ಶನಿವಾರಸಂತೆ, ಜ. ೧೦ : ಕಣದಲ್ಲಿ ಒಣ ಹಾಕಿದ್ದ ೧೩೦ ಕೆ.ಜಿ.ಕಾಫಿ ಬೀಜವನ್ನು ಕಳವು ಮಾಡಿದ್ದ ಆರೋಪಿ ಯನ್ನು ಬಂಧಿಸಿದ್ದು, ಶನಿವಾರಸಂತೆ ಪೊಲೀಸರು ಮಾರಾಟ ಮಾಡಿದ್ದ ಕಾಫಿ ಬೀಜವನ್ನು ವಶಪಡಿಸಿ ಕೊಂಡಿದ್ದಾರೆ.

ಸಮೀಪದ ಹುಲುಕೋಡು ಗ್ರಾಮದ ಬೆಳೆಗಾರ ಎಚ್.ಎನ್. ದೇವರಾಜ್ ಅವರಿಗೆ ಕಾಫಿ ತೋಟವಿದ್ದು ಕೆಲಸ ನಿಮಿತ್ತ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ೧೫ ದಿನಗಳ ಹಿಂದೆ ಊರಿಗೆ ಬಂದು ಕಾಫಿ ಕೊಯ್ಲು ಮಾಡಿಸಿ, ಪಲ್ಪಿಂಗ್ ಮಾಡಿಸಿದ ನಂತರ ಸೋದರ ಸಂಬAಧಿ ಗೋಪಾಲ ಅವರ ಮನೆಯ ಮುಂದಿನ ಕಣದಲ್ಲಿ ಒಣ ಹಾಕಿದ್ದು, ತಾ. ೭ ರಂದು ಎರಡೂವರೆ ಚೀಲದಷ್ಟು ಕಾಫಿ ಬೀಜವನ್ನು ಕಳವು ಮಾಡಲಾಗಿತ್ತು.

ದೇವರಾಜ್ ಶನಿವಾರಸಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಅವರ ಮಾರ್ಗದರ್ಶನ ದಲ್ಲಿ ಪ್ರಬಾರ ವೃತ್ತ ನಿರೀಕ್ಷಕ ಚಂದ್ರಶೇಖರ್, ಪಿಎಸ್‌ಐ ಗೋವಿಂದ್ ರಾಜ್, ಹೆಡ್ ಕಾನ್ಸ್ಸ್ಟೇಬಲ್ ಡಿಂಪಲ್, ಕಾನ್ಸ್ಸ್ಟೇಬಲ್‌ಗಳಾದ ಶಿವಪ್ಪ, ರಂಜಿತ್ ಅವರು ಆರೋಪಿ ಹುಲುಕೋಡು ಗ್ರಾಮದ ಚಾಲಕ ಎಚ್.ವಿ. ಮಂಜುನಾಥ್ ಎಂಬಾತನನ್ನು ಹಾಸನದಲ್ಲಿ ಬಂಧಿಸಿದ್ದಾರೆ.