ಈ ವಿಶ್ವದಲ್ಲಿ ಇರುವ ಸಕಲ ಸಂಪನ್ಮೂಲಗಳು, ಪ್ರಕೃತಿ, ಅರಣ್ಯ ಸಂಪತ್ತು, ಜಲಮೂಲಗಳು ಇವೆಲ್ಲವೂ ಭೂಮಿಯಲ್ಲಿ ಇರುವ ಎಲ್ಲ ಜೀವಿಗಳ ಬಳಕೆಗಾಗಿ ಇವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಮನುಷ್ಯ ಮಾತ್ರ ತನ್ನ ಬುದ್ಧಿಶಕ್ತಿಯಿಂದ, ಬಾಹುಬಲದಿಂದ ಅದರೊಂದಿಗೆ ಸ್ವಾರ್ಥದಿಂದ ಈ ಎಲ್ಲ ಪ್ರಕೃತಿದತ್ತ ಸಂಪತ್ತಿನ ಮೇಲೆ ದಾಳಿ ಮಾಡಿ ಎಲ್ಲವೂ ಕೇವಲ ಮನುಜಕುಲಕ್ಕಾಗಿ ಎನ್ನುವ ಭ್ರಮೆಯನ್ನು ಸೃಷ್ಟಿಮಾಡಿದ್ದಾನೆ. ಹೀಗೆ ಮನುಜನ ದಾಳಿಗೆ ಸಿಲುಕಿ ಅನೇಕ ಪಕ್ಷಿ ಸಂಕುಲಗಳು ಈ ಜಗತ್ತಿನಿಂದಲೇ ಅಳಿದು ಹೋಗಿವೆಯಲ್ಲದೆ ಅದೆಷ್ಟೋ ಪಕ್ಷಿಗಳ ಸಂಕುಲವು ಅಳಿವಿನ ಅಂಚಿನಲ್ಲಿ ಇವೆ.

ಮನುಷ್ಯನ ಸ್ವಾರ್ಥವೆಂಬ ಕಬಂಧ ಬಾಹುಗಳಿಗೆ ಸಿಲುಕಿ ಪಕ್ಷಿಗಳ ಈ ಮಾರಣ ಹೋಮವಾಗುತ್ತಿರುವುದನ್ನು ತಡೆದು, ನಶಿಸಿ ಹೋಗುತ್ತಿರುವ ಎಲ್ಲ ಪಕ್ಷಿ ಸಂಕುಲವನ್ನು ಉಳಿಸಲು ಪ್ರತಿವರ್ಷ ಜನವರಿ ಐದರಂದು ರಾಷ್ಟಿçÃಯ ಪಕ್ಷಿಗಳ ದಿನವನ್ನಾಗಿ ಆಚರಿಸಲಾಗುತ್ತಿದೆ.

ಡೋಡೊ ಎನ್ನುವ ಹೆಸರಿನ ಬಹಳ ಅಪರೂಪದ, ಮಾರಿಶಿಯಸ್ ಎನ್ನುವ ದ್ವೀಪದಲ್ಲಿ ಮಾತ್ರ ಕಾಣಸಿಗುತ್ತಿದ್ದ ಸುಮಾರು ಒಂದು ಮೀಟರ್ ಎತ್ತರದ ಹಕ್ಕಿಯು ವಾಸಿಸುತ್ತಿದ್ದ ಅರಣ್ಯದ ನೆಲೆಯನ್ನು ಡಚ್ ವಲಸೆಗಾರರು ಸಂಪೂರ್ಣವಾಗಿ ನಾಶಮಾಡಿ ಅನಂತರ ಆಹಾರಕ್ಕಾಗಿ ಈ ಹಕ್ಕಿಯನ್ನು ಕೊಂದು ತಿಂದು ಸಂಪೂರ್ಣವಾಗಿ ಕಾಣದಂತೆ ಮಾಡಿಬಿಟ್ಟರು. ಹಾಗಾಗಿ “ಏಸ್ ಡೆಡ್ ಏಸ್ ಡೋಡೋ” ಎನ್ನುವ ನುಡಿಗಟ್ಟೂ ಬಳಕೆಗೆ ಬಂತು. ಗ್ರೇಟ್ ಆಕ್ ಎನ್ನುವ ಹೆಸರಿನ ಹಾರಲಾರದ ಹಕ್ಕಿಯನ್ನೂ (ವೈಜ್ಞಾನಿಕ ಹೆಸರು ಪೆಂಗುಯಿನೆಸ್ ಇಂಪೆನಿಸ್) ೧೭೯೦ರ ಸಮಯದಲ್ಲಿ ಯುರೋಪಿಯನ್ನರು ಇನ್ನಿಲ್ಲದಂತೆ ಕೊಂದು ತಿಂದು ಮುಗಿಸಿಬಿಟ್ಟರು. ಅದೇ ರೀತಿಯಲ್ಲಿ ಕರೋಲಿನಾ, ಲೆಬ್ರಾಡರ್ ಡಕ್, ಪ್ಯಾರಡೈಸ್ ಗಿಳಿ, ಅರೇಬಿಯದ ಆಸ್ಟೆçಚ್, ನಗುವ ಗೂಬೆ, ಹಿಮಾಲಯದ ಕ್ವೆöÊಲ್ ಮೊದಲಾದ ಪಕ್ಷಿಗಳು ಸಂಪೂರ್ಣವಾಗಿ ಅಳಿದುಹೋಗಿದ್ದು ಈ ನಷ್ಟವನ್ನು ಇನ್ನೆಷ್ಟು ಪರಿತಪಿಸಿದರೂ, ಪಶ್ಚಾತ್ತಾಪಪಟ್ಟರೂ ಮತ್ತೆ ಜೀವಂತವಾಗಿ ಕಾಣಲು ಸಾಧ್ಯವೇ ಆಗುವುದಿಲ್ಲ. ಅದೇ ರೀತಿಯಲ್ಲಿ ಭಾರತದ ಅರಣ್ಯದ ಓಲೆಟ್ ಎನ್ನುವ ಬಹಳ ಅಪರೂಪದ ಹಕ್ಕಿಯ ಸಂಕುಲವೂ ೧೯೭೨ರಲ್ಲಿ ಸಂಪೂರ್ಣವಾಗಿ ನಿರ್ನಾಮವಾಯಿತು.

ಪಕ್ಷಿಗಳು ಶಾಶ್ವತವಾಗಿ ಕಣ್ಮರೆಯಾಗುವುದನ್ನು ತಪ್ಪಿಸಲು ಹಾಗೂ ಮುಂದಿನ ಪೀಳಿಗೆಗೂ ಈ ಪಕ್ಷಿಗಳನ್ನು ಪರಿಚಯಿಸಲು ದಿ ಏವಿಯನ್ ವೆಲ್ಫೇರ್ ಕೋಎಲಿಷನ್ ಎನ್ನುವ ಸಂಸ್ಥೆಯು ರಾಷ್ಟಿçÃಯ ಹಕ್ಕಿಗಳ ದಿನವನ್ನಾಗಿ ಜನವರಿ ಐದನ್ನು ೨೦೦೨ರ ಇಸವಿಯಂದು ಘೋಷಿಸಿತು. ಅಂದಿನಿAದ ಭಾರತದ ಯಾವುದೇ ವ್ಯಕ್ತಿಯು ಹಕ್ಕಿಗಳನ್ನು ಬೇಟೆಯಾಡುವುದು, ಅವನ್ನು ಬಂಧಿಸಿ ಗೂಡಿನಲ್ಲಿ ಅಥವಾ ಪಂಜರಗಳಲ್ಲಿ ಕೂಡಿಸುವುದು ಅಪರಾಧವೆಂದು ಘೋಷಣೆ ಮಾಡಲಾಯಿತು. ಇದರಿಂದಾಗಿ ಹಕ್ಕಿಗಳಿಗೆ ಆಗುವ ಹಿಂಸೆಯನ್ನು ತಡೆಗಟ್ಟಿ ಅವು ಇತರ ಜೀವಿಗಳಂತೆ ನಿರ್ಭಯವಾಗಿ ಬದುಕಲು ಅವಕಾಶ ಮಾಡಿಕೊಡಲಾಯಿತು.

ವಾತಾವರಣದ ವೈಪರೀತ್ಯತೆ, ವಾಸ ಸ್ಥಳದ ನಾಶ, ಕಡಿಮೆಗೊಳ್ಳುತ್ತಿರುವ ಅರಣ್ಯದ ಗಾತ್ರ, ಹೆಚ್ಚುತ್ತಿರುವ ನಗರೀಕರಣ, ವಾಯುಮಾಲಿನ್ಯ, ಶಬ್ದಮಾಲಿನ್ಯ, ಜಲಮಾಲಿನ್ಯ, ಕಾಳ್ಗಿಚ್ಚು ಇವು ಹಲವಾರು ಪಕ್ಷಿಗಳ ಜೀವನದ ಮೇಲೆ ಪರಿಣಾಮ ಬೀರಿ ಅವು ಅಳಿಯುವಂತೆ ಮಾಡುತ್ತಿವೆ. ಇದನ್ನು ಗಮನಿಸಿದ ಕೆಲವು ಚಿಂತಕರು ಪಕ್ಷಿಗಳ ನಾಶದ ಗಾಂಭೀರ್ಯತೆಯನ್ನು ಗಮನಿಸಿ ರಾಷ್ಟಿçÃಯ ಪಕ್ಷಿಗಳ ದಿನದಂದು ಹಲವಾರು ಉಪನ್ಯಾಸಗಳು, ವಿಚಾರ ಸಂಕಿರಣಗಳನ್ನು ವ್ಯಾಪಕವಾಗಿ ನಡೆಸಿ ಪಕ್ಷಿಗಳ ಅವನತಿಯನ್ನು ತಡೆಗಟ್ಟಲು ಪ್ರಯತ್ನಗಳನ್ನು ಕೈಗೊಳ್ಳುತ್ತಿದ್ದಾರೆ.

ಈ ವಿಶ್ವದಲ್ಲಿ ಒಟ್ಟು ಸುಮಾರು ೯,೮೦೦ ವಿವಿಧ ಬಗೆಯ ಪಕ್ಷಿಗಳಿದ್ದು ಈ ಎಲ್ಲ ಪಕ್ಷಿತಳಿಗಳನ್ನು ಒಬ್ಬ ವ್ಯಕ್ತಿಯು ತನ್ನ ಜೀವಿತಾವಧಿಯಲ್ಲಿ ಅರಣ್ಯಗಳಲ್ಲಿ ಕಾಣಲು ಸಾಧ್ಯವಾಗುವುದಿಲ್ಲ.

ಆದರೆ ಈ ಪಕ್ಷಿಗಳ ಬದುಕಿನ ಕ್ರಮಗಳು, ಇವುಗಳ ವಲಸೆಹೋಗುವಿಕೆ, ಇವು ದಾಂಪತ್ಯವನ್ನು ನಡೆಸಿ ಸಂತಾನವನ್ನು ಅಭಿವೃದ್ಧಿ ಮಾಡುವಿಕೆ ಮೊದಲಾದ ವಿಷಯಗಳ ಬಗ್ಗೆ ಆಸಕ್ತಿ ಯುಳ್ಳವರು ಈ ರಾಷ್ಟಿçÃಯ ಪಕ್ಷಿಗಳ ದಿವಸದಂದು ಸಭೆ ಸಮಾರಂಭಗಳಲ್ಲಿ ಭಾಗವಹಿಸಿ ಸೂಕ್ತ ಮಾಹಿತಿ ಪಡೆದು ಕೊಳ್ಳಬಹುದಾಗಿದೆ.

ಯಾವುದೇ ಪಕ್ಷಿಗಳಿಗೂ ಹಲ್ಲುಗಳಿರುವುದಿಲ್ಲ. ಪಕ್ಷಿಗಳು ಚಿಲಿಪಿಲಿಗುಟ್ಟುವುದರಿಂದ ಮತ್ತು ಹಾಡುವುದರಿಂದ ಇತರ ಪಕ್ಷಿಗಳೊಡನೆ ಯಶಸ್ವಿಯಾಗಿ ಸಂವಹನವನ್ನು ಮಾಡುತ್ತವೆ. ಪಕ್ಷಿಗಳು ತಮ್ಮ ಸಂಗಾತಿಯನ್ನು ಆರಿಸಿಕೊಳ್ಳಲು ವಿಶಿಷ್ಟವಾದ ಧ್ವನಿಯನ್ನು ಮಾಡುತ್ತವೆ. ಆಸ್ಟಿçಚ್ ಪಕ್ಷಿಗಳಿಗೆ ಅತ್ಯಂತ ದೊಡ್ಡ ಕಣ್ಣುಗಳಿವೆ. ಕೆಲವು ಪಕ್ಷಿಗಳು ಮನುಷ್ಯನ ಧ್ವನಿಯ ಅನುಕರಣೆ ಯನ್ನು ಮಾಡುತ್ತವೆ. ಪಕ್ಷಿಗಳು ಸಾಮೂಹಿಕವಾಗಿ ದೂರಕ್ಕೆ ಹಾರುವಾಗ ತಮ್ಮದೇ ಆದ ವಿಶಿಷ್ಟ ರೀತಿಯ ಹಾರುವ ಆಕಾರವನ್ನು ರಚಿಸಿಕೊಂಡು ಒಟ್ಟಾಗಿ ಹಾರುತ್ತವೆ. ಅಲ್ಲದೆ ಪಕ್ಷಿಗಳ ಸಮೂಹವು ಎಷ್ಟೇ ದಟ್ಟವಾಗಿದ್ದರೂ ಅವು ಹಾರುವಾಗ ಎಷ್ಟೇ ಪರಸ್ಪರ ಸಮೀಪದಲ್ಲಿ ಇದ್ದರೂ ಒಂದಕ್ಕೊAದು ಡಿಕ್ಕಿಯನ್ನು ಎಂದೂ ಹೊಡೆಯುವುದಿಲ್ಲ. ಗುಬ್ಬಚ್ಚಿಯಂತಹ ಕೆಲವು ಪಕ್ಷಿಗಳು ಕೇವಲ ಒಂದು ಗುಬ್ಬಚ್ಚಿ ಯೊಂದಿಗೆ ಮಾತ್ರ ಸಂಸಾರ ವನ್ನು ಮಾಡುತ್ತವೆ, ಅವೆಂದೂ ತಮ್ಮ ಜೊತೆಗಾರರನ್ನು ಬದಲಾಯಿಸುವುದಿಲ್ಲ.

ಮನುಷ್ಯರಿಲ್ಲದೆ ಎಲ್ಲ ಪಕ್ಷಿಗಳೂ ತಮ್ಮ ಪಾಡಿಗೆ ತಾವು ಪ್ರಕೃತಿಯಲ್ಲಿ ಲಭಿಸುವ ಹಣ್ಣಹಂಪಲುಗಳನ್ನು ತಿಂದು ಜೀವಿಸಲು ಸಾಧ್ಯವಿದೆ ಆದರೆ ಪಕ್ಷಿಗಳಿಲ್ಲದೆ ಮನುಷ್ಯನಿಗೆ ಒಂದು ವರ್ಷವೂ ಬದುಕಲು ಸಾಧ್ಯವಾಗುವುದಿಲ್ಲ. ಪಕ್ಷಿಗಳಿಂದ ಆಗುವ ಬೀಜ ಪ್ರಸಾರವೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಆದುದರಿಂದ ಪಕ್ಷಿಗಳನ್ನು ನಾಶ ಮಾಡುವುದೆಂದರೆ ನಮ್ಮ ವಿನಾಶವನ್ನು ನಾವೇ ತಂದುಕೊAಡAತೆ ಆಗುತ್ತದೆ.

ಇನ್ನಾದರೂ ಮನುಷ್ಯರು ಆಹಾರಕ್ಕಾಗಿ, ನಾಲಗೆಯ ಚಪಲಕ್ಕಾಗಿ ಪಕ್ಷಿಗಳನ್ನು ಬೇಟೆಯಾಡಿ ಕೊಂದು ತಿನ್ನುವು ದನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ಮುಂದಿನ ತಲೆಮಾರುಗಳಿಗೆ ಪಕ್ಷಿಗಳನ್ನು ಕೇವಲ ಚಿತ್ರಗಳಲ್ಲಿ ಮಾತ್ರ ತೋರಿಸಿ ಕೊಡಬೇಕಾದೀತು.

- ಕಿಗ್ಗಾಲು ಎಸ್. ಗಿರೀಶ್, ಮೂರ್ನಾಡು.

ಮೊ. ೯೧೪೧೩ ೯೫೪೨೬