ಮೈಸೂರು, ಜ. ೧೦: ನಕಲಿ ದಾಖಲೆಗಳನ್ನು ಸೃಷ್ಟಿಸಿ ಸುಮಾರು ೧೪ ಕೋಟಿ ರೂಪಾಯಿ ಜಿ.ಎಸ್.ಟಿ. ತೆರಿಗೆ ವಂಚಿಸಿರುವ ಆರೋಪದಡಿ ಮೈಸೂರಿನ ಉದ್ಯಮಿಯನ್ನು ಬಂಧಿಸಲಾಗಿದೆ. ಮುಖ್ಯ ಆಯುಕ್ತ ಸುರೇಶ್ ಬಾಬು ಅವರ ಮಾರ್ಗದರ್ಶನದಲ್ಲಿ ಕಸ್ಟಮ್ಸ್ ಸಹಾಯಕ ಆಯುಕ್ತ ಕೆ.ಬಿ. ನಾಣಯ್ಯ ಅವರ ನೇತೃತ್ವದಲ್ಲಿ ದಾಳಿ ಮಾಡಿ ಮೈಸೂರಿನ ರಬ್ ಟ್ರೇರ‍್ಸ್ ಮಾಲೀಕ ಇಮ್ರಾನ್ ಪಾಷ ಎಂಬವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ನಕಲಿ ಸಂಸ್ಥೆಗಳನ್ನು ಸೃಷ್ಟಿಸಿ, ಅಂತಹ ಸಂಸ್ಥೆಗಳು ಬೇರೆ ಸಂಸ್ಥೆಗಳಿಗೆ ಸರಕುಗಳನ್ನು ಮಾರಾಟ ಮಾಡಿರುವ ರೀತಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸುಮಾರು ರೂ. ೬೦ ಕೋಟಿ ವ್ಯವಹಾರ ನಡೆಸಿದಂತೆ ತೋರಿಸಲಾಗಿದ್ದು, ಜಿ.ಎಸ್.ಟಿ. ಮೌಲ್ಯ ರೂ. ೧೪ ಕೋಟಿ ಎಂದು ಅಂದಾಜಿಸಲಾಗಿದೆ. ಪ್ರಕರಣ ಬೇಧಿಸುವ ಕಾರ್ಯಾಚರಣೆಯಲ್ಲಿ ಸೂಪರಿಂಟೆAಡೆAಟ್‌ರ್‌ಗಳಾದ ಜಿ.ಎನ್. ಶಶಿಧರ್, ಶ್ರೀಮತಿ ಸರಿತಾ, ವೆಂಕಟೇಶ್ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.

ವಿಧಾನಸೌಧದ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ದಂಪತಿ

ಬೆAಗಳೂರು, ಜ. ೧೦: ಖಾಸಗಿ ಬ್ಯಾಂಕ್‌ನಿAದ ನಿರಂತರ ಕಿರುಕುಳ ಆಗುತ್ತಿದೆ ಎಂದು ಆರೋಪಿಸಿ ವಿಧಾನಸೌಧದ ಮುಂದೆ ಸೀಮೆಎಣ್ಣೆ ಸುರಿದು ಆತ್ಮಹತ್ಯೆಗೆ ಕುಟುಂಬವೊAದು ಯತ್ನಿಸಿದ ಘಟನೆ ಬುಧವಾರ ನಡೆದಿದೆ. ಇಂದು ಬೆಳಿಗ್ಗೆ ೧೧.೪೫ ಗಂಟೆ ಸುಮಾರಿಗೆ ವಿಧಾನಸೌಧ ಮೂರನೇ ಗೇಟ್ ಬಳಿ ಈ ಘಟನೆ ನಡೆದಿದೆ. ಕುಟುಂಬ ಸಮೇತ ಬಂದ ಶಾಹಿಸ್ತ ಬಾನು ಎಂಬವರು ಸೀಮೆಎಣ್ಣೆ ಸುರಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡರು. ಬೆಂಗಳೂರು ಕೋ ಆಪರೇಟಿವ್ ಸೊಸೈಟಿ ಚಾಮರಾಜಪೇಟೆ ಗೌರಿಪಾಳ್ಯದಲ್ಲಿ ಶಾಹಿಸ್ತಾ ಬಾನು ಅವರ ಗಂಡ ಮುನಾಯಿದುಲ್ಲಾ ಸಾಲ ಪಡೆದುಕೊಂಡಿದ್ದರು. ಜೆ.ಜೆ. ನಗರದಲ್ಲಿರುವ ಮನೆಗೆ ೫೦ ಲಕ್ಷ ಲೋನ್ ತೆಗೆದುಕೊಂಡಿದ್ದರು. ಒಟ್ಟು ೯೭ ಲಕ್ಷ ಹಣ ಪಾವಸಿದ್ದೇವೆ ಆದರೂ ಕಿರುಕುಳ ನೀಡುತ್ತಿದ್ದಾರೆ ಎಂಬುದು ಆತ್ಮಹತ್ಯೆಗೆ ಯತ್ನಿಸಿದವರ ಆರೋಪವಾಗಿದೆ. ಈ ಬಗ್ಗೆ ಹಲವು ಬಾರಿ ಸ್ಥಳೀಯ ಶಾಸಕ ಜಮೀರ್ ಅಹ್ಮದ್ ಖಾನ್ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಹೇಳಿದೆ.

ಶಿಂಧೆ ಬಣವೇ ನಿಜವಾದ ಶಿವಸೇನೆ-ಸ್ಪೀಕರ್ ತೀರ್ಪು

ಮುಂಬೈ, ಜ. ೧೦: ಮಹಾರಾಷ್ಟç ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣವೇ ನಿಜವಾದ ಶಿವಸೇನೆ ಎಂದು ಮಹಾರಾಷ್ಟç ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್ ಅವರು ಬುಧವಾರ ತೀರ್ಪು ನೀಡಿದ್ದು, ಮಾಜಿ ಸಿಎಂ ಮತ್ತು ಯುಬಿಟಿ ಬಣದ ನಾಯಕ ಉದ್ಧವ್ ಠಾಕ್ರೆ ಅವರಿಗೆ ಏಕನಾಥ್ ಶಿಂಧೆ ಅವರನ್ನು ತೆಗೆದುಹಾಕುವ ಅಧಿಕಾರ ಇಲ್ಲ ಎಂದು ಹೇಳಿದ್ದಾರೆ. ೨೦೨೨ ರಲ್ಲಿ ಶಿವಸೇನಾದಲ್ಲಿ ಒಡಕುಂಟಾಗಿ ಎರಡು ಬಣಗಳಾಗಿ ವಿಭಜನೆ ಆಗಿ ೧೮ ತಿಂಗಳ ನಂತರ ಇಂದು ಸಂಜೆ ಸ್ಪೀಕರ್ ರಾಹುಲ್ ಅವರು ಬಹು ನಿರೀಕ್ಷಿತ ತೀರ್ಪನ್ನು ಪ್ರಕಟಿಸಿದ್ದು, ಶಿಂಧೆ ಅವರ ಬಣವೇ ನಿಜವಾದ ಶಿವಸೇನೆ ಎಂದು ಹೇಳಿದ್ದಾರೆ. ಅಲ್ಲದೆ ಸಿಎಂ ಶಿಂಧೆ ಮತ್ತು ಅವರ ಬೆಂಬಲಿಗ ಶಾಸಕರನ್ನು ಅನರ್ಹಗೊಳಿಸಬೇಕೆಂಬ ಠಾಕ್ರೆ ಬಣದ ಬೇಡಿಕೆಯನ್ನು ತಿರಸ್ಕರಿಸಲಾಗಿದೆ. ಸಿಎಂ ಏಕನಾಥ್ ಶಿಂಧೆ ಸೇರಿದಂತೆ ೧೬ ಶಿವಸೇನೆ ಶಾಸಕರ ಅನರ್ಹತೆಯ ವಿರುದ್ಧದ ಅರ್ಜಿಗಳನ್ನು ವಜಾಗೊಳಿಸಿರುವ ಸ್ಪೀಕರ್ ರಾಹುಲ್ ನಾರ್ವೇಕರ್ ಅವರು, ನಾಯಕತ್ವದ ರಚನೆಯನ್ನು ನಿರ್ಧರಿಸಲು ಪಕ್ಷದ ೨೦೧೮ ರ ಸಂವಿಧಾನವನ್ನು ಉಲ್ಲೇಖಿಸಿದ್ದಾರೆ. ಚುನಾವಣಾ ಆಯೋಗ ಒದಗಿಸಿದ ಶಿವಸೇನಾ ಸಂವಿಧಾನವು ನಿಜವಾದ ಸಂವಿಧಾನವಾಗಿದೆ, ಇದನ್ನು ಎಸ್‌ಎಸ್ ಸಂವಿಧಾನ ಎಂದು ಕರೆಯಲಾಗುತ್ತದೆ ಎಂದು ಸ್ಪೀಕರ್ ಹೇಳಿದ್ದು ಏಕನಾಥ್ ಶಿಂಧೆ ಬಣವೇ ನಿಜವಾದ ಶಿವಸೇನೆ ಎಂದಿದ್ದಾರೆ.

ದೇಶದಲ್ಲಿ ಹೊಸ ಕಚ್ಚಾ ತೈಲ ನಿಕ್ಷೇಪ : ಹರ್ದೀಪ್ ಸಿಂಗ್ ಪುರಿ

ನವದೆಹಲಿ, ಜ. ೧೦: ದೇಶದಲ್ಲಿ ಹೊಸ ತೈಲ ಆವಿಷ್ಕಾರವನ್ನು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಘೋಷಿಸಿದ್ದಾರೆ. ನಿನ್ನೆ ಕೃಷ್ಣ ಗೋದಾವರಿ ಜಲಾನಯನ ಪ್ರದೇಶದ ಕಾಕಿನಾಡ ಕರಾವಳಿಯಿಂದ ೩೦ ಕಿ.ಮೀ. ದೂರದಲ್ಲಿ, ಮೊದಲ ಬಾರಿಗೆ ತೈಲವನ್ನು ಹೊರತೆಗೆಯಲಾಯಿತು. ಇದರ ಕಾಮಗಾರಿ ೨೦೧೬-೧೭ರಲ್ಲಿ ಪ್ರಾರಂಭ ವಾಯಿತು, ಆದರೆ ಕೋವಿಡ್ ಕಾರಣದಿಂದಾಗಿ ಸ್ವಲ್ಪ ವಿಳಂಬವಾಯಿತು. ಅಲ್ಲಿನ ೨೬ ಬಾವಿಗಳಲ್ಲಿ ೪ ಬಾವಿಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ ಎಂದು ಸಚಿವರು ಹೇಳಿದ್ದಾರೆ. ಮೇ ಮತ್ತು ಜೂನ್ ವೇಳೆಗೆ ದಿನಕ್ಕೆ ೪೫,೦೦೦ ಬ್ಯಾರೆಲ್ ಉತ್ಪಾದಿಸಲು ಸಾಧ್ಯವಾಗುತ್ತದೆ ಎಂದು ನಾವು ನಿರೀಕ್ಷಿ ಸುತ್ತೇವೆ. ಈ ಉತ್ಪಾದನೆಯು ನಮ್ಮ ದೇಶದ ಒಟ್ಟು ಕಚ್ಚಾ ತೈಲ ಉತ್ಪಾದನೆಯ ಶೇ. ೭ ರಷ್ಟು ಮತ್ತು ನಮ್ಮ ಅನಿಲ ಉತ್ಪಾದನೆಯ ಶೇ. ೭ ರಷ್ಟನ್ನು ಹೊಂದಿರುತ್ತದೆ ಎಂದರು. ಸರ್ಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ ಬಂಗಾಳಕೊಲ್ಲಿಯ ಕೃಷ್ಣ ಗೋದಾವರಿ ಡೀಪ್ವಾಟರ್ ಬ್ಲಾಕ್ ೯೮/೨ ನಿಂದ ಮೊದಲ ತೈಲ ಉತ್ಪಾದಿಸಲು ಪ್ರಾರಂಭಿಸಿದೆ. ಜಲಾ ನಯನ ಪ್ರದೇಶದಿಂದ ಗರಿಷ್ಠ ತೈಲ ಮತ್ತು ಅನಿಲ ಉತ್ಪಾದನೆಗಾಗಿ ೩ನೇ ಹಂತವು ಈಗಾಗಲೇ ನಡೆಯುತ್ತಿದೆ ಮತ್ತು ಜೂನ್ ೨೦೨೪ ರಲ್ಲಿ ಪೂರ್ಣಗೊಳ್ಳುವ ಸಾಧ್ಯತೆಯಿದೆ. ೯೮/೨ ಯೋಜನೆಯು ಒಎನ್ಜಿಸಿಯ ಒಟ್ಟು ತೈಲ ಮತ್ತು ಅನಿಲ ಉತ್ಪಾದನೆಯನ್ನ ಕ್ರಮವಾಗಿ ಶೇ. ೧೧ ಮತ್ತು ೧೫ ರಷ್ಟು ಹೆಚ್ಚಿಸುವ ನಿರೀಕ್ಷೆಯಿದೆ.

ಪೊಲೀಸ್ ಮಾಹಿತಿದಾರನಿಗೆ ಗುಂಡಿಕ್ಕಿ ಹತ್ಯೆ

ಚೈಬಾಸಾ, ಜ. ೧೦: ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯಲ್ಲಿ ಮಾವೋವಾದಿಗಳು ಪೊಲೀಸ್ ಮಾಹಿತಿದಾರನಾಗಿದ್ದ ವ್ಯಕ್ತಿಗೆ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಹತ್ಯೆಯಾದ ವ್ಯಕ್ತಿಯನ್ನು ನೆಲ್ಸನ್ ಭೆಂಗ್ರಾ ಎಂದು ಗುರುತಿಸಲಾಗಿದ್ದು, ಇಚ್ಚಾಪಿಡಿ ಗ್ರಾಮದ ಬಳಿ ಮಂಗಳವಾರ ತಡರಾತ್ರಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಹತ್ಯೆಯಾದ ವ್ಯಕ್ತಿ ನಿಷೇಧಿತ ಸಿಪಿಐ (ಮಾವೋವಾದಿಗಳು) ಜೊತೆ ಸಂಪರ್ಕ ಹೊಂದಿದ್ದು, ಅವರು ಈ ಹಿಂದೆ ಮಾವೋವಾದಿಗಳ ಮನೆಗೆ ಭೇಟಿ ನೀಡುತ್ತಿದ್ದರು ಎಂದು ಪೊಲೀಸ್ ವರಿಷ್ಠಾಧಿಕಾರಿ ಅಶುತೋಷ್ ಶೇಖರ್ ಹೇಳಿದ್ದಾರೆ. ಘಟನೆ ಕುರಿತು ತನಿಖೆ ನಡೆಸಲು ಪೊಲೀಸ್ ತಂಡ ಬುಧವಾರ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದೆ. ಘಟನೆಯ ಹೊಣೆ ಹೊತ್ತ ಮಾವೋವಾದಿಗಳು, ಸ್ಥಳದಲ್ಲಿ ಕರಪತ್ರಗಳನ್ನು ಬಿಟ್ಟು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಭೆಂಗ್ರಾ ಅವರು ಮಾವೋವಾದಿಗಳೊಂದಿಗಿನ ಸಂಬAಧವನ್ನು ಕಡಿದುಕೊಂಡಿದ್ದಾರೆ ಮತ್ತು ನಿರ್ಮಾಣ ಸ್ಥಳದಲ್ಲಿ ರಾತ್ರಿ ಕಾವಲುಗಾರರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಮೃತನ ಕುಟುಂಬ ಸದಸ್ಯರು ಹೇಳಿದ್ದಾರೆ.