ಶ್ರೀಮಂಗಲ, ಜ. ೧೧: ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಕಾಫಿ ಗಿಡಗಳಲ್ಲಿ ಅವಧಿ ಪೂರ್ವವಾಗಿ ಹೂವು ಅರಳಿದೆ. ಕಾಫಿ ಹಣ್ಣು ಕುಯ್ಲು ಆಗದೆ ಅವಧಿಪೂರ್ವವಾಗಿ ಹೂವು ಅರಳಿರುವುದರಿಂದ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಲ್ಲದೆ, ಇದರಿಂದ ಕಾಫಿ ಕುಯ್ಲು ಕೆಲಸವನ್ನು ಸ್ಥಗಿತ ಮಾಡಲಾಗಿದೆ. ಕಾಫಿ ಹಣ್ಣುಗಳನ್ನು ಈ ಸಮಯದಲ್ಲಿ ಕುಯ್ಯುವುದರಿಂದ ಹೂವುಗಳಿಗೆ ಹಾನಿಯಾಗಿ ಮುಂದಿನ ವರ್ಷದ ಕಾಫಿ ಫಸಲಿಗೆ ಹಾನಿಯಾಗುವುದನ್ನು ತಡೆಯಲು ಕಾಫಿ ಕುಯ್ಲು ಕೆಲಸವನ್ನು ಸ್ಥಗಿತ ಮಾಡಲಾಗಿದೆ. ಅಕಾಲಿಕ ಮಳೆಯಿಂದ ವ್ಯಾಪಕವಾಗಿ ಹಣ್ಣುಗಳು ಉದುರಿದ್ದು ಕಾಫಿ ಹಣ್ಣುಗಳು ಸಹ ಸೀಳಿ ನೆಲಕ್ಕೆ ಬಿದ್ದಿರುವುದರಿಂದ ಬೆಳೆ ನಷ್ಟ ಅನುಭವಿಸುವಂತಾಗಿದೆ ಎಂದು ಬೆಳೆಗಾರರು ನೋವು ತೋಡಿಕೊಂಡಿದ್ದಾರೆ.
-ಹರೀಶ್ ಮಾದಪ್ಪ