ಸುಂಟಿಕೊಪ್ಪ, ಜ. ೩: ಸುಂಟಿಕೊಪ್ಪ ಗ್ರಾ.ಪಂ.ನ ೨೦೨೩ನೇ ಸಾಲಿನ ಗ್ರಾಮ ಸಭೆಯು ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್. ಸುನಿಲ್‌ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಗ್ರಾಮಸಭೆಗೆ ನೊಡೆಲ್ ಅಧಿಕಾರಿಯಾಗಿ ಸೋಮವಾರಪೇಟೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ದೇಗೌಡ ಅವರು ಆಗಮಿಸಿದ್ದರು. ಕಳೆದ ಸಾಲಿನ ಗ್ರಾಮಸಭೆಯ ವರದಿ ಮಂಡನೆಯಾದ ನಂತರ ನಿರ್ಣಯವಾದ ಎಷ್ಟು ಕೆಲಸಗಳು ಅನುಷ್ಠಾನಗೊಂಡಿವೆ? ಚೆಸ್ಕಾಂ ಇಲಾಖೆಯ ವಿದ್ಯುತ್ ಬಿಲ್ ಪಾವತಿಸಲಾಗಿದೆಯೇ..? ಎಂದು ಇಸಾಕ್‌ಖಾನ್ ಪ್ರಶ್ನಿಸಿದರು. ಅರ್ಧಭಾಗದಷ್ಟು ಪಾವತಿಸಲಾಗಿದೆ. ಮುಂದಿನ ದಿನಗಳಲ್ಲಿ ಪಾವತಿಸಲು ಅನುದಾನವನ್ನು ಕಾಯ್ದಿರಿಸಲಾಗಿದೆ ಎಂದು ಅಧ್ಯಕ್ಷರು ಮಾಹಿತಿ ಇತ್ತರು.

ಕೇಂದ್ರ ಸರಕಾರದ ಜಲಜೀವನ್ ಯೋಜನೆ ಅನುಷ್ಠಾನ ಯಾಕೆ ವಿಳಂಬಗೊAಡಿದೆ ಎಂಬುದಾಗಿ ಬಿ.ಕೆ. ಮೋಹನ್ ಪ್ರಶ್ನಿಸಿದರು. ಇದಕ್ಕೆ ಜಿಲ್ಲಾ ಪಂಚಾಯಿತಿ ಅಭಿಯಂತರರಾದ ಫಯಾಜ್ ಟೆಂಡರ್ ಪ್ರಕ್ರಿಯೆಯು ನಡೆದಿದ್ದು ಮುಂದಿನ ದಿನಗಳಲ್ಲಿ ಕಾಮಗಾರಿ ನಿರ್ವಹಿಸಲಾಗುವುದು ಎಂದು ಉತ್ತರಿಸಿದರು.

ಸುಂಟಿಕೊಪ್ಪ ಪಟ್ಟಣದಲ್ಲಿ ಕಸ ವಿಲೇವಾರಿಯು ಸರಿಯಾದ ರೀತಿಯಲ್ಲಿ ನಡೆಸುತ್ತಿಲ್ಲ. ಕಸವನ್ನು ಸಂಗ್ರಹಿಸುವ ವಾಹನ ಬಾರದ ಹಿನ್ನೆಲೆ ವಾರಗಟ್ಟಲೇ ಕಸವನ್ನು ಮನೆಗಳಲ್ಲಿ ಸಂಗ್ರಹಿಸಿ ಇಡುವಂತಾಗಿದೆ. ರಸ್ತೆ ಇಕ್ಕೆಲ, ಮನೆಯ ಮುಂಭಾಗದಲ್ಲಿ ಇರಿಸುವ ಕಸವನ್ನು ನಾಯಿ ಸೇರಿದಂತೆ ಇತರೆ ಪ್ರಾಣಿಗಳು ಎಳೆದಾಡುತ್ತಿವೆ. ಹಿಂದಿನAತೆ ಕಸದ ತೊಟ್ಟಿಗಳನ್ನು ಅಳವಡಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿ ನೂತನ ೨ ವಾಹನ ಖರೀದಿಗೆ ಪತ್ರ ವ್ಯವಹಾರ ನಡೆಸಲಾಗಿದೆ. ವಾಹನಗಳು ಬಂದಲ್ಲಿ ಸಮಸ್ಯೆಯು ಬಗೆಹರಿಯಲಿದೆ ಎಂದರು. ಗದ್ದೆಹಳ್ಳದ ಗಿರಿಯಪ್ಪ ಮನೆಯ ಬಳಿ ಹರಿಯುತ್ತಿದ್ದ ಮತ್ತೊಂದು ತೋಡು ನೀರನ್ನು ಅವೈಜ್ಞಾನಿಕವಾಗಿ ಈ ಭಾಗದ ತೋಡಿನ ನೀರಿಗೆ ಸೇರ್ಪಡೆಗೊಳಿಸಿರು ವುದರಿಂದ ಮಳೆಗಾಲದಲ್ಲಿ ತೋಡು ನೀರು ವಾಸದ ಮನೆಗಳಿಗೆ ನುಗ್ಗುತ್ತಿದ್ದು ಉಕ್ಕಿ ಹರಿಯಲಾರಂಭಿಸಿದ್ದು ಈ ಭಾಗದಲ್ಲಿ ನೆಲೆಸಿರುವ ಮನೆಗಳಿಗೆ ನೀರು ನುಗ್ಗುವುದಲ್ಲದೆ ನಡೆದಾಡಲು ಕಷ್ಟವಾಗುತ್ತಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.

೨ನೇ ಮತ್ತು ೩ನೇ ವಿಭಾಗದಲ್ಲಿ ೧೦ ವರ್ಷಗಳಿಂದ ನ್ಯಾಯಬೆಲೆ ಅಂಗಡಿಗಾಗಿ ಬೇಡಿಕೆಯನ್ನು ಸಲ್ಲಿಸುತ್ತಿದ್ದೇವೆ. ಇಂದಿನವರೆಗೂ ನ್ಯಾಯಬೆಲೆ ತೆರೆದಿಲ್ಲವೆಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಹಾರ ಅಧಿಕಾರಿ ಶ್ವೇತಾ ಮಾತನಾಡಿ, ಅಧಿಕೃತ ನೊಂದಾಯಿತ ಸಂಘಕ್ಕೆ ನ್ಯಾಯಬೆಲೆ ಅಂಗಡಿ ತೆರೆಯಲು ಅನುಮತಿ ನೀಡುತ್ತೇವೆ ಎಂದರು.

ವಾರಾಂತ್ಯ ದಿನಗಳಲ್ಲಿ ವಾಹನ ದಟ್ಟಣೆಯು ಹೆಚ್ಚಾಗಿದ್ದು ರಸ್ತೆಯ ೨ ಬದಿಗಳಲ್ಲಿ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ರಾಷ್ಟಿçÃಯ ಹೆದ್ದಾರಿ ಬದಿಯಲ್ಲಿ ಕಟ್ಟಡಗಳನ್ನು ಕೆಲವು ನಿಯಮಗಳನ್ನು ಮೀರಿ ನಿರ್ಮಿಸಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದರು.

ಗದ್ದೆಹಳ್ಳ ಸರಕಾರಿ ಪ್ರಾಥಮಿಕ ಶಾಲೆಗೆ ಅಕ್ಷರ ದಾಸೋಹದ ಅಡುಗೆಗೂ ನೀರಿನ ಸಮಸ್ಯೆ ತಲೆದೋರಿದೆ ಎಂದು ಶಾಲಾ ಮುಖ್ಯೋಪಾಧ್ಯಾಯಿನಿ ಹೇಮಾಕುಮಾರಿ, ಸುಂಟಿಕೊಪ್ಪ ಸರಕಾರಿ ಪ್ರಾಥಮಿಕ ಶಾಲೆ ಶಿಕ್ಷಕಿ ಸೌಭಾಗ್ಯ ತಿಳಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಾಸ್ತಾವಿಕವಾಗಿ ಮಾತನಾಡಿ ಗ್ರಾಮ ಸಭೆಯ ಮಹತ್ವತೆ ಹಾಗೂ ಸಾಧಕ ಭಾದಕಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ವಿವಿಧ ಇಲಾಖೆಗಳ ಅಧಿಕಾರಿಗಳು ಇಲಾಖೆಯಲ್ಲಿರುವ ಮೂಲ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ಗ್ರಾ.ಪಂ. ಉಪಾಧ್ಯಕ್ಷೆ ಶಿವಮ್ಮ ಮಹೇಶ್, ಸದಸ್ಯರಾದ ಪಿ.ಎಫ್. ಸಬಾಸ್ಟೀನ್, ರಫೀಕ್‌ಖಾನ್, ಆಲಿಕುಟ್ಟಿ, ಪ್ರಸಾದ್‌ಕುಟ್ಟಪ್ಪ, ಶಬೀರ್, ಸೋಮನಾಥ್, ಜೀನಾಸುದ್ದೀನ್, ಮಂಜುನಾಥ, ನಾಗರತ್ನ ಸುರೇಶ್, ಮಂಜುಳ (ರಾಸಥಿ), ವಸಂತಿ, ಹಸೀನಾ, ರೇಷ್ಮ, ಗ್ರಾ.ಪಂ. ಲೆಕ್ಕಾಧಿಕಾರಿ ಚಂದ್ರಕಲಾ, ಸಿಬ್ಬಂದಿಗಳಾದ ಡಿ.ಎಂ. ಮಂಜುನಾಥ್, ಬಿಲ್ ಕಲೆಕ್ಟರ್ ಶ್ರೀನಿವಾಸ್, ಸಂಧ್ಯಾ ಹಾಗೂ ಪೌರಕಾರ್ಮಿಕರು ಇದ್ದರು.