ವೀರಾಜಪೇಟೆ, ಜ.೨: ಇತಿಹಾಸ ಪ್ರಸಿದ್ಧ ವೀರಾಜಪೇಟೆಯ ಸಿದ್ದಾಪುರ ರಸ್ತೆಯಲ್ಲಿನ ಮಲೆತಿರಿಕೆ ಬೆಟ್ಟದಲ್ಲಿರುವ ಅಯ್ಯಪ್ಪ ದೇವಾಲಯದ ಉತ್ಸವ ಮೂರ್ತಿಯ ಮೆರವಣಿಗೆ ಸೋಮವಾರ ರಾತ್ರಿ ಅತ್ಯಂತ ವಿಜೃಂಭಣೆಯಿAದ, ಸಾವಿ ರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.
ವ್ಯವಸ್ಥಿತವಾಗಿ ಐದು ದಶಕಗಳಿಂ ದಲೂ ಇಲ್ಲಿನ ಮಲೆತಿರಿಕೆ ಬೆಟ್ಟದ ಅಯ್ಯಪ್ಪ ಸೇವಾ ಸಮಿತಿಯಿಂದ ಆಚರಿಸಿಕೊಂಡು ಬರುತ್ತಿರುವ ಅಯ್ಯಪ್ಪನ ವಾರ್ಷಿಕ ಉತ್ಸವವು ತಾ.೨೬ ರಿಂದ ಆರಂಭಗೊAಡು ಜ.೧ ರಂದು ಪ್ರಾಥ:ಕಾಲ ೫.೩೦ಕ್ಕೆ ಗಣಪತಿ ಹೋಮ, ಲಕ್ಷಿ÷್ಮÃ ಪೂಜೆ, ಸರಸ್ವತಿ ಪೂಜೆ, ತುಲಭಾರ, ಲಕ್ಷಾರ್ಚನೆ, ಮಾಹಾಪೂಜೆ ನಡೆದು ರಾತ್ರಿ ೧೨-೩೦ಗಂಟೆಗೆ ಅಯ್ಯಪ್ಪ ದೇವಾಲಯದಲ್ಲಿ ಸುಬ್ರಹ್ಮಣ್ಯನಿಗೆ ವಿದ್ಯುಕ್ತವಾಗಿ ಪೂಜೆ ಸಲ್ಲಿಸುವುದರೊಂದಿಗೆ ಉತ್ಸವ ತೆರೆ ಎಳೆಯಲಾಯಿತು.
ಸಂಜೆ ಬೃಹತ್ ಶೋಭಾಯಾತ್ರೆ ಯಲ್ಲಿ ದೀಪಾರತಿ, ವಿದ್ಯುತ್ ಅಲಂಕೃತ ಮಂಟಪದಲ್ಲಿ ದೇವರ ಕಥಾ ಸಾರಾಂಶವನ್ನು ಸಾರುವ ಚಲನವಲ ನಗಳಿಂದ ಮಂಟಪ ಆಕರ್ಷಿಸಿತು. ಕೇರಳ ಚಂಡೆ, ಮಂಗಳೂರಿನ ಚಿಲಿ-ಪಿಲಿ ಬೊಂಬೆ, ಮಾಲಧಾರಿಗಳಿಂದ ವೀರಾಜಪೇಟೆ, ಜ.೨: ಇತಿಹಾಸ ಪ್ರಸಿದ್ಧ ವೀರಾಜಪೇಟೆಯ ಸಿದ್ದಾಪುರ ರಸ್ತೆಯಲ್ಲಿನ ಮಲೆತಿರಿಕೆ ಬೆಟ್ಟದಲ್ಲಿರುವ ಅಯ್ಯಪ್ಪ ದೇವಾಲಯದ ಉತ್ಸವ ಮೂರ್ತಿಯ ಮೆರವಣಿಗೆ ಸೋಮವಾರ ರಾತ್ರಿ ಅತ್ಯಂತ ವಿಜೃಂಭಣೆಯಿAದ, ಸಾವಿ ರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.
ವ್ಯವಸ್ಥಿತವಾಗಿ ಐದು ದಶಕಗಳಿಂ ದಲೂ ಇಲ್ಲಿನ ಮಲೆತಿರಿಕೆ ಬೆಟ್ಟದ ಅಯ್ಯಪ್ಪ ಸೇವಾ ಸಮಿತಿಯಿಂದ ಆಚರಿಸಿಕೊಂಡು ಬರುತ್ತಿರುವ ಅಯ್ಯಪ್ಪನ ವಾರ್ಷಿಕ ಉತ್ಸವವು ತಾ.೨೬ ರಿಂದ ಆರಂಭಗೊAಡು ಜ.೧ ರಂದು ಪ್ರಾಥ:ಕಾಲ ೫.೩೦ಕ್ಕೆ ಗಣಪತಿ ಹೋಮ, ಲಕ್ಷಿ÷್ಮÃ ಪೂಜೆ, ಸರಸ್ವತಿ ಪೂಜೆ, ತುಲಭಾರ, ಲಕ್ಷಾರ್ಚನೆ, ಮಾಹಾಪೂಜೆ ನಡೆದು ರಾತ್ರಿ ೧೨-೩೦ಗಂಟೆಗೆ ಅಯ್ಯಪ್ಪ ದೇವಾಲಯದಲ್ಲಿ ಸುಬ್ರಹ್ಮಣ್ಯನಿಗೆ ವಿದ್ಯುಕ್ತವಾಗಿ ಪೂಜೆ ಸಲ್ಲಿಸುವುದರೊಂದಿಗೆ ಉತ್ಸವ ತೆರೆ ಎಳೆಯಲಾಯಿತು.
ಸಂಜೆ ಬೃಹತ್ ಶೋಭಾಯಾತ್ರೆ ಯಲ್ಲಿ ದೀಪಾರತಿ, ವಿದ್ಯುತ್ ಅಲಂಕೃತ ಮಂಟಪದಲ್ಲಿ ದೇವರ ಕಥಾ ಸಾರಾಂಶವನ್ನು ಸಾರುವ ಚಲನವಲ ನಗಳಿಂದ ಮಂಟಪ ಆಕರ್ಷಿಸಿತು. ಕೇರಳ ಚಂಡೆ, ಮಂಗಳೂರಿನ ಚಿಲಿ-ಪಿಲಿ ಬೊಂಬೆ, ಮಾಲಧಾರಿಗಳಿಂದ ಪೂಜೆ ಸಲ್ಲಿಸುತ್ತಾ ಅಯ್ಯಪ್ಪನ ನಾಮಸ್ಮರಣೆ ಮಾಡುತ್ತಾ ಸಾಗುತ್ತಿದ್ದಂತೆ ಅಯ್ಯಪ್ಪ ಉತ್ಸವದ ಮೆರವಣಿಗೆಯನ್ನು ವೀಕ್ಷಿಸಲು ಮುಖ್ಯ ರಸ್ತೆಗಳ ಇಕ್ಕೆಲಗ ಳಲ್ಲಿ ಜನರು ಕಿಕ್ಕಿರಿದು ನೆರೆದಿದ್ದರು.
ಮುತ್ತಪ್ಪ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಅದೇ ಮಾರ್ಗವಾಗಿ ದೇವಾಲಯಕ್ಕೆ ಹಿಂತಿರುಗಿ ಸುಬ್ರಹ್ಮಣ್ಯ ದೇವರಿಗೆ ಪೂಜೆ ಸಲ್ಲಿಸುವುದರ ಮುಖಾಂತರ ಉತ್ಸವಕ್ಕೆ ತೆರೆ ಎಳೆಯಲಾಯಿತು.
ವೀರಾಜಪೇಟೆ ಡಿವೈಎಸ್ಪಿ ಮೋಹನ್ ಕುಮಾರ್ ಮಾರ್ಗದರ್ಶನ ದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಶಿವರುದ್ರ ಅವರ ನೇತೃತ್ವದಲ್ಲಿ ಸಬ್ಇನ್ಸ್ಪೆಕ್ಟರ್ ರವೀಂದ್ರ ಹಾಗೂ ಪೊಲೀಸ್ ಸಿಬ್ಬಂದಿಗಳು ಬಂದೋಬಸ್ತ್ನಲ್ಲಿ ಭಾಗವಹಿಸಿದ್ದರು.ವೀರಾಜಪೇಟೆ, ಜ. ೨: ಪಟ್ಟಣದ ಮಲೆತಿರಿಕೆ ಬೆಟ್ಟದಲ್ಲಿನ ಅಯ್ಯಪ್ಪ ದೇವಾಲಯದ ವಾರ್ಷಿಕ ಉತ್ಸವದ ಅಂಗವಾಗಿ ವಿವಿಧ ಪೂಜೆ ಪುನಸ್ಕಾರಗಳು ಸೋಮವಾರ ಶ್ರದ್ಧಾಭಕ್ತಿಯಿಂದ ನಡೆಯಿತು.
ಉತ್ಸವದ ಕೊನೆಯ ದಿನವಾದ ಸೋಮವಾರ ಬೆಳಗಿನಿಂದಲೇ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ದೇವಾಲಯದಲ್ಲಿ ಕೈಗೊಳ್ಳಲಾ ಯಿತು. ಮುಂಜಾನೆ ೫:೩೦ಕ್ಕೆ ದೇವಾಲಯದಲ್ಲಿ ಗಣಪತಿ ಹೋಮ ನಡೆಯಿತು. ಬಳಿಕ ದೇವಾಲಯದಲ್ಲಿ ತುಲಾಭಾರ, ಲಕ್ಷಾರ್ಚನೆಯನ್ನು ನಡೆಸಲಾಯಿತು. ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದ ಅಯ್ಯಪ್ಪ ವೃತಧಾರಿಗಳು ಪುಷ್ಪಾರ್ಚನೆಯೊಂದಿಗೆ ಭಜನೆಯನ್ನು ಕೈಗೊಂಡರು. ಮಹಾಪೂಜೆಯ ಬಳಿಕ ಭಕ್ತಾಧಿಗಳಿಗೆ ಪ್ರಸಾದವನ್ನು ವಿತರಿಸಲಾಯಿತು.
ದೇವಾಲಯದ ವಾರ್ಷಿಕ ಉತ್ಸವದ ಅಂಗವಾಗಿ ಡಿ.೨೭ ರಿಂದಲೇ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು. ಉತ್ಸವದ ಸಂದರ್ಭ ದೇವಾಲಯದ ಆಡಳಿತ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದಿಂದ ಸಾಕಷ್ಟು ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿ ದೇವರ ಕೃಪೆಗೆ ಪಾತ್ರರಾದರು. ಇದೇ ಸಂದರ್ಭ ನೆರೆದ ಸಾವಿರಾರು ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು. ವೀರಾಜಪೇಟೆಯ ಶಾಸಕ ಎ.ಎಸ್. ಪೊನ್ನಣ್ಣ ಅವರು ದೇವಾಲಯಕ್ಕೆ ಭೇಟಿ ನೀಡಿದರು.