ಅಯೋಧ್ಯೆಯ ಶ್ರೀ ರಾಮ ಮಂದಿರದ ಅಡಿಪಾಯಕ್ಕೆ ಬಳಕೆಯಾಗಿರುವ ಕಲ್ಲುಗಳು ಕರ್ನಾಟಕ ಮೂಲದವು. ಹಾಗೇ ಇದೀಗ
ಶ್ರೀ ರಾಮ ಮಂದಿರದ ಗರ್ಭಗೃಹದಲ್ಲಿ ಪ್ರಾಣ ಪ್ರತಿಷ್ಠಾಪನೆಯಾಗಲಿರುವ ಬಾಲರಾಮನ ಮೂರ್ತಿಗಳನ್ನೂ ಕೂಡ ಕನ್ನಡಿಗರೇ ಕೆತ್ತಿದ್ದಾರೆ ಎಂಬುದು ವಿಶೇಷ. ಈ ಮೂಲಕ ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಕನ್ನಡದ ಕಂಪು ಶಿಲ್ಪಕಲೆಯಲ್ಲಿ ಕಂಗೊಳಿಸುವAತಾಗಿದೆ.
ತಾ. ೨೨ ರಂದು ಶ್ರೀ ರಾಮನ ಮಂದಿರದಲ್ಲಿ ಬಾಲರಾಮನ ಪ್ರತಿಮೆ ಸಾಂಪ್ರದಾಯಿಕವಾಗಿ ಪ್ರತಿಷ್ಠಾಪನೆಯಾಗಲಿದೆ. ಬಾಲರಾಮನ ಮೂರ್ತಿಯನ್ನು ರಾಮನ ಮಂದಿರಕ್ಕಾಗಿ ಕೆತ್ತಿದ ಭಾರತದ ಮೂವರು ಶಿಲ್ಪಿಗಳಲ್ಲಿ ಕರ್ನಾಟಕದ ಅರುಣ್ ಯೋಗಿರಾಜ್ ಮತ್ತು ಇಡಗುಂಜಿಯ ಗಣೇಶ್ ಎಲ್. ಭಟ್ ಸ್ಥಾನ ಪಡೆದಿದ್ದಾರೆ. ಯೋಗಿರಾಜ್ ಮತ್ತು ಗಣೇಶ್ ಭಟ್ ಇವರೀರ್ವರ ಪೈಕಿ ಒಬ್ಬರ ವಿಗ್ರಹ ರಾಮನ ಮಂದಿರದಲ್ಲಿ ಸ್ಥಾನ ಪಡೆಯಲಿದೆ.
ಭಾರತದಲ್ಲಿಯೇ ವಿಶೇಷವಾದ ಗಣೇಶನ ಮೂರ್ತಿಗೆ ಹೆಸರುವಾಸಿಯಾದ ಹೊನ್ನಾವರದ ಇಡಗುಂಜಿ ಗಣೇಶ ದೇವಾಲಯದ ಪ್ರಧಾನ ಅರ್ಚಕರ ಮಗನಾಗಿ ಬಾಲ್ಯದಿಂದಲೂ ವಿಶಿಷ್ಟ ಶಿಲ್ಪಕಲೆಯಲ್ಲಿ ರೂಪುಗೊಂಡ ಇಡಗುಂಜಿ ಗಣೇಶನನ್ನೇ ನೋಡುತ್ತಾ ಬೆಳೆದ ಗಣೇಶ್ ಭಟ್, ಭಾರತೀಯ ಶಿಲ್ಪ ಕಲೆಯ ಬಗ್ಗೆ ಒಲವು ಹೊಂದುತ್ತಾರೆ. ತಂದೆಯ ಪ್ರೋತ್ಸಾಹ ಕೂಡ ಇವರನ್ನು ಶಿಲ್ಪಕಲಾವಿದನನ್ನಾಗಿ ರೂಪಿಸುತ್ತದೆ. ಶಿಲ್ಪಕಲಾ ಶಾಸ್ತçದ ಬಗ್ಗೆ ಅಧ್ಯಯನ ಮಾಡಲೆಂದೇ ಗಣೇಶ್ ಭಟ್ ಭಾರತದ ವಿವಿಧ ದೇವಾಲಯಗಳಿಗೂ ಭೇಟಿ ನೀಡಿ ಮಹತ್ವದ ಅಂಶಗಳನ್ನು ಕಲಿಯುತ್ತಾರೆ.
ಹೀಗಾಗಿಯೇ ಗಣೇಶ್ ಭಟ್ ರಚಿಸಿದ ಎಲ್ಲಾ ಶಿಲ್ಪಗಳಲ್ಲಿಯೂ ಭಾರತೀಯ ಸಾಂಪ್ರದಾಯಿಕ ಶಿಲ್ಪಕಲೆಗೆ ಆದ್ಯತೆ ನೀಡಲಾಗಿದೆ. ಮತ್ತೊಂದು ರೀತಿಯಲ್ಲಿ ಭಾರತದ ಸಾಂಪ್ರದಾಯಿಕ ಶಿಲ್ಪಕಲೆಯನ್ನು ಮುಂದಿನ ತಲೆಮಾರಿಗೆ ಪರಿಚಯಿಸುವ ರಾಯಭಾರಿಯಾಗಿ ಗಣೇಶ್ ಭಟ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಬೆಂಗಳೂರು ಬಳಿಯ ಬಿಡದಿಯಲ್ಲಿನ ಕೆನರಾ ಬ್ಯಾಂಕ್ ಪ್ರಾಯೋಜಿತ ಕರಕುಶಲ ತರಬೇತಿ ಕೇಂದ್ರದಲ್ಲಿ ಪ್ರಾಂಶುಪಾಲನಾಗಿಯೂ ಕಾರ್ಯನಿರ್ವಹಿಸಿದ್ದ ಗಣೇಶ್ ಭಟ್, ಅಲ್ಲಿಯೂ ೧೮ ವರ್ಷಗಳ ಕಾಲ ೬೦೦ ಕ್ಕೂ ಅಧಿಕ ಶಿಲ್ಪ ಕಲಾವಿದರನ್ನು ತರಬೇತುಗೊಳಿಸಿದ್ದಾರೆ. ದೇಶ ವಿದೇಶಗಳ ಪ್ರತಿಷ್ಠಿತ ೪೦ ಪ್ರಶಸ್ತಿಗಳೂ ಈವರೆಗೆ ಗಣೇಶ್ ಭಟ್ ಅವರಿಗೆ ಸಂದಿದೆ. ವೈದಿಕ ಪರಂಪರೆಯ ಹಿನ್ನೆಲೆಯಾದರೂ ಶಿಲ್ಪಕಲೆಯಲ್ಲಿನ ಆಕರ್ಷಣೆ, ಪರಿಶ್ರಮ ಇವರನ್ನು ಶಿಲ್ಪಕಲಾವಿದರನ್ನಾಗಿಸಿತು. ಭಾರತೀಯ ಸಾಂಪ್ರದಾಯಿಕ ಶಿಲ್ಪಕಲೆಯನ್ನೇ ಪ್ರಧಾನವಾಗಿ ಪ್ರಚುರಪಡಿಸುತ್ತಿರುವ ಗಣೇಶ್ ಭಟ್, ತಾನು ಮನದಲ್ಲಿ ಕಂಡAತೆ ಬಾಲರಾಮನನ್ನು ಅಯೋಧ್ಯೆಯಲ್ಲಿ ರೂಪಿಸಿ ಗಮನ ಸೆಳೆದಿದ್ದಾರೆ.
ಅಯೋಧ್ಯೆಯಲ್ಲಿ ೭ ತಿಂಗಳ ಕಾಲ ಕಠಿಣ ಪರಿಶ್ರಮದಿಂದ ಬಾಲರಾಮನ ಮೂರ್ತಿಯನ್ನು ೮ ಮಂದಿಯ ಶಿಲ್ಪಕಲಾ ತಂಡದೊAದಿಗೆ ರೂಪಿಸಿದ ಕರ್ನಾಟಕದ ಹೆಮ್ಮೆಯ ಶಿಲ್ಪ ಕಲಾವಿದ ಗಣೇಶ್ ಎಲ್. ಭಟ್ ‘ಶಕ್ತಿ’ಗೆ ವಿಶೇಷ ಸಂದರ್ಶನ ನೀಡಿದ್ದಾರೆ. ತನ್ನನ್ನು ಹೇಗೆ ಆಯ್ಕೆ ಮಾಡಿಕೊಳ್ಳಲಾಯಿತು ಎಂದು ಈವರೆಗೂ ತನಗೆ ತಿಳಿದಿಲ್ಲ. ಶ್ರೀ ರಾಮನ ಇಚ್ಚೆಯೇ ಇದಕ್ಕೆ ಕಾರಣವಾಗಿರಬಹುದೇನೋ ಎಂದು ‘ಶಕ್ತಿ’ ಸಂದರ್ಶನದಲ್ಲಿ ಭಾವುಕರಾಗಿ ಹೇಳಿದ ಗಣೇಶ್ ಭಟ್, ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ತಾನು ರೂಪಿಸಿದ ಬಾಲರಾಮ ಭಕ್ತರ ನಮಸ್ಕಾರಕ್ಕೆ ಪಾತ್ರವಾಗುವುದಕ್ಕಿಂತ ಜೀವನದ ಸಾರ್ಥಕತೆ ಬೇರೇನಿದೆ ಎಂದಿದ್ದಾರೆ. ಸಂದರ್ಶನದ ಮುಖ್ಯಾಂಶಗಳು ಇಲ್ಲಿದೆ.
- ನೀವು ರಚಿಸಿದ ಶಿಲ್ಪಕಲಾ ಮೂರ್ತಿಗಳ ಬಗ್ಗೆ ಹೇಳಿ
ನಾನು ಈವರೆಗೂ ೨ ಸಾವಿರಕ್ಕೂ ಅಧಿಕ ವಿಗ್ರಹಗಳನ್ನು ರೂಪಿಸಿದ್ದೇನೆ. ಭಾರತದ ವಿವಿಧ ದೇವಾಲಯ ಮಾತ್ರವಲ್ಲದೇ ವಿದೇಶಗಳಲ್ಲಿಯೂ ನಾನು ರೂಪಿಸಿದ ಕಲಾಶಿಲ್ಪಗಳು ಸ್ಥಾನ ಪಡೆದಿದೆ. ವಿದೇಶದಲ್ಲಿಯೂ ಭಾರತೀಯ ಶಿಲ್ಪಕಲೆಯ ರಾಯಭಾರಿಯಾಗಿ ಕಾರ್ಯನಿರ್ವಹಿಸಿದ್ದೆ. ಅಂರ್ರಾಷ್ಟಿçÃಯ ಶಿಲ್ಪಕಲಾ ಉತ್ಸವದಲ್ಲಿ ಆಕ್ಸ್ಫರ್ಡ್ನಲ್ಲಿ ಪಾಲ್ಗೊಂಡು ಭಾರತದ ವಿವಿಧ ಕಲಾ ಪರಂಪರೆಗಳ ಬಗ್ಗೆ ಮಾಹಿತಿ ನೀಡಿದ್ದೇನೆ. ೧೮ ವರ್ಷಗಳಲ್ಲಿ ಪ್ರತೀ ವರ್ಷವೂ ನಾನಲ್ಲಿಗೆ ತೆರಳಿ ಭಾರತೀಯ ಕಲಾಪ್ರಕಾರ, ಕಲಾ ಪ್ರಚಾರ, ಸೃಷ್ಟಿಯ ವಿಧಿವಿಧಾನಗಳು, ಭಾರತೀಯ ಶಿಲ್ಪ ಶಾಸ್ತçದ ವಿಧಿ ವಿಧಾನಗಳನ್ನು ಯುರೋಪಿಯನ್ನರಿಗೆ ತಿಳಿಸುತ್ತಾ ಬಂದಿದ್ದೇನೆ. ನಾನು ಕೆತ್ತಿದ ಅನೇಕ ಶಿಲ್ಪಗಳು ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲಿಯೂ ಸ್ಥಾಪಿಸಲ್ಪಟ್ಟಿದೆ.
ಐರ್ಲೆಂಡ್ ಕಲಾ ಉತ್ಸವದಲ್ಲಿ, ಇಂಗ್ಲೆAಡ್, ಫ್ರಾನ್ಸ್, ಅಮೇರಿಕಾ, ಜರ್ಮನಿಯಲ್ಲಿಯೂ ನಾನು ರಚಿಸಿದ ಮೂರ್ತಿಗಳನ್ನು, ದೇವಾಲಯಗಳಲ್ಲಿ, ಸ್ವಂತ ಕಟ್ಟಡದಲ್ಲಿ ಅಲಂಕಾರಿಕವಾಗಿ ಇರಿಸಿದ್ದಾರೆ. ನೂರಾರು ವಿಗ್ರಹಗಳನ್ನು ನೀಡಿದ್ದೇನೆ. ಇಡುಗುಂಜಿಯ ೨ ಸಾವಿರಕ್ಕೂ ಅಧಿಕ ವರ್ಷಗಳ ಹಿಂದಿನ ಇತಿಹಾಸವುಳ್ಳ ಹೊಟ್ಟೆಗೆ ಸುತ್ತಿದ ಸರ್ಪ, ಕಿರೀಟ ಇಲ್ಲದ ವಿಭಿನ್ನ ಗಣೇಶನ ಶಿಲ್ಪವೂ ಇಂಗ್ಲೆAಡ್ನ ಅನೇಕರ ಮನೆಗಳಲ್ಲಿ ನವ್ಯ ವಿನ್ಯಾಸವಾಗಿ ಇದೆ.
ನೃತ್ಯದ ಅನೇಕ ಭಂಗಿಗಳಲ್ಲಿನ ಗಣೇಶ, ಕಾರ್ತಿಕೇಯ, ವಾಲ್ಮೀಕಿ, ಸರಸ್ವತಿ ಸೇರಿದಂತೆ ೨ ಸಾವಿರಕ್ಕೂ ಅಧಿಕ ಶಿಲ್ಪಗಳನ್ನು ಕೆತ್ತಿದ್ದೇನೆ. ಬೇರೆ ಬೇರೆ ಎತ್ತರದ ಶಿಲ್ಪಗಳನ್ನು ಕೆತ್ತಿದ್ದೇನೆ. ಅಮೇರಿಕಾದ ದೇವಾಲಯದಲ್ಲಿ ಆಂಜನೇಯನ ೭ ಅಡಿ ಎತ್ತರದ ವಿಗ್ರಹ ಇದ್ದರೆ, ಬರ್ನಿಂಗ್ಹ್ಯಾಮ್ನ ದೇವ ಮಂದಿರಕ್ಕಾಗಿ ಗರುಡನ ೧೪ ಅಡಿ ಎತ್ತರದ ಶಿಲ್ಪ ಕೆತ್ತಿ ಕೊಟ್ಟಿದ್ದೇನೆ.
- ಅಯೋಧ್ಯೆಯಲ್ಲಿ ರಾಮನ ವಿಗ್ರಹ ಕೆತ್ತಲು ಆಹ್ವಾನ ಬಂದದ್ದು ಹೇಗೆ?
೨೦೨೩ ರ ಫೆಬ್ರವರಿ ೭ ರಂದು ಇಡಗುಂಜಿಯ ಗಣೇಶನ ಸನ್ನಿಧಿಯಲ್ಲಿದ್ದೆ. ಆ ಸಮಯದಲ್ಲಿಯೇ ಅಯೋಧ್ಯೆಯಿಂದ ಶ್ರೀ ರಾಮ ಮಂದಿರ ತೀರ್ಥಕ್ಷೇತ್ರ ಟ್ರಸ್ಟ್ನ ಸದಸ್ಯರೋರ್ವರು ಕರೆ ಮಾಡಿ ರಾಮನ ವಿಗ್ರಹ ಕೆತ್ತುವ ಸಂಕಲ್ಪದ ಕಾರ್ಯಕ್ಕೆ ಆಹ್ವಾನ ನೀಡಿದರು. ಇದು ಇಡಗುಂಜಿ ಗಣೇಶನ ಕೃಪೆ ಎಂದೇ ಭಾವಿಸಿ ರಾಮನ ವಿಗ್ರಹ ಕೆತ್ತುವ ಆಹ್ವಾನ ಒಪ್ಪಿಕೊಂಡೆ. ಕೂಡಲೇ ಅಯೋಧ್ಯೆಗೆ ತೆರಳಬೇಕಾಯಿತು. ಅಲ್ಲಿ ದೇಶದ ವಿವಿಧೆಡೆಗಳಿಂದ ೧೦ ಹೆಸರಾಂತ ಶಿಲ್ಪಕಾರರು ಆಯ್ಕೆ ಪ್ರಕ್ರಿಯೆಯ ಅಂತಿಮ ಹಂತಕ್ಕೆ ಬಂದಿದ್ದರು. ಅಂತಿಮವಾಗಿ ನನ್ನೊಂದಿಗೆ ಮೈಸೂರಿನ ಅರುಣ್ ಯೋಗಿರಾಜ್, ರಾಜಾಸ್ಥಾನದ ಸತ್ಯನಾರಾಯಣ ಪಾಂಡೆ ಆಯ್ಕೆಯಾದೆವು.
- ನೀವು ಆಯ್ಕೆಯಾದಾಗ ಏನನ್ನಿಸಿತು?
ಇಡಗುಂಜಿ ಗಣೇಶ ನನ್ನನ್ನು ಅಯೋಧ್ಯೆಯ ರಾಮಲಲ್ಲಾನ ಮೂರ್ತಿ ಕೆತ್ತಲು ಕಳುಹಿಸಿದ್ದಾನೆ. ಮುಂದೆ, ಶ್ರೀ ರಾಮನೇ ಎಲ್ಲವನ್ನೂ ನೋಡಿಕೊಳ್ಳಲಿದ್ದಾನೆ ಅನಿಸಿತು. ದೇವಾಲಯ ಅರ್ಚಕರ ಮಗನೋರ್ವನಿಗೆ ಅಯೋಧ್ಯೆಯಲ್ಲಿ ರಾಮ ಮಂದಿರದ ರಾಮನ ಪ್ರತಿಮೆ ಕೆತ್ತುವ ಅವಕಾಶ ಯಾವ ಜನ್ಮದ ಭಾಗ್ಯ ಇದ್ದೀತು ಹೇಳಿ? ಬಹಳ ದೊಡ್ಡ ಕೀರ್ತಿ ತರುವ ಕೆಲಸದಲ್ಲಿ ನನ್ನನ್ನು ಪರಿಪೂರ್ಣವಾಗಿ ತೊಡಗಿಸಿಕೊಂಡೆ... ಭಾರತೀಯ ಸಂಸ್ಕೃತಿ ಅಯೋಧ್ಯೆಯಲ್ಲಿ ಬಹಳ ವರ್ಷಗಳಿಂದ ನಶಿಸಿಹೋಗಿತ್ತು. ಇದನ್ನು ಪುನರುತ್ಥಾನ ಮಾಡುವ ಮಹಾನ್ ಕೈಂಕರ್ಯ ನನಗೊದಗಿದ್ದು ಭಾಗ್ಯ ಎಂಬAತೆ ಇತ್ತು. ಭಾರತೀಯರಿಗೇ ಇದು ಸಂತೋಷದ ವಿಚಾರವಾಗಿರುವಾಗ ಆ ದಿವ್ಯ ಮಂದಿರದಲ್ಲಿ ಶ್ರೀ ರಾಮನ ಪ್ರತಿಮೆ ಕೆತ್ತುವ ಕೆಲಸ ನನ್ನಂಥವನಿಗೆ ಸಿಕ್ಕಿದ್ದು.. ನನ್ನನ್ನೇ ನಾನು ನಂಬಲಾರದಷ್ಟು ಅಚ್ಚರಿಯ ವಿಚಾರವಾಗಿತ್ತು..
- ಬಾಲರಾಮನ ಶಿಲ್ಪ ಕೆತ್ತುವಾಗ ಎದುರಾದ ಸವಾಲುಗಳೇನು?
ಸವಾಲುಗಳ ಪೈಕಿ ಮೊದಲನೆಯದ್ದಾಗಿ, ಬಾಲರಾಮನ ಕಲ್ಪನೆಯೇ ನಮಗೆ ಯಾರಿಗೂ ಇರಲಿಲ್ಲ. ಏಕೆಂದರೆ ಪುರಾಣದಲ್ಲಿ ಎಲ್ಲಿಯೂ ಬಾಲರಾಮನ ಚಿತ್ರವೇ ಇಲ್ಲ. ಎಲ್ಲಿಯೂ ಬಾಲಕ ರಾಮನ ಶಿಲ್ಪವೇ ಇಲ್ಲ. ಹೀಗಾಗಿಯೇ ಇದು ಬಹಳ ದೊಡ್ಡ ಸವಾಲಾಗಿತ್ತು. ಅಯೋಧ್ಯೆಯಲ್ಲಿ ರಾಮನ ಹೆಚ್ಚಿನ ವಿಚಾರ ದೊರಕುವುದು ಆತ ವನವಾಸದಿಂದ ಮರಳಿ ಬಂದ ನಂತರವೇ. ಆ ಸಂದರ್ಭ ಆತ ರಾಜರಾಮ.. ಆದರ್ಶರಾಮ.. ಮರ್ಯಾದಾ ಪುರುಷೋತ್ತಮನ ವ್ಯಕ್ತಿತ್ವ ಹೊಂದಿರುತ್ತಾನೆ. ಹೀಗಾಗಿ ಬಾಲರಾಮನನ್ನು ಮನಸ್ಸಿನಲ್ಲಿಯೇ ಕಲ್ಪಿಸಿಕೊಂಡು ಕೆತ್ತನೆ ಮಾಡಬೇಕಾಗಿತ್ತು. ಬಿಲ್ಲು ಬಾಣ ಹಿಡಿದ ೫ ವರ್ಷದ ಬಾಲಕ ರಾಮನ ಶಿಲ್ಪ ಅದಾಗಿರಬೇಕು ಎಂದು ಟ್ರಸ್ಟ್ ನವರ ಸೂಚನೆಯಿತ್ತು. ಬಾಲರಾಮನ ಸ್ಪಷ್ಟೀಕರಣ ಯಾವ ರೀತಿ, ಹೇಗೆ ನೀಡಬೇಕೆಂಬುದೇ ಶಿಲ್ಪತಜ್ಞನಾಗಿ ನನಗೂ ಸವಾಲೊಡ್ಡಿತ್ತು.
ಹೀಗಿದ್ದರೂ ಬಾಲಕನ ಶಿಲ್ಪ ರಚನೆಯು ನನಗೆ ಸುಲಭವಾಗಿತ್ತು. ಏಕೆಂದರೆ ನಾನು ಭಾರತೀಯ ಸಾಂಪ್ರದಾಯಿಕ ಶಿಲ್ಪಕಲೆ ಕಲಿತಿದ್ದೆ. ಈ ಅಂಶವೇ ನನ್ನ ಶಿಲ್ಪ ಅಪೂರ್ವವಾಗಿ ಮೂಡಿಬರಲು ಕಾರಣವಾಯಿತು. ಹೀಗಾಗಿಯೇ ಅಯೋಧ್ಯೆಯಲ್ಲಿ ಭಾರತೀಯ ಸಂಸ್ಕೃತಿ ರೂಪದಲ್ಲಿ ರಾಮನ ಮೂರ್ತಿ ಕೆತ್ತಲು ಸಾಧ್ಯವಾಯಿತು.
- ೭ ತಿಂಗಳ ಕಾಲ ಅಯೋಧ್ಯೆಯಲ್ಲಿಯೇ ಇದ್ದು ಬಾಲರಾಮನನ್ನು ರೂಪಿಸಿದ ಅನುಭವ ಹೇಳಿ. ಕಲ್ಲನ್ನು ಹೇಗೆ ಆಯ್ಕೆ ಮಾಡಿದಿರಿ?
ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನವರು ಅದಾಗಲೇ ಗುರುತಿಸಿ ಅಯೋಧ್ಯೆಗೆ ತಂದಿರಿಸಿದ್ದ ಮೈಸೂರಿನ ಹೆಚ್.ಡಿ. ಕೋಟೆಯ, ನೀಲಮೇಘಶ್ಯಾಮ ಸ್ವರೂಪದ ಶ್ಯಾಮಶಿಲೆಯಲ್ಲಿ ಬಾಲರಾಮನನ್ನು ರೂಪಿಸಬೇಕಾಗಿತ್ತು. ಬಹಳ ಅದ್ಭುತವಾದ ಶಿಲೆ ಅದಾಗಿತ್ತು. ಪ್ರಾಕೃತ್ತಿಕವಾಗಿ ಸೃಷ್ಟಿಯಾದ ಶಿಲೆ ಅದು.. ಭೂಮಿಯ ಒಳಭಾಗದಲ್ಲಿ ಮೆದುವಾಗಿ ಇರುತ್ತದೆ. ಭೂಮಿಯ ಸಂಪರ್ಕ ಬಿಟ್ಟು ಮೇಲೆ ಬಂದಾಗ ಪ್ರಬಲವಾದ ಕಲ್ಲಾಗಿರುತ್ತದೆ. ಇಂಥ ವಿಶೇಷ ಗುಣವನ್ನು ಆ ಕಲ್ಲು ಹೊಂದಿತ್ತು. ಪುರಾತನ ಶಿಲ್ಪಿಗಳು ಇದೇ ಶಿಲೆಯಲ್ಲಿ ನಿರ್ಮಾತವಾಗಿದೆ. ಹೀಗಾಗಿಯೇ ಇವೆಲ್ಲಾ ಇಂದಿಗೂ ಸುಂದರವಾಗಿದೆ. ಸಾಂದ್ರತೆ ಮತ್ತು ಸೌಂದರ್ಯಕ್ಕೆ ಈ ಶಿಲೆಗಳು ಹೆಸರುವಾಸಿ.. ವರ್ಣ ಮತ್ತು ಕೆತ್ತನೆಗೆ ಕೂಡ ಈ ಶಿಲೆ ಪೂರಕ ವಾಗಿರುತ್ತದೆ. ಇದರಿಂದಾಗಿಯೇ ಬಾಲರಾಮನ ವಿಗ್ರಹ ಅತ್ಯದ್ಭುತವಾಗಿ ಮೂಡಿಬರಲು ಸಹಕಾರಿಯಾಯಿತು. ನನ್ನ ಕಲ್ಪನೆಗೆ ಉತ್ತಮ ಸ್ವರೂಪ ನೀಡಲು ನನ್ನ ತಂಡದ ೮ ಶಿಲ್ಪಿಗಳು ಸಹಕಾರಿಯಾದರು.
- ಅಯೋಧ್ಯೆಯಲ್ಲಿ ನೀವು ಕೆತ್ತಿದ ಬಾಲರಾಮನ ಸ್ವರೂಪ ಏನು?
ನಾನು ರೂಪಿಸಿದ ಬಾಲರಾಮನ ವಿಗ್ರಹ ೭ ಅಡಿ, ೪ ಇಂಚು ಎತ್ತರ ಇದೆ. ಭಾರತೀಯ ಸಾಂಪ್ರದಾಯಿಕ ಶಿಲ್ಪಕಲಾ ಶೈಲಿಯಲ್ಲಿಯೇ ಬಾಲರಾಮನನ್ನು ರೂಪಿಸಿದ್ದು ನನ್ನ ಶಿಲ್ಪದ ವಿಶೇಷ. ತಾವರೆಯ ಮೇಲೆ ನಿಂತ ಸರ್ವಾಭಾರಣ ರೂಪಿತನಾಗಿ, ಬಿಲ್ಲುಬಾಣ ಹಿಡಿದು ನಿಂತ ಬಾಲರಾಮನ ಮೂರ್ತಿ ವೈಭವಪೂರ್ಣವಾಗಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗಿನ ಎಲ್ಲಾ ಶಿಲ್ಪಕಲಾ ಶೈಲಿಯನ್ನು ಅಳವಡಿಸಿದ್ದೇನೆ. ಅಖಂಡ ಏಕಶಿಲೆ ಅಥವಾ ದುಂಡು ಶಿಲ್ಪ, ಪ್ರಭಾವಳಿ ಸಹಿತ ಇದೆ. ಬಾಲರಾಮನ ಜತೆಗೇ ದಶಾವತಾರದಲ್ಲಿರುವ ಶ್ರೀರಾಮ, ಬ್ರಹ್ಮ, ವಿಷ್ಣು, ಶಿವನ ಶಿಲ್ಪಗಳನ್ನು ರೂಪಿಸಿದ್ದೇನೆ. ಪ್ರಭಾವಳಿಯಲ್ಲಿ ಬಾಲ ಆಂಜನೇಯನೂ ಇದ್ದಾನೆ.
ಬಾಲರಾಮನ ಜತೆಗಿದ್ದ ಹನುಮಂತನೂ ಬಾಲಕನೇ ಆಗಿರಬೇಕಲ್ಲ.? ಹೀಗಾಗಿ ಬಾಲ ಹನುಮನ ಕೆತ್ತನೆಯಿದೆ. ಅಂಜಲಿ ಮುದ್ರೆಯಲ್ಲಿರುವ ಬಾಲಾಂಜನೆಯನ ಪ್ರಭಾವಳಿಯಲ್ಲಿ ರೂಪಿಸಿದ್ದೇನೆ. ಗರುಡನ ಶಿಲ್ಪವೂ ಜತೆಗಿದೆ. ಶ್ರೀರಾಮ ಸೂರ್ಯವಂಶಜನಾಗಿರುವ ಹಿನ್ನೆಲೆ ಆತನ ಕಿರೀಟದಲ್ಲಿಯೂ ಸೂರ್ಯನ ಪುಟ್ಟ ಶಿಲ್ಪವನ್ನೂ ರೂಪಿಸಿದ್ದೇನೆ, ಶಿರಚಕ್ರದ ಹಿಂಬದಿ ಕೂಡ ಸೂರ್ಯನನ್ನು ಕೆತ್ತಲಾಗಿದೆ.
- ಇನ್ನೇನು ರಾಮ ಮಂದಿರದ ಮುಖ್ಯ ಆಕರ್ಷಣೆಯಾಗಿರುವ ಗರ್ಭಗೃಹದಲ್ಲಿ ಪ್ರತಿಷ್ಠಾಪನೆಯಾಗುವ ಬಾಲರಾಮನ ಶಿಲ್ಪ ಯಾವ ಶಿಲ್ಪಿ ಕೆತ್ತಿದ್ದು, ಅಧಿಕೃತ ಘೋಷಣೆಯಾಗಲಿದೆ. ಏನನ್ನಿಸುತ್ತಿದೆ ಈ ಸಂದರ್ಭ? ..
ಅಯೋಧ್ಯೆಯಲ್ಲಿ ಶ್ರೀರಾಮನೇ ಪ್ರೇರಣೇ ನೀಡಿ ನನ್ನಿಂದ ಶಿಲ್ಪವನ್ನು ಕೆತ್ತಿಸಿದ, ಏನು ಆಗಬೇಕಾಗಿತ್ತೋ ಅದನ್ನು ನನ್ನನ್ನು ಆಯ್ಕೆ ಮಾಡಿಕೊಂಡು ರಾಮನೇ ರೂಪಿಸಿಕೊಂಡ. ಬಾಲರಾಮನ ಮೂರ್ತಿಯನ್ನು ಸಂದರ್ಶಕರು ನೋಡಿದಾಗ ಭಾರತೀಯ ಸಾಂಪ್ರದಾಯಿಕ ಶಿಲ್ಪಕಲಾ ವೈಭವ ಎಲ್ಲರ ಮನದಲ್ಲಿಯೂ ಮೂಡುತ್ತದೆ. ಇದು ಖಂಡಿತವಾಗಿಯೂ ಭಾರತೀಯ ಸಾಂಪ್ರದಾಯಿಕ ಶಿಲ್ಪಕಲೆಗೆ ದೊರಕಿದ ಗೌರವವಾಗಲಿದೆ. ಗರ್ಭಗೃಹದಲ್ಲಿ ನನ್ನ ಶಿಲ್ಪ ಸ್ಥಾನ ಪಡೆಯದೇ ಹೋದರೂ ಬೇಸರವಿಲ್ಲ. ಏಕೆಂದರೆ ನಾವು ಮೂವರ ಪೈಕಿ ಒಬ್ಬರದ್ದು ಆಯ್ಕೆಯಾದರೂ ಉಳಿದ ಇಬ್ಬರ ಶಿಲ್ಪಗಳನ್ನು ಮಂದಿರದ ಮೇಲಿನ ಮಹಡಿಯಲ್ಲಿ ಭಕ್ತರ ದರ್ಶನಕ್ಕೆ ಇರಿಸಲಾಗುತ್ತದೆ. ಇದು ಕೂಡ ಸಾರ್ಥಕ್ಯ ಮೂಡಿಸುತ್ತದೆ. ಪ್ರತಿಷ್ಠಾಪನೆಯ ಬಾಲರಾಮನ ಮೂರ್ತಿ ನನ್ನದೇ ಆಗಿರುತ್ತದೆಯೇ ಇಲ್ಲವೇ ಎಂಬುದು ಆ ರಘುರಾಮನಿಗೆ ಬಿಟ್ಟದ್ದು. ಆದರೆ, ಭಾರತ ದೇಶಕ್ಕೇ ಕೀರ್ತಿ ತರುವಂಥ ಮಂದಿರ ನಿರ್ಮಾಣವಾಯಿತಲ್ಲ ಅದಕ್ಕಿಂತ ಸಂತೋಷ ಬೇರೇನಿಲ್ಲ. ತಾ. ೨೨ ರಂದು ಕಾರ್ಯಕ್ರಮಕ್ಕೆ ಬರುವಂತೆ ೨ ಸಾವಿರ ವಿಶೇಷ ಆಹ್ವಾನಿತರ ಪೈಕಿ ನನಗೂ ಈಗಾಗಲೇ ಆಹ್ವಾನ ಬಂದಿದೆ. ಪ್ರಯಾಣಕ್ಕೆ ವಿಮಾನದ ಟಿಕೇಟ್ಗಳೂ ಲಭಿಸಿದೆ. ಹೀಗಾಗಿ ಶಿಲ್ಪ ಕಲಾವಿದನಾಗಿ ನಾನೂ ಅಂದು ಅಯೋಧ್ಯೆಯಲ್ಲಿರುತ್ತೇನೆ.
್ಡ ಅನಿಲ್ ಎಚ್.ಟಿ. ಮೊ.: ೯೮೪೪೦೬೦೧೭೪