ಚೆಯ್ಯAಡಾಣೆ, ಜ. ೩: ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಬಲಮುರಿ ಗ್ರಾಮದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಮಾಲು ಸಹಿತ ನಾಪೋಕ್ಲು ಪೊಲೀಸರು ಬಂಧಿಸಿದ್ದಾರೆ. ಬಲಮುರಿ ಗ್ರಾಮದ ನಿವಾಸಿ ಎಸ್.ಎ.ಇರ್ಫಾನ್ (೨೯) ಹೊದ್ದೂರು ವಾಟೆಕಾಡು ಗ್ರಾಮದ ನಿವಾಸಿ ಬಿ. ಎಂ. ಮುಜೀಬ್ ರಹ್ಮಾನ್ (೨೮)

ಅಕ್ರಮ ಗಾಂಜಾ ಮಾರಾಟ ಯತ್ನ : ಮೂವರ ಬಂಧನ

(ಮೊದಲ ಪುಟದಿಂದ) ಹಾಗೂ ಬಲಮುರಿ ಗ್ರಾಮದ ಕೆ.ಎಂ. ಅಮೀರ್ (೨೯) ಬಂಧಿತ ಆರೋಪಿ ಗಳಾಗಿದ್ದಾರೆ.

ಬಲಮುರಿ ಗ್ರಾಮದ ಸೇತುವೆ ಬಳಿ ಹೊಳೆಮುಡಿ ಮೈದಾನದ ಹತ್ತಿರ ಅಕ್ರಮವಾಗಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ೨೭೫ ಗ್ರಾಂ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಆಟೋರಿಕ್ಷಾ, ಒಂದು ಸ್ಕೂಟರ್ ಹಾಗೂ ಮೂರು ಮೊಬೈಲ್‌ಗಳನ್ನು ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು. -ಅಶ್ರಫ್