ಕಡಂಗ, ಜ. ೪: ಸಮಸ್ತ ಕೇಂದ್ರೀಯ ಸುನ್ನಿ ವಿದ್ಯಾರ್ಥಿಗಳ ಒಕ್ಕೂಟ ಎಡಪಾಲ ಶಾಖೆಯ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಕಡಂಗದಲ್ಲಿ ನಡೆಯಿತು. ಶಾಖೆಯ ಅಧ್ಯಕ್ಷ ಶಮೀಮುದ್ದೀನ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಹಾರಿಸ್ ಬಾಖವಿ ಅವರ ಸ್ವಾಗತ ಭಾಷಣದೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಜಿಲ್ಲಾ ಸಮಿತಿ ಪ್ರತಿನಿಧಿ ಹನೀಫ್ ಫೈಝಿ ಅವರು ಉದ್ಘಾಟನೆಗೈದರು.

ನರಿಯಂದಡ ಗ್ರಾಮ ಪಂಚಾಯಿತಿ ಸದಸ್ಯರಾದ ಮುಹಮ್ಮದ್ ಅವರು ಮಾತನಾಡಿ ಸಂಘಟನೆಯ ಪ್ರಾರಂಭ ಕಾಲದ ಬೆಳವಣಿಗೆಗಳ ಕುರಿತು ಮೆಲುಕು ಹಾಕಿದರು. ನಂತರ ಮಾತನಾಡಿದ ಎಸ್.ಕೆ.ಎಸ್.ಎಸ್.ಎಫ್. ಕರ್ನಾಟಕ ರಾಜ್ಯ ಸಮಿತಿ ಮೀಡಿಯಾ ವಿಂಗ್ ಕನ್ವೀನರಾದ ಶಬೀರ್ ಫೈಝಿ ಅಲ್ ಮಅಬರೀ, ಯುವಕರು ಹೆಚ್ಚಾಗಿ ಸಂಘಟನಾ ಕ್ಷೇತ್ರದಲ್ಲಿ ಗುರುತಿಸಿ ಕೊಳ್ಳುವ ಮೂಲಕ ಸಾಮಾಜಿಕ ಪ್ರಜ್ಞೆಯುಳ್ಳ ಉತ್ತಮ ನಾಗರಿಕರಾಗ ಬಹುದು. ಸಮಾಜದಲ್ಲಿ ವ್ಯಾಪಕ ವಾಗುತ್ತಿರುವ ಮಾದಕ ವ್ಯಸನದಂತಹ ದುಷ್ಚಟಗಳಿಂದ ತಮ್ಮ ಮಕ್ಕಳನ್ನು ದೂರವಿರಿಸಲು ಸಮುದಾಯ ಮತ್ತು ಸಮಾಜದ ಸಬಲೀಕರಣಕ್ಕಾಗಿ ಕಾರ್ಯಾಚರಿಸುತ್ತಿರುವ ಎಸ್.ಕೆ. ಎಸ್.ಎಸ್.ಎಫ್. ನಂತಹ ಆದರ್ಶ ಸಂಘಟನೆಗಳಲ್ಲಿ ಸಕ್ರಿಯವಾಗುವಂತೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಊರಿನ ಹಿರಿಯ ನಾಯಕರು ಮತ್ತು ಸುನ್ನಿ ಯುವಜನ ಸಂಘದ ಸದಸ್ಯರುಗಳಾದ ಹಂಝ ಕುಪ್ಪೋಡಂಡ, ಸಲೀಂ ಬೆಂಗಳೂರು, ಶಾಖಾ ಸಮಿತಿ ಉಪಾಧ್ಯಕ್ಷರಾದ ಶಂಸುದ್ದೀನ್, ಕಾರ್ಯಕಾರಿ ಕಾರ್ಯದರ್ಶಿಯಾದ ಜಲೀಲ್ ಮತ್ತು ಸಮಿತಿ ಸದಸ್ಯರಾದ ಶರಫುದ್ದೀನ್, ಕ್ಯಾಂಪಸ್ ವಿಂಗ್, ವಿಖಾಯ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.