ಗೋಣಿಕೊಪ್ಪ ವರದಿ, ಜ. ೧೦: ಮಂಗಳೂರು ಸೆಂಟ್ ರೀತಾ ಶಾಲೆಯಲ್ಲಿ ವೆಸ್ಟರ್ನ್ ಇನ್ಸ್ಟಿಟ್ಯೂಟ್ ಆಫ್ ಮಾರ್ಷಿಯಲ್ ಆರ್ಟ್ಸ್ ಆಯೋಜಿಸಿದ್ದ ಪಶ್ಚಿಮ ರಾಜ್ಯಗಳ ಮುಕ್ತ ಕರಾಟೆ ಪಂದ್ಯಾವಳಿಯಲ್ಲಿ ಮಾಜಿ ಎಂ.ಎಲ್.ಸಿ. ಕರಾಟೆ ಪಟು ಅರುಣ್ ಮಾಚಯ್ಯ ನೇತೃತ್ವದ ಝೆನ್ ಶಿಟೋರಿಯೂ ಕರಾಟೆ ಶಾಲೆಯ ಹುದಿಕೇರಿ ಶಾಖೆಯ ವಿದ್ಯಾರ್ಥಿಗಳು ಪದಕ ಸಾಧನೆ ಮಾಡಿದ್ದಾರೆ. ತೇಜಲ್ ಮಾದಪ್ಪ ೧ ಕಂಚು, ೧ ಬೆಳ್ಳಿ, ಪ್ರಜ್ವಲ್ ಪೂವಣ್ಣ ೨ ಕಂಚು, ಶಾನ್ವಿ ಮುತ್ತಕ್ಕ ೨ ಬೆಳ್ಳಿ, ಶಾನ್ ನಂಜಪ್ಪ ೧ ಕಂಚು, ೧ ಬೆಳ್ಳಿ, ಮುತ್ತಮ್ಮ ೨ ಕಂಚು, ನಿಖಿತ್ ನಾಚಪ್ಪ ೧ ಚಿನ್ನ, ೧ ಕಂಚು ಪದಕ ಗೆದ್ದುಕೊಂಡಿದ್ದಾರೆ. ಕಳ್ಳಿಕಂಡ ಕಿಶೋರ್ ತರಬೇತಿ ನೀಡಿದ್ದಾರೆ.