ಮಡಿಕೇರಿ, ಜ. ೧೧: ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ತಾ.೧೭ರಂದು ಪ್ಯಾಶನ್ ಫ್ರೂಟ್ ಮತ್ತು ಪಪ್ಪಾಯಿ ಹಣ್ಣಿನ ಪ್ರದರ್ಶನ ಮತ್ತು ಅವುಗಳ ಕುರಿತಾದ ಚರ್ಚೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಕೇಂದ್ರದ ವಿಜ್ಞಾನಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪ್ಯಾಶನ್ ಫ್ರೂಟ್ ಮತ್ತು ಪಪ್ಪಾಯಿ ಹಣ್ಣಿನಲ್ಲಿರುವ ವೈವಿಧ್ಯತೆ ಯನ್ನು ದಾಖಲು ಮಾಡುವುದು. ಉತ್ತಮವಾದ ಮತ್ತು ವಿಶೇಷ ಗುಣಗ ಳನ್ನು ಹೊಂದಿರುವ ವೈವಿಧ್ಯಮಯ ಪ್ಯಾಶನ್ ಫ್ರೂಟ್ ಮತ್ತು ಪಪ್ಪಾಯಿ ಗಿಡಗಳನ್ನು ಗುರುತಿಸಿ ಸಂರಕ್ಷಿಸುವುದು. ರೈತರಿಗೆ ಪ್ಯಾಶನ್ ಫ್ರೂಟ್ ಮತ್ತು ಪಪ್ಪಾಯಿ ಹಣ್ಣಿನಲ್ಲಿರುವ ವೈವಿಧ್ಯತೆಯ ಬಗ್ಗೆ ಅರಿವನ್ನು ಮೂಡಿಸುವುದು. ಅವುಗಳ ಉತ್ತಮ ಕೃಷಿ ಪದ್ಧತಿಗಳು ಮತ್ತು ಮೌಲ್ಯವರ್ಧನೆ ಬಗ್ಗೆ ಮಾಹಿತಿ ನೀಡುವುದು. ಉತ್ತಮವಾದ ಮತ್ತು ಆಕರ್ಷಕವಾದ ಮಾದರಿಗಳಿಗೆ ನಗದು ಬಹುಮಾನ ನೀಡಿ ಬೆಳೆಗಾರರನ್ನು ಪ್ರೋತ್ಸಾಹಿಸುವುದು ಈ ಕಾರ್ಯ ಕ್ರಮದ ಮುಖ್ಯ ಉದ್ದೇಶವಾಗಿದೆ. ಈ ಕಾರ್ಯಕ್ರಮದಲ್ಲಿ ಬೆಳೆಗಾರರು ಪ್ಯಾಶನ್ ಫ್ರೂಟ್ ಮತ್ತು ಪಪ್ಪಾಯಿ ಹಣ್ಣುಗಳಲ್ಲಿರುವ ವೈವಿಧ್ಯತೆಯನ್ನು ಪ್ರದರ್ಶಿಸಬಹುದು. ಹಣ್ಣಿನ ಮಾದರಿಗಳನ್ನು ಪ್ರದರ್ಶಿಸಿದ ಎಲ್ಲಾ ಬೆಳೆಗಾರರಿಗೂ ಪ್ರಮಾಣ ಪತ್ರವನ್ನು ನೀಡಲಾಗುವುದು. ಪ್ರದರ್ಶಿಸಲ್ಪಟ್ಟ ಪ್ಯಾಶನ್ ಫ್ರೂಟ್ ಮತ್ತು ಪಪ್ಪಾಯಿ ಹಣ್ಣುಗಳಲ್ಲಿ ಉತ್ತಮವಾದ ಮತ್ತು ವಿಶೇಷವಾದ ಗುಣಗಳನ್ನು ಹೊಂದಿರುವ ಮೂರು ಹಣ್ಣಿನ ಮಾದರಿಗಳನ್ನು ಆಯ್ಕೆ ಮಾಡಿ ತಲಾ ರೂ. ೧೦೦೦೦, ರೂ.೭೦೦೦ ಮತ್ತು ರೂ. ೩೦೦೦ಗಳನ್ನು ಮೊದಲನೇ, ಎರಡನೇ ಮತ್ತು ಮೂರನೆಯ ಬಹುಮಾನವಾಗಿ ನೀಡಿ ಬೆಳೆಗಾರರನ್ನು ಪ್ರೋತ್ಸಾಹಿ¸ Àಲಾಗುವುದು ಎಂದು ಅವರುಗಳು ಮಾಹಿತಿಯಿತ್ತರು. ಆರ್ದ್ರ ಉಷ್ಣ ವಲಯದ ವಾತಾವರಣದಲ್ಲಿ ಬೆಳೆದಿರುವಂತಹ ಪ್ಯಾಶನ್ ಫ್ರೂಟ್ ಮತ್ತು ಪಪ್ಪಾಯಿ ಹಣ್ಣಿನ ಮಾದರಿಗಳನ್ನು ಮಾತ್ರ ಬೆಳೆಗಾರರು ಈ ಕಾರ್ಯಕ್ರಮದಲ್ಲಿ ಪ್ರದರ್ಶಿಸಬ ಹುದು. ಪ್ರದರ್ಶಿಸಿದ ಹಣ್ಣಿನ ಮಾದರಿಗಳು ಸೇವನೆಗೆ ಸೂಕ್ತವಾಗಿರಬೇಕು. ಒಬ್ಬ ಬೆಳೆಗಾರ ಎಷ್ಟು ಮಾದರಿಗಳನ್ನಾದರೂ ಪ್ರದರ್ಶಿಸಬಹುದು. ಆದರೆ ಪ್ಯಾಶನ್ ಫ್ರೂಟ್ ಮತ್ತು ಪಪ್ಪಾಯಿ ಹಣ್ಣಿನ ಮಾದರಿಗಳು ಒಂದಕ್ಕಿAತ ಒಂದು ವಿಭಿನ್ನವಾಗಿರಬೇಕು. ಬೀಜದಿಂದ ಬೆಳೆದಂತಹ ಸ್ಥಳೀಯ ಅಥವಾ ಸಂರಕ್ಷಿತ ಪ್ಯಾಶನ್ ಫ್ರೂಟ್ ಮತ್ತು ಪಪ್ಪಾಯಿ ಹಣ್ಣಿನ ಮಾದರಿಗಳನ್ನು ಪ್ರದರ್ಶಿಸಬೇಕು. ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಿAದ ಬಿಡುಗಡೆಗೊಂಡಿರುವAತಹ ತಳಿಗಳ ಹಣ್ಣುಗಳನ್ನು ಪ್ರದರ್ಶಿಸುವಂತಿಲ್ಲ.
ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರು ತಾ. ೧೭ಕ್ಕೂ ಮುಂಚಿತವಾಗಿ ೭೮೯೨೮೮೨೩೫೧ ದೂರವಾಣಿಗೆ ಸಂಪರ್ಕಿಸಿ ನೋಂದಣಿ ಮಾಡಿಕೊಳ್ಳಬೇಕು. ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ ಎಂದು ಅವರುಗಳು ವಿವರಿಸಿದರು.
ಗೋಷ್ಠಿಯಲ್ಲಿ ಕೇಂದ್ರದ ಮುಖ್ಯಸ್ಥರು, ಹಿರಿಯ ಮಣ್ಣು ವಿಜ್ಞಾನಿ ಡಾ. ಎಸ್. ರಾಜೇಂದಿರನ್, ಹಣ್ಣು ವಿಜ್ಞಾನಿಗಳಾದ ಡಾ. ಬಿ.ಎಂ. ಮುರಳೀಧರ್, ಡಾ. ನಯನ್ ದೀಪಕ್, ಕೀಟ ವಿಜ್ಞಾನಿ ಡಾ. ಎ.ಟಿ. ರಾಣಿ ಉಪಸ್ಥಿತರಿದ್ದರು.