ಕುಶಾಲನಗರ, ಜ. ೭: ಕುಶಾಲನಗರದ ಅಲ್ ಇಹ್ಸಾನ್ ಕಮಿಟಿ ವತಿಯಿಂದ ಬಡ ಹೆಣ್ಣು ಮಕ್ಕಳ ವಿವಾಹ ಕಾರ್ಯಕ್ರಮವನ್ನು ಕುಶಾಲನಗರದ ಶಾದಿಮಹಲ್‌ನಲ್ಲಿ ನಡೆಸಲಾಯಿತು.

ಅಲ್ ಇಹ್ಸಾನ್ ಕಮಿಟಿ ಅಧ್ಯಕ್ಷ ಎಮ್.ಇ. ಮುಸ್ತಫಾರವರ ನೇತೃತ್ವದಲ್ಲಿ ನಡೆದ ೧೪ನೇ ವರ್ಷದ ಕಾರ್ಯಕ್ರಮದಲ್ಲಿ ನಾಲ್ವರು ಬಡ ಹೆಣ್ಣುಮಕ್ಕಳ ವಿವಾಹ ಕಾರ್ಯಕ್ರಮ ನೆರವೇರಿಸಲಾಯಿತು. ವಧುವಿಗೆ ೪೦ ಗ್ರಾಂ ಚಿನ್ನ, ವಸ್ತç ಹಾಗೂ ವರನಿಗೆ ವಸ್ತçವನ್ನು ವಿತರಿಸಲಾಯಿತು.

ಈ ಸಂದರ್ಭ ಕುಶಾಲನಗರದ ಧರ್ಮಗುರುಗಳು ನಾಸೊರ್ ಫೈಜಿ, ದಾರುಲ್ ಉಲೂಂ ಮದ್ರಸದ ಪ್ರಾಂಶುಪಾಲರಾದ ತಮ್ಲೀಕ್ ದಾರಿಮಿ, ದಾರುಲ್ ಉಲೂಂ ಕಮಿಟಿ ಪದಾಧಿಕಾರಿಗಳು, ಅಲ್ ಇಹ್ಸಾನ್ ಕಮಿಟಿ ಪದಾಧಿಕಾರಿಗಳು ಇದ್ದರು.