ಮಡಿಕೇರಿ, ಜ. ೩ : ಕೊಡಗು ಜಿಲ್ಲೆಯಲ್ಲಿ ವಿವಿಧ ಸಹಕಾರ ಸಂಘಗಳ ಕಾರ್ಯ ಚಟುವಟಿಕೆಗಳು ಹೆಚ್ಚಿನ ಮಹತ್ವವನ್ನು ಈ ಹಿಂದಿನಿAದಲೂ ಮುಂದುವರಿಸಿಕೊAಡು ಬಂದಿದ್ದವು. ಸಹಕಾರ ಕ್ಷೇತ್ರ ಜಿಲ್ಲೆಯಲ್ಲಿ ವಿಶೇಷ ಹೆಸರನ್ನೂ ಮಾಡಿದೆ. ಆದರೆ ಇದೀಗ ಪ್ರಸ್ತುತದ ಸಂದರ್ಭದಲ್ಲಿ ಈ ಹಿಂದಿನಿAದ ಅಸ್ತಿತ್ವದಲ್ಲಿದ್ದ ಕೆಲವು ಸಹಕಾರ ಸಂಘಗಳಲ್ಲಿ ಯಾವುದೇ ಕಾರ್ಯ ಚಟುವಟಿಕೆಗಳು ಇಲ್ಲದೆ ಇದರಿಂದ ಸದಸ್ಯರುಗಳಿಗೆ ಯಾವುದೇ ಪ್ರಯೋಜನವಿಲ್ಲ ಎಂಬAತಾಗಿದೆ. ಈ ಕಾರಣದಿಂದಾಗಿ ಜಿಲ್ಲೆಯಲ್ಲಿ ಸುಮಾರು ೧೫ ಸಹಕಾರ ಸಂಘಗಳನ್ನು ಸಮಾಪನೆಗೊಳಿಸುವ ಚಿಂತನೆ ನಡೆದಿರುವುದು ತಿಳಿದುಬಂದಿದೆ.
ಈ ಸಹಕಾರ ಸಂಘಗಳು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ೧೯೫೯ ಹಾಗೂ ನಿಯಮಗಳು ೧೯೬೦ ಮತ್ತು ಸಂಘಗಳ ಬೈಲಾ ರೀತಿ ಕಾರ್ಯ ಚಟುವಟಿಕೆಗಳನ್ನು ನಡೆಸದೆ ಸ್ಥಗಿತಗೊಂಡಿವೆ. ಪ್ರಸ್ತುತ ಈ ಸಂಘಗಳ ಅಸ್ತಿತ್ವದಿಂದ ಸದಸ್ಯರುಗಳಿಗೆ ಯಾವುದೇ ಸೇವೆ ದೊರೆಯದಿರುವುದು ಕಂಡುಬAದಿರುವುದರಿAದ ಈ ಸಂಘಗಳನ್ನು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ೧೯೫೯ ಕಲಂ ೭೨ರ ಅನ್ವಯ ಸಮಾಪನೆಗೊಳಿಸಲು ಕ್ರಮ ಕೈಗೊಳ್ಳಲು ಮುಂದಾಗಲಾಗಿದೆ.
ಈ ಸಂಬAಧ ಸಂಘದ ಸದಸ್ಯರುಗಳಿಂದಾಗಲಿ, ಸಾರ್ವಜನಿಕರಿಂದಾಗಲಿ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ೧೫ ದಿವಸದೊಳಗೆ ಲಿಖಿತ ಮನವಿಯನ್ನು ಸಲ್ಲಿಸಬಹುದಾಗಿದೆ. ಲಿಖಿತ ಮನವಿಯನ್ನು ಸಂಬAಧಪಟ್ಟ ಪೂರಕ ದಾಖಲೆಗಳೊಂದಿಗೆ ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸಲು ಸೂಚಿಸಲಾಗಿದೆ ಎಂದು ಮಡಿಕೇರಿಯ ಸಹಕಾರ ಸಂಘಗಳ ಉಪನಿಬಂಧಕರಾದ ಕೃಷ್ಣಪ್ರಸಾದ್ ಅವರು ಪ್ರಕಟಣೆಯ ಮೂಲಕ ಮಾಹಿತಿ ನೀಡಿದ್ದಾರೆ.
ಯಾವ್ಯಾವ ಸಂಘಗಳು...?
ಮಡಿಕೇರಿ ಉಪವಿಭಾಗ ಕಾರ್ಯವ್ಯಾಪ್ತಿಯಲ್ಲಿರುವ ಕೊಡಗು ಜಿಲ್ಲಾ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘ ಮಡಿಕೇರಿ, ಬೆಟ್ಟಗೇರಿಯ ಅರುವತ್ತೊಕ್ಕಲು ಸಹಕಾರ ದವಸ ಭಂಡಾರ, ಪಾರಾಣೆ ಕೊಣಂಜಗೇರಿ ಸಹಕಾರ ದವಸ ಭಂಡಾರ, ಕೊಡಗು ಜಿಲ್ಲಾ ಹಂದಿ ಸಾಕಾಣಿಕೆದಾರರ ಸಹಕಾರ ಸಂಘ ಮಡಿಕೇರಿ, ಅಂಕನಹಳ್ಳಿ ಹಾಲು
(ಮೊದಲ ಪುಟದಿಂದ) ಉತ್ಪಾದಕರ ಸಹಕಾರ ಸಂಘ, ಹಾರಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ, ಹಾರಂಗಿ ಶ್ರೀ ಕಾವೇರಿ ಮೀನುಗಾರರ ಸಹಕಾರ ಸಂಘ, ಗುಡ್ಡೆಹೊಸೂರು ಬಿದಿರು ಕೈಗಾರಿಕೆ ಸಹಕಾರ ಸಂಘ, ಒಂಟಿಯAಗಡಿ ಹಚ್ಚಿನಾಡು ಸಹಕಾರ ದವಸ ಭಂಡಾರ, ಮೈತಾಡಿ ಸಹಕಾರ ದಸವ ಭಂಡಾರ, ವೀರಾಜಪೇಟೆ ಅಲ್ಪಸಂಖ್ಯಾತರ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘ, ಪೊನ್ನಂಪೇಟೆಯ ಚೆಪ್ಪುಡೀರ ಫ್ಯಾಮಿಲಿ ಉತ್ತಮ ಜೀವನ ಸಹಕಾರ ಸಂಘ ಹಾಗೂ ವೀರಾಜಪೇಟೆಯ ಹವ್ಯಕ ಬ್ರಾಹ್ಮಣರ ಉತ್ತಮ ಜೀವನ ಸಹಕಾರ ಸಂಘಗಳು ಸಮಾಪನದ ಪಟ್ಟಿಯಲ್ಲಿ ಸೇರಿವೆ.