ಮಡಿಕೇರಿ, ಜ. ೧೦: ಪ್ರತಿಷ್ಠಿತ ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಜಿ.ಎಂ. ಸತೀಶ್ ಪೈ, ಉಪಾಧ್ಯಕ್ಷರಾಗಿ ಕೆ.ಆರ್. ನಾಗೇಶ್ ಅವಿರೋಧವಾಗಿ ಆಯ್ಕೆಯಾದರು.
ಬ್ಯಾಂಕ್ ಸಭಾಂಗಣದಲ್ಲಿ ನಡೆದ ಪ್ರಕ್ರಿಯೆಯಲ್ಲಿ ಸರ್ವಾನುಮತದಿಂದ ಆಯ್ಕೆ ನಡೆಯಿತು. ನೂತನ ಅಧ್ಯಕ್ಷ ಸತೀಶ್ ಪೈ ಮಾತನಾಡಿ, ಒಗ್ಗಟ್ಟಾಗಿ ಕೆಲಸ ಮಾಡಿದ ಪರಿಣಾಮ ಚುನಾವಣೆಯಲ್ಲಿ ೧ ಸ್ಥಾನ ಹೊರತುಪಡಿಸಿ ಎಲ್ಲಾ ಸ್ಥಾನಗಳಲ್ಲೂ ಗೆಲುವು ಸಾಧಿಸಲು ಸಾಧ್ಯವಾಯಿತು. ಬ್ಯಾಂಕ್ನ ಉನ್ನತಿಗೂ ಇದೇ ರೀತಿ ಒಗ್ಗಟ್ಟು ಮುಖ್ಯ. ಪ್ರತಿಯೊಬ್ಬರ ಸಹಕಾರ ಇದ್ದರೆ ಮಾದರಿ ಸಂಘವಾಗಿ ರೂಪಿಸಲು ಸಾಧ್ಯ. ಎಲ್ಲರ ಮಾರ್ಗದರ್ಶನದಲ್ಲಿ ಮುನ್ನಡೆ ಯಲಾಗುವುದು ಎಂದು ತಿಳಿಸಿದರು.
ಉಪಾಧ್ಯಕ್ಷ ನಾಗೇಶ್ ಮಾತನಾಡಿದರು. ಈ ಸಂದರ್ಭ ಬ್ಯಾಂಕ್ ನಿರ್ದೇಶಕರುಗಳಾದ ಬಾಲಕೃಷ್ಣ ರೈ, ಬಿ.ಕೆ. ಜಗದೀಶ್, ಬಿ.ಎಂ. ರಾಜೇಶ್, ಕನ್ನಂಡ ಸಂಪತ್, ಗಿರೀಶ್, ಬಿ.ವಿ. ರೋಶನ್, ಎಸ್.ಸಿ. ಸತೀಶ್, ಕೇಟೋಳಿರ ಮಾಚಮ್ಮ, ಪ್ರತಿಭಾ ಅರುಣ್ ಶೆಟ್ಟಿ, ನಗರಸಭಾ ಉಪಾಧ್ಯಕ್ಷೆ ಸವಿತಾ ರಾಕೇಶ್, ಸದಸ್ಯ ಕಾಳಚಂಡ ಅಪ್ಪಣ್ಣ, ಬಿಜೆಪಿ ನಗರಾಧ್ಯಕ್ಷ ಮನು ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.