ಪೊನ್ನಂಪೇಟೆ, ಜ. ೭: ಕರ್ನಾಟಕ ಟ್ಯಾಕ್ಸಿ ಡ್ರೆöÊವರ್ಸ್ ಆರ್ಗನೈಸೇಷನ್‌ನ ವೀರಾಜಪೇಟೆ ಹಾಗೂ ಪೊನ್ನಂಪೇಟೆ ವಲಯ ಸಮಿತಿಯ ವತಿಯಿಂದ ಶಬರಿಮಲೆ ಯಾತ್ರೆಗೆ ತೆರಳುವ ಅಯ್ಯಪ್ಪ ಸ್ವಾಮಿ ವ್ರತಧಾರಿಗಳಿಗೆ ಕುಡಿಯಲು ಬಿಸಿ ಬಿಸಿ ಕಾಫಿ,ಟೀ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಪೊನ್ನಂಪೇಟೆ ಬಸವೇಶ್ವರ ದೇವಸ್ಥಾನ ಮುಂಭಾಗ ಮಾಡಲಾಗಿದೆ. ಈ ಮಾನವೀಯ ಕಾರ್ಯಕ್ಕೆ ತಾ.೬ ರಂದು ರಾತ್ರಿ ಮಡಿಕೇರಿ ಆರ್.ಟಿ.ಓ ಇನ್ಸ್ಪೆಕ್ಟರ್ ಶಿವಕುಮಾರ್ ಚಾಲನೆ ನೀಡಿದರು.

ತಾ.೬ ರಿಂದ ೧೬ ರವರೆಗೆ ಪ್ರತಿದಿನ ರಾತ್ರಿ ೯ ಗಂಟೆಯಿAದ ಬೆಳಿಗ್ಗೆ ೬ ಗಂಟೆವರೆಗೆ ಪೊನ್ನಂಪೇಟೆ ಮಾರ್ಗವಾಗಿ ಕೇರಳ ರಾಜ್ಯದಲ್ಲಿರುವ ಶಬರಿಮಲೆಗೆ ತೆರಳುವ ರಾಜ್ಯದ ಎಲ್ಲಾ ಜಿಲ್ಲೆಗಳ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಈ ವ್ಯವಸ್ಥೆಯ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ. ಪ್ರತಿ ದಿನ ಒಂದೊAದು ತಂಡ ಈ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದು, ಈ ಮಾರ್ಗವಾಗಿ ಶಬರಿಮಲೆಗೆ ತೆರಳುವ ವಾಹನಗಳನ್ನು ತಡೆದು ಅವರಿಗೆ ಕಾಫಿ, ಟೀ ನೀಡಿ, ಬಸ್ ನಿಲ್ದಾಣದಲ್ಲಿ ಶೌಚಾಲಯದ ವ್ಯವಸ್ಥೆಯನ್ನು ಮಾಡಿಕೊಟ್ಟು, ವಿಶ್ರಾಂತಿಯ ಅವಶ್ಯಕತೆ ಇದ್ದರೆ ಅದಕ್ಕೂ ಅವಕಾಶ ಕಲ್ಪಿಸಿಕೊಡುತ್ತಿದ್ದಾರೆ.

ಶಬರಿಮಲೆಗೆ ತೆರಳುವ ಮಾಲಾಧಾರಿಗಳು ರಾತ್ರಿ ವೇಳೆ ಹುಣಸೂರು ದಾಟಿದ ನಂತರ ಅವರಿಗೆ ಕೇರಳ ತಲುಪುವವರೆಗೂ ಎಲ್ಲಿಯೂ ಕೂಡ ರಾತ್ರಿ ವೇಳೆ ಕಾಫಿ, ಟೀ ದೊರಕುವುದಿಲ್ಲ, ಬಹುತೇಕ ಅರಣ್ಯದೊಳಗೆ ರಸ್ತೆ ಮಾರ್ಗದಲ್ಲೇ ಸಂಚಾರ ಮಾಡುವುದರಿಂದ ಅವರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ಟ್ಯಾಕ್ಸಿ ಡ್ರೆöÊವರ್ಸ್ ಆರ್ಗನೈಸೇಷನ್‌ನ ವೀರಾಜಪೇಟೆ ಹಾಗೂ ಪೊನ್ನಂಪೇಟೆ ವಲಯ ಸಮಿತಿ ವತಿಯಿಂದ ಅಳಿಲು ಸೇವೆಯನ್ನು ಕೈಗೊಳ್ಳಲಾಗಿದ್ದು, ಸಂಘದ ಎಲ್ಲಾ ಸದಸ್ಯರು ಈ ಕಾರ್ಯದಲ್ಲಿ ಖುಷಿಯಿಂದ ಕೈಜೋಡಿಸಿದ್ದಾರೆ.

ಈ ಸಂದರ್ಭ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ವಿನ್ಸೆಂಟ್ ಬಾಬು, ಜಿಲ್ಲಾ ಗೌರವ ಅಧ್ಯಕ್ಷ ಕಳ್ಳಿಚಂಡ ಪರಶುರಾಮ್, ಅಧ್ಯಕ್ಷ ವಿನೋದ್, ಉಪಾಧ್ಯಕ್ಷ ಅಖಿಲ್ ಶಿವಾಜಿ, ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕು ಅಧ್ಯಕ್ಷ ಹೇಮಂತ್ ಕುಮಾರ್, ಉಪಾಧ್ಯಕ್ಷ ರವಿ, ಕಾರ್ಯದರ್ಶಿ ಮಂಜುನಾಥ್, ತಾಲೂಕು ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಇದ್ದರು.