ಮಡಿಕೇರಿ, ಜ. ೪: ಬುಧವಾರದ “ಶಕ್ತಿ”ಯಲ್ಲಿ ಮಂಡೀರ ದೇವಿ ಪೂಣಚ್ಚ ಅವರು ತಲಕಾವೇರಿಯಲ್ಲಿ ಸಮರ್ಪಕ ಪೂಜೆ ನಡೆಯುತ್ತಿಲ್ಲ ಎಂದು ಆಕ್ಷೇಪ ಮಾಡಿರುವುದಕ್ಕೆ ಅರ್ಚಕ ಸುಧೀರಾಚಾರ್ ಈ ಕೆಳಗಿನ ಸ್ಪಷ್ಟೀಕರಣ ನೀಡಿದ್ದಾರೆ.

ಜ. ೧ ರಂದು ದೇವಿ ಪೂಣಚ್ಚ ಅವರು ತಲಕಾವೇರಿಗೆ ಬಂದಿದ್ದಾಗ ಮಹಾಪೂಜೆಗೆ ಟಿಕೆಟ್ ಪಡೆದುಕೊಂಡಿದ್ದರು. ಮಹಾಪೂಜೆಯ ಟಿಕೆÀಟ್ ಕಾವೇರಿ ಮಾತೆಗೆೆ ಸಲ್ಲಿಸುವ ಪೂಜೆಗೆ ಅನ್ವಯವಾಗುತ್ತದೆ. ಬಳಿಕ ಪೂಜೆ ಮಾಡಿಸಿದ ಭಕ್ತಾದಿಗಳಿಗೆ ತೀರ್ಥ ಬಾಟಲಿ, ಪಂಚಕಜ್ಜಾಯ ಪ್ರಸಾದ ನೀಡಲಾಗುತ್ತದೆ. ಆದರೆ, ಗಣಪತಿ ಮತ್ತು ಅಗಸ್ತೆö್ಯÃಶ್ವÀರ ಸನ್ನಿಧಿಯಲ್ಲಿ ಮಂಗಳಾರತಿ ಮಾಡಲು ಆ ಟಿಕೆಟ್ ಅನ್ವಯವಾಗುವುದಿಲ್ಲ. ಅದಕ್ಕೆ ಬೇರೆ ತೆಗೆದುಕೊಳ್ಳಬೇಕಾಗುತ್ತದೆ. ಅಥವಾ ಭಕ್ತಾದಿಗಳು ಮಂಗಳಾರತಿ ಮಾಡಿ ಎಂದು ಕೇಳಿದರೆ ಮಾಡುತ್ತೇವೆ ಎಂದು ಸುಧೀರಾಚಾರ್ ಸ್ಪಷ್ಟನೆಯಿತ್ತ್ತಿದ್ದಾರೆ.