ಸೋಮವಾರಪೇಟೆ, ಜ. ೩: ಕರ್ನಾಟಕ ಸ್ಟೇಟ್ ಟೈರ್ಸ್ ಅಸೋಸಿಯೇಷನ್ನ ಸೋಮವಾರಪೇಟೆ ಕ್ಷೇತ್ರ ಸಮಿತಿ ಸರ್ವ ಸದಸ್ಯರ ಸಭೆ ಪತ್ರಿಕಾಭವನದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್.ಸಿ. ನಂದೀಶ್ ಮಾತನಾಡಿ, ನಗರ ಪ್ರದೇಶಗಳಲ್ಲಿ ಟೈಲರ್ಗಳ ಕುಟುಂಬಸ್ಥರು ನೆಮ್ಮದಿ ಜೀವನ ನಡೆಸುತ್ತಿದ್ದರೂ, ಗ್ರಾಮೀಣ ಭಾಗಗಳಲ್ಲಿ ಇಂದಿಗೂ ಸಂಕಷ್ಟದ ಜೀವನ ನಡೆಸುತ್ತಿದ್ದಾರೆ ಎಂದರು.
ಸ್ಥಳೀಯ ಸಂಘಕ್ಕೆ ೨೨ ವರ್ಷಗಳು ಪೂರೈಸಿದ್ದರೂ, ಇಂದಿಗೂ ನಾವು ಸಂಘಟಿತರಾಗಲು ಸಾಧ್ಯವಾಗಲಿಲ್ಲ. ಎಲ್ಲಿಯವರೆಗೆ ನಾವು ಒಂದುಗೂಡುವುದಿಲ್ಲವೋ ಅಲ್ಲಿಯತನಕ ಸರ್ಕಾರದ ಮತ್ತು ಇತರೆ ಯೋಜನೆಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ ವೃತ್ತಿಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಸಂಘದ ಸದಸ್ಯತ್ವ ಪಡೆದು ಸಂಘಟಿತರಾಗಬೇಕು. ಸಂಘದ ಎಲ್ಲ ಕಾರ್ಯಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮವನ್ನು ರಾಜ್ಯ ಸಮಿತಿಯ ಕಾರ್ಯದರ್ಶಿ ಕುಶಾಲನಗರದ ವಿಜಯ್ ಉದ್ಘಾಟಿಸಿದರು. ನಂತರ ಮಾತನಾಡಿ, ರಾಜ್ಯ ಸಂಘ ಮುಂದಿನ ತಿಂಗಳು ೨೫ ವರ್ಷ ಪೂರೈಸುತ್ತಿರುವುದರಿಂದ, ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಪ್ರಧಾನಮAತ್ರಿ ವಿಶ್ವಕರ್ಮ ಸೇವಾಸಂಸ್ಥೆಯ ಸವಿತ ಮಾತನಾಡಿ, ಟೈಲರ್ಗಳು ವಿಶ್ವಕರ್ಮ ಯೋಜನೆಯಲ್ಲಿ ನೋಂದಾಯಿಸಿಕೊಳ್ಳುವAತೆ ಮನವಿ ಮಾಡಿದರು. ಯೋಜನೆಯಿಂದ ಸದಸ್ಯರಿಗೆ ೬೦ ವರ್ಷಗಳ ನಂತರ ಪಿಂಚಣಿ ನೀಡಲಾಗುತ್ತದೆ. ಇದರೊಂದಿಗೆ ಇನ್ನಷ್ಟು ಪ್ರಯೋಜನ ಪಡೆಯಲು, ಸಂಘದ ಸದಸ್ಯರು ಯೋಜನೆಯಡಿ ಹೆಸರು ನೋಂದಾಯಿಸಿಕೊಳ್ಳುವ ಮೂಲಕ ಯೋಜನೆಯ ಲಾಭ ಪಡೆಯಬೇಕೆಂದರು. ಸದಸ್ಯರು ತಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ರೇಷನ್ ಕಾರ್ಡ್ ಮಾಹಿತಿ ಸಲ್ಲಿಸಿ ಸ್ಥಳೀಯ ಸೇವಾ ಕೇಂದ್ರಗಳಲ್ಲಿ ನೋಂದಾಯಿಸಿಕೊಳ್ಳಲು ಅವಕಾಶ ಇರುವುದಾಗಿ ತಿಳಿಸಿದರು.
ಸಭೆಯ ಅಧ್ಯಕ್ಷತೆಯನ್ನು ಸಮಿತಿ ಅಧ್ಯಕ್ಷ ಹೊಸೊಕ್ಲು ಲಿಂಗಪ್ಪ ವಹಿಸಿದ್ದರು. ಕ್ಷೇತ್ರ ಸಮಿತಿ ಗೌರವಾಧ್ಯಕ್ಷ ಬಿ.ಎನ್. ಮಂಜುನಾಥ್, ಕೊಡ್ಲಿಪೇಟೆ ವಲಯ ಸಮಿತಿ ಅಧ್ಯಕ್ಷ ಪಿತಾಂಬರ ಗೌಡ, ಕುಶಾಲನಗರ ವಲಯ ಸಮಿತಿ ಅಧ್ಯಕ್ಷೆ ಭವಾನಿ ಉಪಸ್ಥಿತರಿದ್ದರು. ನಂತರ ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲ ಸದಸ್ಯರು ವಿಶ್ವಕರ್ಮ ಯೋಜನೆಯಡಿ ಹೆಸರು ನೋಂದಾಯಿಸಿಕೊAಡರು.