್ಡ ಅನಿಲ್ ಎಚ್.ಟಿ.
ಅಯೋಧ್ಯೆಯಲ್ಲಿ ಮುಸ್ಲಿಮರಿಗೆ ಪ್ರಾರ್ಥನೆ ಸಲ್ಲಿಸಲು ನೂರಾರು ಮಸೀದಿಗಳಿವೆ. ಆದರೆ ಹಿಂದೂಗಳಿಗೆ ಇರುವುದು ಒಂದೇ ಮಂದಿರ.. ಅದುವೇ ಶ್ರೀರಾಮಮಂದಿರ.... ಇಲ್ಲಿಯೇ ರಾಮನ ಪೂಜೆಗೆ ಅವಕಾಶ ಮಾಡಿಕೊಡಬೇಕಾಗಿ ಪ್ರಾರ್ಥನೆ..
ಭಾರತದ ಸರ್ವೋಚ್ಚ ನ್ಯಾಯಾಲಯದ ಪಂಚನ್ಯಾಯಾಧೀಶರ ಪೀಠದ ಮುಂದೆ ಹೀಗೊಂದು ವಾದವನ್ನು ಮಂಡಿಸಿ ಅಂತಿಮವಾಗಿ ರಾಮನಿಗೆ ಅಯೋಧ್ಯೆಯಲ್ಲಿಯೇ ಮಂದಿರ ನಿರ್ಮಾಣವಾಗಬೇಕು ಎಂದು ಕೋರ್ಟ್ ಆದೇಶಿಸುವಂತೆ ಮಾಡಿದ ಹಿರಿಮೆಗೆ ಪಾತ್ರರಾದ ವಕೀಲರೇ ಕೇಶವ ಪರಾಶರನ್.
ಈ ರೀತಿ ವಾದ ಮಂಡಿಸುವಾಗ ಕೇಶವ ಅವರಿಗೆ ೯೩ ವರ್ಷ ಪ್ರಾಯ, ನಡೆದಾಡಲೂ ಕಷ್ಟವಾಗುತ್ತಿದ್ದರೂ ರಾಮನ ಪರವಾಗಿ ವಾದ ಮಂಡಿಸುವಾಗ ಸುಸ್ತೇ ಆಗದವರಂತೆ ಈ ವಕೀಲರು ನ್ಯಾಯಪೀಠದ ಮುಂದೆ ಗಂಟೆಗಟ್ಟಲೆ ವಾದಿಸುತ್ತಿದ್ದರು. ಅಂದೊಮ್ಮೆ.. "ಮಿಸ್ಟರ್ ಕೇಶವ್ ನೀವು ಹಿರಿಯರಿದ್ದೀರಿ. ನಿಮ್ಮ ವಯಸ್ಸನ್ನು ಪರಿಗಣಿಸಿ ನಿಮಗೆ ಕುಳಿತುಕೊಂಡೇ ವಾದ ಮಂಡಿಸಲು ಕೋರ್ಟ್ ಅನುಮತಿ ನೀಡುತ್ತಿದೆ" ಎಂದು ಸುಪ್ರಿಂಕೋರ್ಟ್ ನ್ಯಾಯಾಧೀಶರಾದ ರಂಜನ್ ಗೋಗೋಯ್ ಹೇಳಿದಾಗ "ಇಲ್ಲ.. ಇಲ್ಲ.. ಮೈ ಲಾರ್ಡ್.. ನನಗೆ ಸುಸ್ತಾಗುತ್ತಿಲ್ಲ.. ನಾನು ಶ್ರೀರಾಮನ ಪರವಾಗಿ ವಾದ ಮಂಡಿಸುತ್ತಿದ್ದೇನೆ. ನಿಂತುಕೊAಡೇ ನನ್ನ ಹೇಳಿಕೆ ದಾಖಲಿಸುತ್ತೇನೆ" ಎಂದು ಕೇಶವ್ ಹೇಳಿದ್ದರು.
ಸುಪ್ರಿಂಕೋರ್ಟ್ನಲ್ಲಿ ೪೦ ದಿನಗಳ ಕಾಲ ಅಯೋಧ್ಯೆ ಶ್ರೀರಾಮಮಂದಿರ ವಿವಾದದ ಅಂತಿಮ ಹಂತದ ವಾದ ಪ್ರತಿವಾದ ನಡೆಯಿತು. ಕೇಶವ ಪರಾಶರನ್ ಈ ನಿಟ್ಟಿನಲ್ಲಿ ಸಾವಿರಕ್ಕೂ ಅಧಿಕ ಗ್ರಂಥಗಳನ್ನು ಅಧ್ಯಯನ ಮಾಡಿದ್ದರು. ಲೆಕ್ಕವೇ ಇಲ್ಲದಷ್ಟು ಕಾನೂನು ಪುಸ್ತಕಗಳನ್ನು ಓದಿಕೊಂಡಿದ್ದರು. ೧೨ ವಕೀಲರ ತಂಡವನ್ನೂ ವಾದದ ಸಂದರ್ಭದಲ್ಲಿ ಪೂರಕ ಮಾಹಿತಿಗಾಗಿ ಕೋರ್ಟ್ನಲ್ಲಿ ತನ್ನೊಂದಿಗೆ ಹೊಂದಿದ್ದರು. ಶ್ರೀ ರಾಮನ ಪರವಾಗಿ ತಾನು ನ್ಯಾಯ ಕೇಳುತ್ತಿರುವುದು.. ಹೀಗಾಗಿ ಎಲ್ಲಿಯೂ ತಾನು ತಪ್ಪಬಾರದು.. ತಡ ಬಡಾಯಿಸಬಾರದು ಎಂದುಕೊAಡಿದ್ದರು. ಕೇಶವ ಪರಾಶರನ್. ಸಂಶೋಧನೆ ಗಳ ಸಹಿತ ಕೋರ್ಟ್ಗೆ ಹಾಜರಾಗುತ್ತಿದ್ದರು. ಕೆಲವೊಂದು ದಿನ ಸತತ ೮ ಗಂಟೆಗಳ ಕಾಲ ಕೇಶವ ಅವರು ನಿಂತುಕೊAಡೇ ವಾದ ಮಂಡನೆಯಲ್ಲಿ ತೊಡಗಿಕೊಂಡಿದ್ದರು. ಆಗೆಲ್ಲಾ ಒಂದೆರಡು ಬಾರಿ ನೀರು ಕುಡಿಯುತ್ತಿದ್ದುದು ಬಿಟ್ಟರೆ ಪ್ರತಿವಾದಿ ವಕೀಲರಿಗೆ ನೀರು ಕುಡಿಸಿದ್ದ ಸಂದರ್ಭವೇ ಹೆಚ್ಚು!
ಪ್ರತಿವಾದಿ ವಕೀಲರು, ಒಮ್ಮೆ ಮಸೀದಿಯಾಗಿದ್ದರೆ ಅದು ಎಂದೆAದಿಗೂ ಮಸೀದಿಯೇ ಎಂದಾಗ ಕೇಶವ ಪರಾಶರನ್, ಕಿಂಚಿತ್ತೂ ಹಿಂದೇಟು ಹಾಕದೆ ಅಯೋಧ್ಯೆಯಲ್ಲಿ ಮುಸ್ಲಿಮರಿಗೆ ಪ್ರಾರ್ಥನೆ ಸಲ್ಲಿಸಲು ನೂರಾರು ಮಸೀದಿಗಳಿವೆ. ಆದರೆ ಹಿಂದೂಗಳಿಗೆ ಇರುವುದು ಒಂದೇ ಮಂದಿರ.. ಅದುವೇ ರಾಮಮಂದಿರ. ಇಲ್ಲಿಯೇ ರಾಮನ ಪೂಜೆಗೆ ಅವಕಾಶ ಮಾಡಿಕೊಡಬೇಕಾಗಿ ಪ್ರಾರ್ಥನೆ.. ಎಂದು ನ್ಯಾಯಪೀಠದ ಮುಂದೆ ಕೋರಿಕೆ ಸಲ್ಲಿಸಿದ್ದರು. ರಾಮನ ಬಗೆಗಿನ ಶ್ಲೋಕ, ಗ್ರಂಥಗಳಲ್ಲಿನ ಉಲ್ಲೇಖಗಳನ್ನು ಕೇಶವ ಹೇಳುತ್ತಿದ್ದ ರೀತಿಯೆ ಅದ್ಭುತವಾಗಿತ್ತು. ತಾಳ್ಮೆ ಕಳೆದುಕೊಳ್ಳದೆ, ಪ್ರತಿವಾದಿ ವಕೀಲರ ಮೇಲೆ ಎಗರಾಡದೇ ನಿರರ್ಗಳವಾಗಿ ವಾದ ಮಂಡಿಸುತ್ತಿದ್ದರು ಕೇಶವ ಪರಾಶರನ್. ಅವರನ್ನು ಭಾರತೀಯ ಕಾನೂನುಗಳ ಪಿತಾಮಹ ಎಂದು ಮದ್ರಾಸ್ ಹೈಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಬಣ್ಣಿಸಿದ್ದರು.
ಅದು ೨೦೧೯ ನವೆಂಬರ್ ೫. ಸರ್ವೋಚ್ಚ ನ್ಯಾಯಾಲಯ ಶ್ರೀರಾಮ ಮಂದಿರದ ಬಗ್ಗೆ ತನ್ನ ಅಂತಿಮ ತೀರ್ಪು ನೀಡಿದ ದಿನ. ಕೋರ್ಟ್ನಲ್ಲಿದ್ದ ಕೇಶವ ಪರಾಶರನ್ ಅವರಿಗೆ ಅಭಿನಂದನೆಯ ಸುರಿಮಳೆ.. ಇಂತಹ ಸಂದರ್ಭವೂ ಕಿಂಚಿತ್ತೂ ಹಿಗ್ಗದೆ ಎಂದಿನ ಭಾವನೆಗಳೊಂದಿಗೆ ಎಲ್ಲರೊಂದಿಗೂ ಬೆರೆತ ಕೇಶವ ದೆಹಲಿಯಲ್ಲಿದ್ದ ತನ್ನ ಫ್ಲಾಟ್ಗೆ ಮರಳಿದಾಗ ಅವರಿಗೆ ಸಖೇದಾಶ್ಚರ್ಯ ಕಾದಿತ್ತು. ಅಂದಿನವರೆಗೂ ಸುತ್ತ ಮುತ್ತ ಕಾಣಿಸಿಕೊಳ್ಳದೇ ಇದ್ದ ನೂರಾರು ಸಂಖ್ಯೆಯಲ್ಲಿದ್ದ ಮಂಗಗಳು ಕೇಶವ ಅವರಿಗೆ ಸೇರಿದ ಫ್ಲಾಟ್ನ ಅಪಾರ್ಟ್ಮೆಂಟ್ ವ್ಯಾಪ್ತಿಯಲ್ಲಿ ಕಂಡುಬAದವು. ಮರದಿಂದ ಮರಕ್ಕೆ, ಕಟ್ಟಡದಿಂದ ಕಟ್ಟಡಕ್ಕೆ ಹಾರುತ್ತಿದ್ದ ವಾನರ ಸೇನೆ ನೋಡಿದ ಅನೇಕರು, ಕೋರ್ಟ್ ತೀರ್ಪಿಗೆ ಕಾರಣರಾದ ಕೇಶವ ಸಾರ್ ಅವರನ್ನು ಅಭಿನಂದಿಸಲು ಈ ರೀತಿ ವಾನವರು ಇವರ ಮನೆ ಬಳಿ ಬಂದು ಸಂತೋಷ ವ್ಯಕ್ತಪಡಿಸುತ್ತಿರಬೇಕೆಂದು ಭಾವಿಸಿದರು.
ಅಂದAತೆ, ಕೇಶವ ಅವರ ಇತಿಹಾಸದ ಕೇಸ್ಗಳನ್ನು ಗಮನಿಸಿದರೆ ಮತ್ತೊಂದು ಅಚ್ಚರಿಯ ವಿಚಾರ ತಿಳಿಯುತ್ತದೆ. ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಕೋರ್ಟ್ ಅನುಮತಿ ನೀಡಿದ ಸಂದರ್ಭ ಕೇರಳದ ನಾಯರ್ ಸೊಸೈಟಿಯ ವಕೀಲರಾಗಿ ಇದೇ ಕೇಶವ ಕೋರ್ಟ್ನಲ್ಲಿ ವಾದ ಮಂಡಿಸಿದ್ದರು.
ಬ್ರಹ್ಮಾಚಾರಿ ದೇವರಾದ ಅಯ್ಯಪ್ಪನ ದರ್ಶನಕ್ಕೆ ಮಹಿಳೆಯರಿಗೆ ಅವಕಾಶ ನೀಡದಿರುವುದರ ಹಿಂದೆ ಪುರಾಣ ಕಾಲದ ಅನೇಕ ಕಾರಣಗಳಿದೆ. ಅವೆಲ್ಲವನ್ನೂ ಪ್ರಶ್ನಿಸಬಾರದು ಎಂದು ಕೇಶವ ವಾದ ಮಂಡಿಸಿದ್ದರು. ರಾಮಸೇತು ವಿಚಾರದಲ್ಲಿಯೂ ಕೇಶವ ಪರಾಶರನ್ ಕೋರ್ಟ್ ಮೆಟ್ಟಿಲೇರಿ ಜಯ ದೊರಕಿಸಿಕೊಟ್ಟರು. ಕೇಶವ ರಾಮಮಂದಿರದ ಅಗತ್ಯತೆ ಬಗ್ಗೆ ವಾದ ಮಂಡಿಸುವಾಗ ಕೋರ್ಟ್ನಲ್ಲಿ ಇದ್ದ ನ್ಯಾಯಾಧೀಶರು, ಪ್ರತಿವಾದಿ ವಕೀಲರು ಇವರಿಗಿಂತ ಬಹಳ ಸಣ್ಣ ವಯಸ್ಸಿನವರು ಎಂಬುದು ಕೂಡ ಗಮನಾರ್ಹ..
ಯೋಗಾಯೋಗ..
೬೦ ವರ್ಷಗಳ ಸುದೀರ್ಘ ವಕೀಲ ವೃತ್ತಿಯ ಬಳಿಕ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಕೇಶವ ಅವರಿಗೆ ಶ್ರೀ ರಾಮನ ಪರವಾಗಿ ವಾದ ಮಂಡಿಸಲು ಅವಕಾಶ ದೊರಕಿದ್ದು ಆಕಸ್ಮಿಕ. ಇದು ಯೋಗಾಯೋಗವೂ ಹೌದು. ಶ್ರೀರಾಮನ ಮಂದಿರವನ್ನು ಅಯೋಧ್ಯೆಯಲ್ಲಿ ನಿರ್ಮಾಣ ಮಾಡುವ ಸಂಬAಧ ಸೂಕ್ತ ವಕೀಲರ ತಲಾಶೆಯಲ್ಲಿದ್ದ ಶ್ರೀರಾಮ ತೀರ್ಥ ಟ್ರಸ್ಟ್ಗೆ ಸಮರ್ಥರಾಗಿ ಕಂಡುಬAದವರೇ ಈ ಕೇಶವ.. ಮನೆಯಲ್ಲಿದ್ದ ಕೇಶವ ಅವರನ್ನು ಸಂಪರ್ಕಿಸಿ ಈ ಕೇಸ್ ಒಪ್ಪಿಕೊಳ್ಳಿ ಎಂದಾಗ ಶ್ರೀರಾಮನ ಪರಮ ಭಕ್ತರಾದ ಕೇಶವ ಪರಾಶರನ್ ಹೇಳಿದ್ದು ಒಂದೇ ಮಾತು.. ಈ ಕೇಸ್ ಒಪ್ಪಿಕೊಳ್ಳುವೆ.. ನಿಮಗಾಗಿ ಅಲ್ಲ... ನನಗಾಗಿಯೂ ಅಲ್ಲ. ನಾನು ಒಪ್ಪಿಕೊಳ್ಳುತ್ತಿರುವುದು ಶ್ರೀ ರಾಮನಿಗಾಗಿ ಎಂದು.
ಮತ್ತೊಂದು ವಿಶೇಷ ಗೊತ್ತೆ.. ಶ್ರೀರಾಮನ ಪರಮಭಕ್ತರಾದ ಕೇಶವ ಪರಾಶರನ್ ಬಿಜೆಪಿ ಅಥವಾ ಸಂಘ ಪರಿವಾರದ ಬೆಂಬಲಿಗರಾಗಿರಲೇ ಇಲ್ಲ. ಇಂದಿರಾಗಾAಧಿ ಎಂದರೆ ಕೇಶವ ಅವರಿಗೆ ಅಚ್ಚುಮೆಚ್ಚು. ೧೯೮೩ ರಿಂದ ರಾಜೀವ್ ಗಾಂಧಿ ಪ್ರಧಾನಿಯಾಗಿರುವವರೆಗೂ ಕೇಶವ ಪರಾಶರನ್ ಕೇಂದ್ರ ಸರ್ಕಾರದ ಆಡಿಟರ್ ಜನರಲ್ ಆಗಿ ಕಾರ್ಯನಿರ್ವಹಿಸಿದ್ದರು. ವಾಜಪೇಯಿ ಪ್ರಧಾನಿಯಾಗಿದ್ದ ಸಂದರ್ಭ ೨೦೦೩ ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದರೆ, ೨೦೧೧ ರಲ್ಲಿ ಮನಮೋಹನ್ ಸಿಂಗ್ ಪದ್ಮವಿಭೂಷಣ ಪ್ರಶಸ್ತಿ ನೀಡಿ ಕೇಶವ ಅವರನ್ನು ಗೌರವಿಸಿತ್ತು. ಕೇಶವ ಅವರು ಯುಪಿಎ ಸರ್ಕಾರದ ಅವಧಿಯಲ್ಲಿ ರಾಜ್ಯಸಭೆಯ ಸದಸ್ಯರಾದರು.
ವಕೀಲಿ ವೃತ್ತಿಯಲ್ಲಿ ಧರ್ಮ, ರಾಜಕೀಯದೊಂದಿಗೆ ರಾಜಿ ಮಾಡಿಕೊಳ್ಳದೇ, ಸಾಕಷ್ಟು ಕೊಡುಗೆ ನೀಡಿದ್ದರು. ಕೇಶವ ಪರಾಶರನ್ ಭಾರತದ ಕಾನೂನು ಪಂಡಿತರಲ್ಲಿ ಅಗ್ರಗಣ್ಯರಾಗಿ ಗುರುತಿಸಲ್ಪಡುತ್ತಾರೆ.
ಶಬರಿಮಲೆ, ರಾಮಸೇತು, ರಾಮಮಂದಿರದAತಹ ಐತಿಹಾಸಿಕ ವಿಚಾರಗಳಲ್ಲಿ ವಾದ ಮಂಡಿಸಿದ್ದೀರಿ. ಈಗ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದೀರಿ. ಕೋರ್ಟ್ನ ಅನುಭವ ಹೇಳಿ ಎಂದು ಇತ್ತೀಚಿಗೆ ಪತ್ರಕರ್ತರು ಕೇಳಿದಾಗ ೯೬ ವರ್ಷದ ಕೇಶವ ಪರಾಶರನ್ ಉತ್ತರಿಸಿದ್ದರು:- ಮನೆಯಲ್ಲಿ ಇದ್ದೇನೆ ಎಂದರೆ ವೃತ್ತಿ ಜೀವನದಿಂದ ನಿವೃತ್ತಿ ಎಂದೇನಲ್ಲ.. ಅಯೋಧ್ಯೆಯಲ್ಲಿ ಶ್ರೀರಾಮನ ಪರವಾಗಿ ವಾದ ಮಂಡಿಸಬೇಕು ಎಂಬುದು ಆ ರಘುರಾಮನ ಇಚ್ಚೆಯೇ ಆಗಿತ್ತು. ನಾನು ಯಾವಾಗ ಮನೆಯಿಂದ ಹೊರಬಂದು ಮತ್ತೆ ಕರಿಕೋಟ್ ಧರಿಸಿ ಕೋರ್ಟ್ನಲ್ಲಿ ವಾದಮಂಡಿಸುತ್ತೇನೆ ಎಂಬುದು ಕೂಡ ದೈವೇಚ್ಚೆಯೇ ಆಗಿರುತ್ತದೆ. ವಕೀಲನಾದವನಿಗೆ ಎಂದಿಗೂ ನಿವೃತ್ತಿಯ ಮಾತೇ ಇರುವುದಿಲ್ಲ. ಅಂದ ಹಾಗೇ, ಶ್ರೀರಾಮ ಮಂದಿರದ ಪರವಾಗಿ ಪ್ರಬಲವಾಗಿ ವಾದಮಂಡಿಸಿ ಅಂತಿಮವಾಗಿ ೫೦೦ ವರ್ಷಗಳ ನಂತರ ಅಯೋಧ್ಯೆಯಲ್ಲಿಯೇ ಶ್ರೀರಾಮನಿಗೆ ಮಂದಿರ ನಿರ್ಮಾಣವಾಗಬೇಕು ಎಂದು ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡುವಂತೆ ಆಯಿತಲ್ಲ.. ಕೋಟ್ಯಂತರ ರಾಮಭಕ್ತರ ಕನಸು ನನಸಾಗುವಲ್ಲಿ ಮಹತ್ವದ ಕೊಡುಗೆ ನೀಡಿದರಲ್ಲ.. ಈ ಮಹಾನುಭಾವ ವಕೀಲ ಕೇಶವ ಈ ಕೇಸ್ಗೆ ಪಡೆದಿರುವ ಸಂಭಾವನೆ ಎಷ್ಟಿರಬಹುದು ಗೊತ್ತೆ..
ಅವರ ಮಾತಲ್ಲೇ ಹೇಳುವುದಾದರೇ:- ಪ್ರಭುವಿನ ಪರವಾಗಿ ವಾದ ಮಂಡಿಸಲು ಹಣ ಪಡೆದರೆ ಉಂಟೇ... ಅವನ ಪರವಾಗಿ ನಾನೇ ವಾದ ಮಾಡಬೇಕೆಂಬುದು ಕೂಡ ರಾಮನಿಚ್ಚೆ.. ಅವನಿಚ್ಚೆಗೆ ಸಂಭಾವನೆ ನಿಗದಿಯುಂಟೇ... ನಯಾ ಪೈಸೆ ಕೂಡ ನನಗೆ ಬೇಡ.. ಎಲ್ಲವೂ ಪ್ರಭುವಿನ ಪಾದಕ್ಕೆ ಸಮರ್ಪಣೆ ಎಂದು ಸ್ಪಷ್ಟಪಡಿಸಿದ್ದರು.
ಇಂಥವರೇ ಅಲ್ಲವೇ ಶ್ರೀರಾಮನ ನಿಜ ಭಕ್ತರು.. ಇಂಥವರಿAದಲೇ ಅಲ್ಲವೇ ಶ್ರೀರಾಮಮಂದಿರದ ನಿರ್ಮಾಣದ ಕನಸು ನನಸಾಗಿದ್ದು.