೦ ಗಂಟೆಯಿAದ ಶ್ರೀ ರಾಮತಾರಕಹೋಮ ನಡೆಯಲಿದ್ದು, ಮಧ್ಯಾಹ್ನ ೧೨.೩೨ ಗಂಟೆಗೆ ಮಹಾ ಮಂಗಳಾರತಿ ನೆರವೇರಲಿದೆ. ಬೆಳಿಗ್ಗೆ ೧೧ ಗಂಟೆಯಿAದ ರವಿ ಭೂತನಕಾಡು ತಂಡದಿAದ ಮಧ್ಯಾಹ್ನ ೧ ಗಂಟೆಯವರೆಗೆ ಭಜನಾ ಕಾರ್ಯಕ್ರಮವಿರುತ್ತದೆ. ಮಧ್ಯಾಹ್ನ ಸುಮಾರು ೨ ಸಾವಿರಕ್ಕೂ ಅಧಿಕ ಮಂದಿಗೆ ಅನ್ನದಾನ ನಡೆಯಲಿದೆ. ಸಂಜೆ ೬ರಿಂದ ೮ ಗಂಟೆಯವರೆಗೆ ರಾಮ ದೀಪೋತ್ಸವದೊಂದಿಗೆ ಶ್ರೀ ರಾಮಾಂಜನೇಯ ಭಜನಾ ಮಂಡಳಿಯಿAದ ಶ್ರೀರಾಮ ಭಜನೆ ನಡೆಯಲಿದೆ. ಬೆ. ೧೦ ಗಂಟೆಯಿAದ ಅಯೋಧ್ಯೆಯಲ್ಲಿ ನಡೆಯುವ ಶ್ರೀ ರಾಮನ ಪ್ರಾಣ ಪ್ರತಿಷ್ಠೆಯನ್ನು ೧೦ ಅಡಿ ಎತ್ತರದ ೨೦ ಅಡಿ ಅಗಲದ ಎಲ್‌ಇಡಿ ಪರದೆ ಮೂಲಕ ನೇರವಾಗಿ ವೀಕ್ಷಿಸಲು ವ್ಯವಸ್ಥೆ ಮಾಡಲಾಗುತ್ತದೆ. ೧೯೯೦-೯೨ನೇ ಇಸವಿಯಲ್ಲಿ ಮಡಿಕೇರಿಯಿಂದ ಕರಸೇವೆಯಲ್ಲಿ ಪಾಲ್ಗೊಂಡ ಕರಸೇವಕರನ್ನು ಸನ್ಮಾನಿಸಲಾಗುತ್ತದೆ. ಮಡಿಕೇರಿಯ ಎಲ್ಲಾ ಹಿಂದೂ ಸಮುದಾಯದವರು ಅಂದು ಮಧ್ಯಾಹ್ನ ೧೨.೩೨ ಗಂಟೆಗೆ ಅಯೋಧ್ಯೆಯಲ್ಲಿ ರಾಮನ ಪ್ರತಿಷ್ಠಾ ಮಹೋತ್ಸವ ನಡೆಯುವ ಸಂದರ್ಭ ತಮ್ಮ ಕೆಲಸ ಕಾರ್ಯಗಳನ್ನು ನಿಲ್ಲಿಸಿ ಆಂಜನೇಯ ದೇವಾಲಯಕ್ಕೆ ಆಗಮಿಸಿ ಎಲ್‌ಇಡಿ ಪರದೆ ಮೂಲಕ ಮಹೋತ್ಸವವನ್ನು ವೀಕ್ಷಿಸಿ ಅನ್ನ ಪ್ರಸಾದ ಸ್ವೀಕರಿಸುವಂತೆ ವಿಶ್ವ ಹಿಂದೂ ಪರಿಷತ್ ಮನವಿ ಮಾಡಿದೆ. ಚೌಡೇಶ್ವರಿ ದೇವಾಲಯದಲ್ಲಿ ಪೂಜೆ

ಮಡಿಕೇರಿ : ಮಡಿಕೇರಿ ಚೌಡೇಶ್ವರಿ ದೇವಾಲಯದಲ್ಲಿ ಬೆ.೮ ರಿಂದ ಪ್ರಾರ್ಥನೆ, ಮಹಾಸಂಕಲ್ಪ, ಗುರುಗಣಪತಿ ಪೂಜೆ, ಕಳಶ ಪ್ರತಿಷ್ಠಾಪನ ಪೂರ್ವಕ, ಶ್ರೀ ಮಹಾವಿಷ್ಣು ಸಹಿತ ಶ್ರೀ ರಾಮಚಂದ್ರನಿಗೆ ಶೋಡ, ಶೋಡೋಪಚಾರ ಪೂಜೆ, ವಿಷ್ಣು ಸಹಸ್ರನಾಮ ಪಠಣ, ಶ್ರೀ ವಿಷ್ಣು ಸಹಸ್ರನಾಮ ಹೋಮ, ಶ್ರೀ ರಾಮತಾರಕ ಮಂತ್ರ ಹೋಮ ಮತ್ತು ಪೂರ್ಣಾಹುತಿ ನಡೆಯಲಿದೆ. ಬೆ.೧೦:೩೦ ಗಂಟೆಯಿAದ ೧೧:೧೫ ವರೆಗೆ ರಾಮಾಯಣದ ಸಂಕ್ಷಿಪ್ತ ಪ್ರವಚನವನ್ನು ಮಡಿಕೇರಿಯ ಜಿ. ಟಿ ರಾಘವೇಂದ್ರ ರಾವ್ ಅವರು ನೀಡಲಿದ್ದಾರೆ. ಮಧ್ಯಾಹ್ನ ೧೨:೩೦ ಕ್ಕೆ ದೀಪಾರಾಧನೆ ಬಳಿಕ ಶ್ರೀ ದೇವರಿಗೆ ಮಹಾಮಂಗಳಾರತಿ ನೆರವೇರಲಿದೆ. ೧ ಗಂಟೆಯಿAದ ೨:೩೦ ರವರೆಗೆ ಅನ್ನ ಪ್ರಸಾದ ವಿತರಣೆ ಜರುಗಲಿದೆ. ಸಂಜೆ ೪ ರಿಂದ ೬ ಗಂಟೆಯವರೆಗೆ ಶ್ರೀನಿವಾಸ ಕಲ್ಯಾಣ ಬಳಿಕ ದೀಪಾರಾಧನೆ, ಮಹಾಪೂಜೆಯ ನಂತರ ಪ್ರಸಾದ ವಿತರಣೆ ನಡೆಯಲಿದೆ.ಕುಶಾಲನಗರ ಸಾಯಿಬಾಬಾ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳೊಂದಿಗೆ ಪ್ರಸಾದ ವಿತರಣೆ, ಮಧ್ಯಾಹ್ನ ಆರತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕುಶಾಲನಗರ ಶ್ರೀ ಅಯ್ಯಪ್ಪ ದೇವಾಲಯ, ಗೌರಿ ಗಣೇಶ ದೇವಾಲಯ, ಸುಬ್ರಹ್ಮಣ್ಯ ದೇವಾಲಯ, ಬೈಚನಹಳ್ಳಿ ಅಂತರ್ಗಟ್ಟೆ ಅಮ್ಮನವರ ದೇವಾಲಯ, ಮಾರಿಯಮ್ಮ ದೇವಾಲಯ, ಈಶ್ವರ ದೇವಾಲಯ, ಮುಳ್ಳುಸೋಗೆ ದೊಡ್ಡಮ್ಮ ದೇವಾಲಯ, ಕೋಣ ಮಾರಿಯಮ್ಮ ದೇವಾಲಯ, ಚೌಡೇಶ್ವರಿ ದೇವಾಲಯ, ಸೋಮೇಶ್ವರ ದೇವಾಲಯ, ಬಸವೇಶ್ವರ ದೇವಾಲಯ, ಬಲಮುರಿ ದೇವಾಲಯ, ಮುತ್ತಪ್ಪ ದೇವಾಲಯ ಸೇರಿದಂತೆ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಲಿವೆ ಎಂದು ದೇವಾಲಯಗಳ ಆಡಳಿತ ಮಂಡಳಿ ಪ್ರಮುಖರು ತಿಳಿಸಿದ್ದಾರೆ. ದೇವಾಲಯಗಳಲ್ಲಿ ಭಕ್ತಾದಿಗಳಿಗೆ ಪಾನಕ ವಿತರಣೆ ಕಾರ್ಯಕ್ರಮ ಕೂಡ ಹಮ್ಮಿಕೊಳ್ಳಲಾಗಿದೆ.

ಅಂದು ಸಂಜೆ ಕುಶಾಲನಗರ ಕೊಪ್ಪ ಗಡಿಭಾಗದ ಕಾವೇರಿ ನದಿಯ ಹಳೆಯ ಸೇತುವೆಯ ಮೇಲ್ಭಾಗದಲ್ಲಿ ಕಾವೇರಿ ಮಹಾ ಆರತಿ ಬಳಗದ ವತಿಯಿಂದ ಜೀವನದಿಗೆ ದೀಪಾರಾಧನೆ ಕಾರ್ಯಕ್ರಮ ನಡೆಯಲಿದೆ.

ಸುಂಟಿಕೊಪ್ಪ : ತಾ. ೨೨ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀರಾಮನ ಪ್ರತಿಷ್ಠಾಪನೆಯ ಅಂಗವಾಗಿ ಇಲ್ಲಿನ ಶ್ರೀ ಕೋದಂಡ ರಾಮ ಮಂದಿರದಲ್ಲಿ ಹಿಂದೂ ಸಂಘಟನೆಗಳಿAದ ಅದ್ಧೂರಿಯಾಗಿ ತಯಾರಿ ನಡೆಸಲಾಗುತ್ತಿದೆ. ಅಂದು ಬೆಳಿಗ್ಗೆ ೯ ಗಂಟೆಯಿAದ ಗೋ ಪೂಜೆ, ಗಣಪತಿ ಹೋಮ, ರಾಮತಾರಕ ಹೋಮ, ಮಹಾ ಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ. ನಂತರ ಅಯೋಧ್ಯೆಯಲ್ಲಿ ನಡೆಯುವ ಶ್ರೀ ರಾಮ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಎಲ್‌ಇಡಿ ಪರದೆಯ ಮೇಲೆ ನೆರೆದಿರುವ ಭಕ್ತರ ವೀಕ್ಷಣೆಗೆ ನೇರ ಪ್ರಸಾರವನ್ನು ಏರ್ಪಡಿಸಲಾಗಿದೆ. ಮಧ್ಯಾಹ್ನ ೧ ಗಂಟೆಯಿAದ ಅನ್ನ ಸಂತರ್ಪಣೆ ನಡೆಯಲಿದೆ. ಉದ್ಯಮಿ ಶಂತರಾಮ್ ಕಾರಂತ್, ಜಿಲ್ಲಾ ವಿಶ್ವ ಹಿಂದೂ ಪರಿಷತ್ ಮಾಜಿ ಕಾರ್ಯದರ್ಶಿ ಡಿ. ನರಸಿಂಹ, ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್. ಸುನೀಲ್ ಕುಮಾರ್, ಗೌರಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ಬಿ.ಎಂ. ಸುರೇಶ್, ವಿಶ್ವ ಹಿಂದೂ ಪರಿಷತ್‌ನ ಸಂಘ ಪರಿವಾರದ ಸದಸ್ಯರು ಕಾರ್ಯಕ್ರಮದ ಉಸ್ತುವಾರಿ ವಹಿಸಲಿದ್ದಾರೆ. ಈಗಾಗಲೇ ಕನ್ನಡ ವೃತ್ತದಿಂದ ಶ್ರೀ ರಾಮ ಮಂದಿರದವರೆಗೆ ಕೇಸರಿ ಧÀ್ವಜ ರಾರಾಜಿಸುತ್ತಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ನಾಕೂರು ಶಿರಂಗಾಲ ಶ್ರೀ ರಾಮಮಂದಿರದಲ್ಲಿ, ಕೆದಕಲ್ ಭದ್ರಕಾಳೇಶ್ವರಿ ದೇವಸ್ಥಾನದಲ್ಲಿ, ೭ನೇ ಹೊಸಕೋಟೆ ಮಹಾಗಣಪತಿ ದೇವಸ್ಥಾನದಲ್ಲಿ, ಕಂಬಿಬಾಣೆ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಲಿದೆ ಎಂದು ಸಂಘ ಪರಿವಾರದ ಪ್ರಮುಖರು ತಿಳಿಸಿದ್ದಾರೆ.ಚಿಕ್ಕಪೇಟೆ ಮಹಾವಿಷ್ಣು ದೇವಾಲಯದಲ್ಲಿ ದೀಪೋತ್ಸವ

ಮಡಿಕೇರಿ : ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ತಾ.೨೨ ರಂದು ವೀರಾಜಪೇಟೆ ಚಿಕ್ಕಪೇಟೆಯ ದೇವರಕಾಡು ರಸ್ತೆಯ ಶ್ರೀ ಮಹಾವಿಷ್ಣು ದೇವಾಲಯದಲ್ಲಿ ಬೆ ೮ ಗಂಟೆಯಿAದ ಶ್ರೀ ರಾಮ ನಾಮ ತಾರಕ ಯಜ್ಞ ಮತ್ತು ಶ್ರೀ ಮಹಾವಿಷ್ಣು ದೇವರಿಗೆ ವಿಶೇಷ ಪಂಚಾಮೃತ ಅಭಿಷೇಕ ಪೂಜೆ ನೆರವೇರಲಿದೆ. ನಂತರ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗವಿದೆ. ಸಂಜೆ ೬ ರಿಂದ ೭ ರವರೆಗೆ ವಿಶೇಷ ದೀಪೋತ್ಸವ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮಕ್ಕೆ ದೀಪ ಮತ್ತು ಎಣ್ಣೆಯನ್ನು ಭಕ್ತಾದಿಗಳೇ ತರಬೇಕಾಗಿ ದೇವಾಲಯ ಸಮಿತಿ ಪ್ರಕಟಣೆ ತಿಳಿಸಿದೆ.

ಚಿಕ್ಕಪೇಟೆ ಮಹಾವಿಷ್ಣು ದೇವಾಲಯದಲ್ಲಿ ದೀಪೋತ್ಸವ

ಮಡಿಕೇರಿ : ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ತಾ.೨೨ ರಂದು ವೀರಾಜಪೇಟೆ ಚಿಕ್ಕಪೇಟೆಯ ದೇವರಕಾಡು ರಸ್ತೆಯ ಶ್ರೀ ಮಹಾವಿಷ್ಣು ದೇವಾಲಯದಲ್ಲಿ ಬೆ ೮ ಗಂಟೆಯಿAದ ಶ್ರೀ ರಾಮ ನಾಮ ತಾರಕ ಯಜ್ಞ ಮತ್ತು ಶ್ರೀ ಮಹಾವಿಷ್ಣು ದೇವರಿಗೆ ವಿಶೇಷ ಪಂಚಾಮೃತ ಅಭಿಷೇಕ ಪೂಜೆ ನೆರವೇರಲಿದೆ. ನಂತರ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗವಿದೆ. ಸಂಜೆ ೬ ರಿಂದ ೭ ರವರೆಗೆ ವಿಶೇಷ ದೀಪೋತ್ಸವ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮಕ್ಕೆ ದೀಪ ಮತ್ತು ಎಣ್ಣೆಯನ್ನು ಭಕ್ತಾದಿಗಳೇ ತರಬೇಕಾಗಿ ದೇವಾಲಯ ಸಮಿತಿ ಪ್ರಕಟಣೆ ತಿಳಿಸಿದೆ.

ಇಡೀ ದೇಶವೇ ಎದುರು ನೋಡು ತ್ತಿರುವ ಅಯೋಧ್ಯೆ ಶ್ರೀರಾಮ ಮಂದಿರ ದಲ್ಲಿ ವೀರಾಜಮಾನ ವಾಗಲಿರುವ ಶ್ರೀರಾಮನ ವಿಗ್ರಹವನ್ನು ನಮ್ಮದೇ ರಾಜ್ಯದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತನೆ ಮಾಡಿದ್ದರೆ, ಸೋಮವಾರಪೇಟೆಯ ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೊಂಡು ನಿತ್ಯ ಪೂಜೆ ಸ್ವೀಕರಿಸುತ್ತಿರುವ ಶ್ರೀರಾಮನ ವಿಗ್ರಹ ಅರುಣ್ ಅವರ ತಂದೆ ಯೋಗಿರಾಜ್ ಅವರಿಂದ ನಿರ್ಮಿಸಲ್ಪಿಟ್ಟಿರುವುದು ವಿಶೇಷ. ತಾ.೦೫.೦೭.೧೯೯೯ರಲ್ಲಿ ಜೀರ್ಣೋದ್ದಾರಗೊಂಡ ಸೋಮವಾರಪೇಟೆಯ ಶ್ರೀರಾಮ ಮಂದಿರದಲ್ಲಿ ಪ್ರಸ್ತುತ ಪ್ರತಿಷ್ಠಾಪನೆಗೊಂಡಿರುವ ಶ್ರೀರಾಮ, ಸೀತೆ, ಲಕ್ಷö್ಮಣ ಹಾಗೂ ಹನುಮನ ವಿಗ್ರಹಗಳನ್ನು ಯೋಗಿರಾಜ್ ಅವರು ಕೆತ್ತನೆ ಮಾಡಿದ್ದರೆ, ತಾ. ೨೨ರಂದು ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆಗೊಳ್ಳುತ್ತಿರುವ ವಿಗ್ರಹವನ್ನು ಅವರ ಮಗ ಅರುಣ್ ಯೋಗಿರಾಜ್ ಕೆತ್ತನೆ ಮಾಡಿದ್ದಾರೆ. ಅಯೋಧ್ಯೆಯ ವಿಗ್ರಹಗಳು ಹಾಗೂ ಸೋಮವಾರಪೇಟೆ ಶ್ರೀರಾಮ ಮಂದಿರದ ವಿಗ್ರಹಗಳ ಶಿಲ್ಪಕಲೆಯನ್ನು ಅಪ್ಪ-ಮಗ ನಿರ್ವಹಿಸಿರುವುದು ವಿಶೇಷ. ಕಳೆದ ೮ ವರ್ಷಗಳಿಂದ ಇಲ್ಲಿನ ಶ್ರೀರಾಮ ಮಂದಿರದಲ್ಲಿ ಮೋಹನ್‌ಮೂರ್ತಿ ಶಾಸ್ತಿçÃಗಳು ನಿತ್ಯಪೂಜೆ ನೆರವೇರಿಸುತ್ತಿದ್ದಾರೆ.ಬಾಲಾಂಜನೇಯ ದೇವಾಲಯದಲ್ಲಿ ಪೂಜೆ

ಅಯೋಧ್ಯೆಯಲ್ಲಿ ರಾಮನ ಮೂರ್ತಿಯ ಪ್ರತಿಷ್ಠಾಪನೆಯ ಹಿನೆÀ್ನಲೆಯಲ್ಲಿ ತಾ.೨೨ರಂದು ವೀರಾಜಪೇಟೆಯ ಬಾಲಾಂಜನೇಯ ದೇವಾಲಯದಲ್ಲಿ ಶ್ರೀ ಬಾಲಾಂಜನೇಯ ಗಣಪತಿ ಸೇವಾ ಸಮಿತಿಯ ವತಿಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಬೆಳಿಗ್ಗೆ ೯:೩೦ ರಿಂದ ವಿಶೇಷ ಪೂಜೆ ಸೇರಿದಂತೆ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಬೆಳಿಗ್ಗೆ ೧೦:೩೦ರಿಂದ ಅಯೋಧ್ಯೆಯಲ್ಲಿ ಶ್ರೀ ರಾಮನ ಮೂರ್ತಿಯ ಪ್ರತಿಷ್ಠಾಪನೆಯ ಧಾರ್ಮಿಕ ಕಾರ್ಯವನ್ನು ದೇವಾಲಯದ ಬಳಿ ಅಳವಡಿಸಿದ ಬೃಹತ್ ಎಲ್.ಇ.ಡಿ ಪರದೆಯಲ್ಲಿ ನೇರಪ್ರಸಾರ ಮಾಡಲಾಗುವುದು. ಪೂಜೆಯ ಬಳಿಕ ಕೋಸಂಬರಿ ಪಾನಕ ಹಾಗೂ ಪ್ರಸಾದ ವಿತರಿಸಲಾಗುವುದು.

ಸಂಜೆ ೬:೩೦ಕ್ಕೆ ದೇವಾಲಯದ ಆವರಣವನ್ನು ದೀಪಗಳಿಂದ ಅಲಂಕೃತಗೊಳಿಸಲಾಗುವುದು. ಬಳಿಕ ರಾಮಾಯಣದ ಕಥಾವಸ್ತುವನ್ನು ಒಳಗೊಂಡ ಚಲನಚಿತ್ರವನ್ನು ಎಲ್.ಇ.ಡಿ ಪರದೆಯಲ್ಲಿ ಪ್ರದರ್ಶಿಸಲಾಗುವುದು. ಸೇವಾ ಸಮಿತಿಯ ವತಿಯಿಂದ ರಾತ್ರಿ ಅನ್ನಸಂತರ್ಪಣೆಯನ್ನು ಕೈಗೊಳ್ಳಲಾಗುವುದು.ಮೃತ್ಯುಂಜಯ ದೇವಸ್ಥಾನದಲ್ಲಿ ಭಜನೆ

ಮಡಿಕೇರಿ : ಪೊನ್ನಂಪೇಟೆ ತಾಲೂಕು ಬಾಡಗರಕೇರಿಯ ಶ್ರೀ ಮೃತ್ಯುಂಜಯ ದೇವಸ್ಥಾನದಲ್ಲಿ ತಾ. ೨೨ ರಂದು ಅಯೋಧ್ಯೆಯಲ್ಲಿ ನಡೆಯುವ ರಾಮನ ಪ್ರಾಣ ಪ್ರತಿಷ್ಠಾಪನೆಯ ಮತ್ತು ನೇರ ಪ್ರಸಾರದÀ ವ್ಯವಸ್ಥೆ ಮಾಡಲಾಗುವುದು. ರಾಮ ಭಜನೆ, ಹಾಡು ಬೆಳಿಗ್ಗೆ ರಾಮ ಭಜನೆ, ಹಾಡು ಬೆಳಿಗ್ಗೆ ೯.೩೦ ಗಂಟೆಯಿAದ ಮಧ್ಯಾಹ್ನ ೧೨.೧೫ ಗಂಟೆವರೆಗೆ ನಡೆಯಲಿದೆೆ.

ರಾಮನ ಪ್ರತಿಷ್ಠಾಪನೆ ವೇಳೆ ಮಧ್ಯಾಹ್ನ ೧೨.೨೦ ಗಂಟೆಗೆ ರುದ್ರಾಭಿಷೇಕ ಪೂಜೆ ನಡೆಯಲಿದ್ದು, ಉಳಿದ ಪೂಜಾ ಕಾರ್ಯಗಳು ಎಂದಿನAತೆ ನಡೆಯಲಿವೆ ಎಂದು ಶ್ರೀ ಮೃತ್ಯುಂಜಯ ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.

ಪೊನ್ನಂಪೇಟೆ ತಾಲೂಕಿನ ವಿವಿಧ ದೇವಸ್ಥಾನಗಳಲ್ಲಿ ವಿಶೇಷÀ ಪೂಜೆ, ಭಜನೆ, ಅನ್ನಸಂತರ್ಪಣೆ

ಪೊನ್ನAಪೇಟೆ : ತಾ.೨೨ ರ ಸೋಮವಾರದಂದು ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನ ಕಾರ್ಯಕ್ರಮ ನಿಮಿತ್ತ ಪೊನ್ನಂಪೇಟೆ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ಎಲ್ಲಾ ದೇವರಿಗೂ ಅಭಿಷೇಕ ನಡೆಸಲಾಗುತ್ತದೆ. ಬೆಳಿಗ್ಗೆ ೧೦ ಗಂಟೆಯಿAದ ೧೧.೩೦ ರವರೆಗೂ ಭಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಬೆಳಿಗ್ಗೆ ೧೧.೩೦ಕ್ಕೆ ಶ್ರೀ ಬಸವೇಶ್ವರ ದೇವರಿಗೆ ರುದ್ರಾಭಿಷೇಕ, ಮಧ್ಯಾಹ್ನ ೧೨.೩೦ಕ್ಕೆ ಮಹಾ ಮಂಗಳಾರತಿ ನಡೆಯಲಿದೆ. ಸಾರ್ವಜನಿಕರ ಸಹಾಯದೊಂದಿಗೆ ಅನ್ನದಾನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸಂಜೆ ೫.೨೦ಕ್ಕೆ ಮಂಗಳಾರತಿ ನಂತರ ದೀಪ ಬೆಳಗಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಪೊನ್ನಂಪೇಟೆ ಸಮೀಪದ ನಡಿಕೇರಿ ಗೋವಿಂದಸ್ವಾಮಿ ದೇವಸ್ಥಾನದಲ್ಲಿ ಸತ್ಯನಾರಾಯಣ ಪೂಜೆ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಶ್ರೀರಾಮ ಪ್ರತಿಷ್ಠಾಪನ ಕಾರ್ಯಕ್ರಮವನ್ನು ಎಲ್‌ಇಡಿ ಪ್ರೊಜೆಕ್ಟರ್ ಮೂಲಕ ನೇರಪ್ರಸಾರ ಮಾಡಲಾಗುತ್ತದೆ. ಭಕ್ತಾದಿಗಳಿಗೆ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿದೆ.

ಪೊನ್ನಂಪೇಟೆ ಸಮೀಪದ ಮುಗುಟಗೇರಿ ಶ್ರೀ ತೊಣಕೇರಿ ಭಗವತಿ ದೇವಸ್ಥಾನದಲ್ಲಿ ಸತ್ಯನಾರಾಯಣ ಪೂಜೆ ಹಮ್ಮಿಕೊಳ್ಳಲಾಗಿದ್ದು, ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ.

ಹಳ್ಳಿಗಟ್ಟು ಶ್ರೀ ಭದ್ರಕಾಳಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ.

ಬಲ್ಯಮಂಡೂರು ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನ, ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ, ಶ್ರೀ ಭದ್ರಕಾಳಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಲಿದೆ. ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಮಹಾ ಪೂಜೆಯ ನಂತರ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ.

ಬಿರುನಾಣಿ ಶ್ರೀ ಪುತ್ತು ಭಗವತಿ ದೇವಸ್ಥಾನದಲ್ಲಿ ಸಾಮೂಹಿಕ ಸತ್ಯ ನಾರಾಯಣ ಪೂಜೆ ಮತ್ತು ಭಜನೆ ಕಾರ್ಯಕ್ರಮ ನಡೆಯಲಿದೆ. ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ.

ನಿಟ್ಟೂರು -ಕಾರ್ಮಾಡು ಶ್ರೀ ಕಾಲ ಭೈರವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಮತ್ತು ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ.

ದೇವನೂರು ಶ್ರೀ ನಾರಮನೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ, ಭಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ.