ಸುಂಟಿಕೊಪ್ಪ, ಜ. ೩: ಸುಂಟಿಕೊಪ್ಪ ಎಸ್‌ಎಂಎಸ್ ಪದವಿಪೂರ್ವ ಕಾಲೇಜಿನ ದೇಶಿಯ ಮಟ್ಟದಲ್ಲಿ ಎಸ್‌ಕೆಎಸ್‌ಎಸ್‌ಎಫ್ ಮುಖದ್ದಸ್ ಯಾತ್ರೆ ಕೇರಳದಲ್ಲಿ ಆಯೋಜಿಸಲಾಗಿದ್ದು ಯಾತ್ರೆಗೆ ಸುಂಟಿಕೊಪ್ಪದಲ್ಲಿ ಹಮೀದ್ ಆಲಿ ಶಿಯಾಬ್ ತಂಞಳ್ ಸೋಮವಾರ ಚಾಲನೆ ನೀಡಿದರು.

ಕೇರಳ ರಾಜ್ಯದ ಮಲ್ಲಪುರಂನಲ್ಲಿ ಮಾರ್ಚ್ ತಿಂಗಳಿನಲ್ಲಿ ಆಯೋಜಿಸಲಾಗಿರುವ ಶಾಂತಿ ಸಹನೆ ಸೌಹಾರ್ದತೆ ಸಮರ್ಪಣೆಯ ಮುಖದ್ದಸ್ ಯಾತ್ರೆಯ ಮೂಲ ಉದ್ದೇಶ ಬಗ್ಗೆ ಈ ಸಂಸ್ಥೆಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಕಾಲೇಜುಗಳಿಗೆ ಮುಖದ್ದಸ್ ಯಾತ್ರೆಯ ಮಾಹಿತಿ ನೀಡುವ ಸದುದ್ದೇಶವನ್ನು ಇರಿಸಲಾಗಿದೆ. ಯುವಪೀಳಿಗೆಗೆ ಜಾಗೃತಿಯನ್ನು ಮೂಡಿಸಲಾಗುತ್ತಿದೆ.

ಮುಖದ್ದಸ್ ಯಾತ್ರೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು, ಪೋಷಕರು, ಜನಾಂಗದವರು ಸೇರಿದಂತೆ ಪ್ರಮುಖರು ಯಾತ್ರೆಯನ್ನು ಯಶಸ್ವಿಗೊಳಿಸುವಂತೆ ಹಮೀದ್ ಆಲಿ ಶಿಯಾಬ್ ತಂಞಳ್ ಹೇಳಿದರು.

ಈ ಸಂದರ್ಭ ವೇದಿಕೆಯಲ್ಲಿ ಪಾನಕಾಡ್ ಶಾಹಿರ್ ಆಲಿಶಿಯಾಬ್ ತಂಞಳ್, ವಿಟ್ಲದ ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ, ಕೆಪಿಸಿಸಿ ಸದಸ್ಯ ಕೆ.ಎ. ಯಾಕೂಬ್, ಕೊಡಗು ಉಪಖಾಜಿ ಅಬ್ಧುಲ್ಲಾ ಫೈಝಿ, ಎಸ್‌ಕೆಎಸ್‌ಎಸ್‌ಎಫ್ ಜಿಲ್ಲಾಧ್ಯಕ್ಷ ತಮ್ಲಿಕ್ ಧಾರ್ಮಿ, ಕಾರ್ಯದರ್ಶಿ ಜಂಶೀರ್ ವಾಸಿ, ಕಾಲೇಜು ಸಮಿತಿ ಅಧ್ಯಕ್ಷ ಉಮ್ಮರ್ ಫೈಝಿ, ಕಾರ್ಯದರ್ಶಿ ಸಿ.ಎಂ. ಹಮೀದ್ ಮೌಲವಿ, ಉಸ್ಮಾನ್ ಫೈಝಿ, ಹಾರೀಫ್ ಫೈಝಿ, ಕೊಡಗರಹಳ್ಳಿ ಬಾಪ್ಪುಹಾಜಿ, ಕುಶಾಲನಗರ ಹಂಸ ಹಾಜಿ, ಸಿದ್ಧಕ್ ಹಾಜಿ ಕೊಡ್ಲಿಪೇಟೆ ಮತ್ತಿತರರು ಇದ್ದರು.