ಸಿದ್ದಾಪುರ, ಜ. ೩: ಕಾರ್ಮಿಕ ಮಹಿಳೆಯ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಮಹಿಳೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಮೀಪದ ಹೇರೂರು ಕಾಫಿ ತೋಟದಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ. ಸಿದ್ದಾಪುರ ಸಮೀಪದ ಘಟ್ಟದಳ ಸಮೀಪ ಇರುವ ಎ.ಸಿ ಬೋಪಣ್ಣ ಎಂಬವರ ಹೇರೂರು ಕಾಫಿ ತೋಟದ ಲೈನ್ಮನೆಯಲ್ಲಿ ವಾಸಮಾಡಿಕೊಂಡಿರುವ ಕಾರ್ಮಿಕ ಮಂಜು ಎಂಬವರ ಪತ್ನಿ ಪಲ್ಲವಿ (೨೮) ಎಂಬಾಕೆಯೆ ಕಾಡಾನೆ ದಾಳಿಗೆ ಸಿಲುಕಿ ಗಂಭೀರ ಗಾಯಗೊಂಡ ಮಹಿಳೆ.
ಘಟನೆಯ ವಿವರ : ಬುಧವಾರದಂದು ಬೆಳಿಗ್ಗೆ ೭.೪೫ಕ್ಕೆ ಕಾರ್ಮಿಕ ಮಹಿಳೆ ಪಲ್ಲವಿ ತನ್ನ ಪತಿ ಮಂಜು ಹಾಗೂ ಇತರ ನಾಲ್ಕು ಮಂದಿಯೊAದಿಗೆ ಕಾಫಿ ತೋಟದ ಲೈನ್ ಮನೆಯಿಂದ ಕಾಫಿ ತೋಟದೊಳಗಿನ ರಸ್ತೆಯ ಮೂಲಕ ಕಾಲ್ನಡಿಗೆಯಲ್ಲಿ ನಡೆದುಕೊಂಡು ತೋಟದ ಕೆಲಸಕ್ಕೆ ಬರುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಸಲಗವೊಂದು ಐದು ಮಂದಿಯ ಹಿಂದೆ ನಡೆದುಕೊಂಡು ಬರುತ್ತಿದ್ದ ಪಲ್ಲವಿ ಮೇಲೆ ದಾಳಿ ನಡೆಸಿದೆ. ಸೊಂಡಿಲಿನಿAದ ಗುದ್ದಿ ದೂಡಿ ಹಾಕಿ ಕಾಲಿಗೆ ತುಳಿದಿದೆ. ಈ ಸಂದರ್ಭ ಪಲ್ಲವಿ ಕಿರುಚಿಕೊಂಡಿದ್ದು ಇತರ ಕಾರ್ಮಿಕರು ಓಡಿ ಬಂದು ಆಕೆಯನ್ನು ಕೂಡಲೇ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಪಲ್ಲವಿಯ ಕಾಲಿನ ತೊಡೆಯ ಭಾಗಕ್ಕೆ ಹಾಗೂ ಬೆನ್ನಿಗೆ ಗಂಭೀರ ಗಾಯವಾಗಿದ್ದು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಕಾಡಾನೆ ದಾಳಿಗೆ ಸಿಲುಕಿ ಕಾರ್ಮಿಕ ಮಹಿಳೆ ಪಲ್ಲವಿ ಗಂಭೀರ ಗಾಯಗೊಂಡಿರುವ ವಿಚಾರ ತಿಳಿದು ಕೆ.ಪಿ.ಸಿ.ಸಿ ವಕ್ತಾರ ಮೇರಿಯಂಡ ಸಂಕೇತ್ ಪೂವಯ್ಯ ಸಿದ್ದಾಪುರ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಗಾಯಾಳುವಿನ ಯೋಗಕ್ಷೇಮ ವಿಚಾರಿಸಿದರು. ಅಲ್ಲದೇ ಶಾಸಕರಾದ ಎ.ಎಸ್ ಪೊನ್ನಣ್ಣರವರಿಗೆ ದೂರವಾಣಿ ಕರೆ ಮಾಡಿ ಘಟನೆಯ ಬಗ್ಗೆ ಮಾಹಿತಿ ನೀಡಿದರು.
ಆರೋಗ್ಯ ವಿಚಾರಿಸಿದ ಪೊನ್ನಣ್ಣ
ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಶಾಸಕ ಪೊನ್ನಣ್ಣ ಅವರು, ಮಹಿಳೆಯ ಆರೋಗ್ಯ ವಿಚಾರಿಸಿದರು. ವೈದ್ಯರಿಂದ ಮಹಿಳೆಯ ಆರೋಗ್ಯ ಸ್ಥಿತಿಯ ಕುರಿತು ಹಾಗೂ
(ಮೊದಲ ಪುಟದಿಂದ) ಗಾಯಾಳು ಪಲ್ಲವಿ ಪತಿಯಿಂದ ಘಟನೆಯ ಕುರಿತು ಮಾಹಿತಿ ಪಡೆದುಕೊಂಡು ಕುಟುಂಬಕ್ಕೆ ಸ್ಥೆöÊರ್ಯ ತುಂಬಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಥಮ ಚಿಕಿತ್ಸೆ ಬಳಿಕ ಉಸಿರಾಟ ಸಮಸ್ಯೆ ಉಂಟಾದ ಹಿನ್ನೆಲೆ ಜಿಲ್ಲಾಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಲಾಗಿದೆ. ಸದ್ಯಕ್ಕೆ ಆರೋಗ್ಯ ಸ್ಥಿತಿ ಸುಧಾರಿಸಿದೆ. ಹೆಚ್ಚಿನ ಚಿಕಿತ್ಸೆ ಬೇಕಾದಲ್ಲಿ ಎಲ್ಲಾ ವ್ಯವಸ್ಥೆ ಕೈಗೊಳ್ಳಲಾಗುವುದು. ತಜ್ಞರ ಸಲಹೆ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು. ದಾಳಿ ಮಾಡಿದ ಒಂಟಿಸಲಗ ಈ ಪ್ರದೇಶಕ್ಕೆ ಹೊಸದು ಎಂದು ಅರಣ್ಯ ಇಲಾಖೆ ಅಂದಾಜಿಸಿದೆ. ಈ ಹಿಂದಿನ ಸರಕಾರ ವನ್ಯಜೀವಿ ಹಾವಳಿ ತಡೆ ಯೋಜನೆ ಕಾರ್ಯಗತದಲ್ಲಿ ವಿಫಲವಾಗಿದೆ. ನಮ್ಮ ಸರಕಾರ ರೈಲ್ವೆ ಬ್ಯಾರಿಕೇಡ್ ನಿರ್ಮಾಣ, ಆನೆ ಓಡಿಸುವ ಕಾರ್ಯಾಚರಣೆ ಕೈಗೊಂಡ ಹಿನ್ನೆಲೆ ಕಳೆದ ನಾಲ್ಕು ತಿಂಗಳಿನಿAದ ಉಪಟಳ ಹಾಗೂ ದಾಳಿ ಪ್ರಮಾಣ ಕಡಿಮೆಯಾಗಿದೆ. ಇನ್ನಷ್ಟು ರೈಲ್ವೆ ಬ್ಯಾರಿಕೇಡ್, ಕಂದಕ ನಿರ್ಮಾಣವಾಗಲಿದೆ ಎಂದ ಅವರು, ಮುಂದೆ ಮತ್ತಷ್ಟು ಅನುದಾನವನ್ನು ವನ್ಯಜೀವಿ ಹಾವಳಿ ತಡೆಗೆ ಸರಕಾರ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗಾಯಾಳು ಮಹಿಳೆಗೆ ಉಚಿತ ಚಿಕಿತ್ಸೆಯೊಂದಿಗೆ ರೂ. ೬೦ ಸಾವಿರ ಪರಿಹಾರ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭ ಕೆಪಿಸಿಸಿ ವಕ್ತಾರ ಮೇರಿಯಂಡ ಸಂಕೇತ್ ಪೂವಯ್ಯ ಜಿಲ್ಲಾಸ್ಪತ್ರೆ ಶಸ್ತçಚಿಕಿತ್ಸಕ ಡಾ. ನಂಜುAಡಯ್ಯ, ವೀರಾಜಪೇಟೆ ವಲಯ ಅರಣ್ಯಾಧಿಕಾರಿ ಕಳ್ಳೀರ ದೇವಯ್ಯ ಹಾಜರಿದ್ದರು.