ಮಡಿಕೇರಿ, ಜ. ೨: ಕುಟ್ಟ ಗ್ರಾಮದ ಕೃಷಿ ಭೂಮಿಯಲ್ಲಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ತೇಗದ ಮರಗಳನ್ನು ಕಡಿದ ಪ್ರಕರಣದಲ್ಲಷ್ಟೇ ಹಗರಣ ನಡೆದಿಲ್ಲ. ಈ ಬಗ್ಗೆ ತನಿಖೆ ನಡೆಸಿದ ಸಂದರ್ಭ ಅರಣ್ಯ ಇಲಾಖೆಯ ನಾಲ್ವರು ಸದಸ್ಯರ ತಂಡ, ವಿಭಾಗದ ಮೂರು ವಲಯಗಳಲ್ಲಿ ೧೪ ಬಾರಿ ಲೋಪವಾಗಿರುವುದನ್ನು ಪತ್ತೆ ಹಚ್ಚಿ ಅರಣ್ಯ ಇಲಾಖೆಗೆ ವರದಿ ಸಲ್ಲಿಸಿದೆ.

ಈ ಹಿಂದೆ ವೀರಾಜಪೇಟೆ ವ್ಯಾಪ್ತಿಯಲ್ಲಿ ನೂರು ವರ್ಷದ ಹಳೆಯ ಮರಗಳು ಸೇರಿ ೬೬ ತೇಗದ ಮರಗಳನ್ನು ಅಕ್ರಮವಾಗಿ ಕಡಿಯಲಾಗಿತ್ತು. ಈ ಪ್ರಕರಣದಲ್ಲಿ, ಕೆಲವು ಅಧಿಕಾರಿಗಳು ಭಾಗಿಯಾಗಿ ರುವುದು ಮೇಲ್ನೋಟಕ್ಕೆ ದೃಢಪ ಟ್ಟಿದ್ದರಿಂದಾಗಿ, ಪ್ರಕರಣ ನಡೆದಾಗ ಅಂದಿನ ವೀರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾ ರಿಯಾಗಿದ್ದ (ಡಿಸಿಎಫ್) ವೈ. ಚಕ್ರಪಾಣಿ ಅವರನ್ನು ರಾಜ್ಯ ಸರ್ಕಾರ ಅಮಾನತುಗೊಳಿಸಿತ್ತು.

ಈ ಪ್ರಕರಣದ ತನಿಖೆಗಾಗಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ದಳದ ಮುಖ್ಯಸ್ಥ) ಕೆ.ಆರ್.ಸಿಂಗ್, ಐಎಫ್‌ಎಸ್ ಅಧಿಕಾರಿ ಸೌರಬ್‌ಕುಮಾರ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿ ವೀರಾಜಪೇಟೆ ಡಿಸಿಎಫ್ ೨೦೨೦ರ ಏಪ್ರಿಲ್‌ನಿಂದ ೨೦೨೩ರ ಏಪ್ರಿಲ್‌ವರೆಗೆ ಮರ ಕಡಿಯಲು ನೀಡಿದ್ದ ಆದೇಶಗಳ ಸಮಗ್ರ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿತ್ತು.

ಕಡತಗಳ ಪರಿಶೀಲನೆ

ತಂಡವು, ತಿತಿಮತಿ, ವೀರಾಜಪೇಟೆ ಹಾಗೂ ಪೊನ್ನಂಪೇಟೆ ವಿಭಾಗದಲ್ಲಿ ನೀಡಲಾದ ಮರ ಕಡಿತಲೆ ಆದೇಶಗಳಿಗೆ ಸಂಬAಧಿಸಿದ ೭೧ ಕಡತಗಳನ್ನು ಪರಿಶೀಲಿಸಿದ್ದು, ಆದೇಶ ನೀಡುವಲ್ಲಿ ಆಗಿರುವ ಲೋಪಗಳು ಮತ್ತು ನಿಯಮ ಉಲ್ಲಂಘನೆಗಳನ್ನು ತನಿಖಾ ತಂಡ ಪತ್ತೆ ಹಚ್ಚಿದೆ. ಒಂದು ಪ್ರಕರಣದ ಹಿಂದೆ ಬಿದ್ದ ತನಿಖಾ ತಂಡಕ್ಕೆ ಆದೇಶ ಉಲ್ಲಂಘನೆ, ಅಕ್ರಮಗಳ ಸರಮಾಲೆಯೇ ದೊರೆತಿದೆ.

ವಿಭಾಗದಲ್ಲಿನ ಮರಗಳ ರಕ್ಷಣೆ ಆಯಾ ಡಿಸಿಎಫ್ ಜವಾ ಬ್ದಾರಿಯಾಗಿರುತ್ತದೆ. ಈ ನಿಟ್ಟಿನಲ್ಲಿ ಅವರಿಗೆ ಅಧಿಕಾರದ ಬಲವೂ ಇರುತ್ತದೆ. ನಿಯಮದ ಪ್ರಕಾರ, ಸಾರ್ವಜನಿಕರು ತಮ್ಮ ಜಾಗ ಅಥವಾ ಜಮೀನಿನಲ್ಲಿ ಬೆಳೆದಿರುವ ಮರ ಕಡಿಯುವ ಮುನ್ನ ಡಿಸಿಎಫ್ ಬಳಿ ಅನುಮತಿ ಪಡೆಯ ಬೇಕಾಗುತ್ತದೆ. ಕರ್ನಾಟಕ ಅರಣ್ಯ ನಿಯಮದ ಪ್ರಕಾರ, ಗುತ್ತಿಗೆ ಪಡೆದ ಭೂಮಿಯಲ್ಲಿ ಬೆಳೆದ ಎಲ್ಲಾ ಮರಗಳನ್ನು ಮತ್ತು ಸಾಗುವಳಿಗೆ ನೀಡಿದ ಭೂಮಿಯಲ್ಲಿರುವ ಎಲ್ಲಾ ಮರಗಳು ಸರ್ಕಾರಿ ಆಸ್ತಿ ಎಂದು ಘೋಷಿಸಲ್ಪಟ್ಟಿರುತ್ತದೆ. ಆದರೆ, ಡಿಸಿಎಫ್ ನೀಡಿದ ಕನಿಷ್ಟ ೯ ಆದೇಶಗಳಲ್ಲಿ ಅನುಮತಿಗಿಂತಲೂ ಹೆಚ್ಚಿನ ತೇಗ, ರೋಸ್‌ವುಡ್ ಮೊದಲಾದ ಮರಗಳನ್ನು ಕಡಿದಿರುವುದನ್ನು ಗುರುತಿಸಲಾಗಿದೆ.

ಉದಾಹರಣೆಗೆ, ತಿತಿಮತಿ ವಲಯದ ಗಂಗಮ್ಮ ಎನ್ನುವವರು ೫ ರೋಸ್‌ವುಡ್ (ಬೀಟೆ), ೮ ಇತರ ಮರಗಳನ್ನು ಕಡಿಯಲು ಅನುಮತಿ ಕೇಳಿದ್ದರು. ಆದರೆ, ಡಿಸಿಎಫ್ ೫೫ ರೋಸ್‌ವುಡ್ ಹಾಗೂ ೬೫ ಇತರ ಮರಗಳನ್ನು ಕಡಿಯಲು ಆದೇಶ ನೀಡಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ, ಮನುಸೋಮಯ್ಯ ಅವರು ೪೦ ತೇಗದ ಮರಗಳನ್ನು ಕಡಿಯಲು ಅನುಮತಿ ಕೇಳಿದ್ದರೆ, ಡಿಸಿಎಫ್ ೫೫ ಮರಗಳನ್ನು ಕತ್ತರಿಸಲು ಆದೇಶಿಸಿರುವುದನ್ನು ಗುರುತಿಸ ಲಾಗಿದೆ. ಅಚ್ಚರಿಯೆಂದರೆ, ಡಿಸಿಎಫ್ ಕಂದಾಯ ಇಲಾಖೆ ಆದೇಶ ಧಿಕ್ಕರಿಸಿರುವುದೂ ಕಂಡುಬAದಿದೆ. ಆ ೪೦ ತೇಗದ ಮರಗಳೂ ಮನುಸೋಮಯ್ಯ ಅವರಿಗೆ ಸೇರಿದ್ದಲ್ಲ ಎಂದು ಕಂದಾಯ ಇಲಾಖೆ ಗಮನಕ್ಕೆ ತಂದಿತ್ತು. ಆದರೆ, ಈ ವಿಷಯವನ್ನು ಡಿಸಿಎಫ್ ಅನುಮತಿ ಪತ್ರದಲ್ಲಿ ದಾಖಲಿಸದೇ ಮರೆಮಾಚಿದ್ದರು ಎಂಬ ಸಂಗತಿಯೂ ತನಿಖೆಯಿಂದ ಹೊರಬಿದ್ದಿದೆ.

ಇತರ ಎರಡು ಪ್ರಕರಣಗಳಲ್ಲಿ, ಸಾಗುವಳಿ ಪತ್ರವಿಲ್ಲದ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದ ಇಬ್ಬರು, ಅಲ್ಲಿದ್ದ ಮರಗಳನ್ನು ಕಡಿಯಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನೂ ಡಿಸಿಎಫ್ ಪುರಸ್ಕರಿಸಿರುವುದು ಬೆಳಕಿಗೆ ಬಂದಿದೆ. ಅಧಿಕಾರವೇ ಇಲ್ಲದವರಿಗೂ ಅವಕಾಶ ಕೊಟ್ಟಿರುವುದು ಕಂಡುಬAದಿದೆ. ಕೆಲವು ಪ್ರಕರಣಗಳಲ್ಲಿ ಜಮೀನು ಅಥವಾ ಜಾಗ ಹಾಗೂ ಮರಗಳ ಮಾಲೀಕತ್ವವನ್ನು ಖಚಿತ ಪಡಿಸಿಕೊಳ್ಳಲು ಕಂದಾಯ ಇಲಾಖೆಯ ದಾಖಲೆಗಳನ್ನು ಪರಿಶೀಲಿಸದೆ ಮತ್ತು ಸಂಬAಧಿಸಿದ ಅಧಿಕಾರಿಗಳ ಅಭಿಪ್ರಾಯವನ್ನೂ ಕೇಳದೇ ಮರಗಳನ್ನು ಕಡಿಯಲು ಆದೇಶ ನೀಡಿರುವುದು ಬಯಲಾಗಿದೆ.

ಇತರ ಪ್ರಕರಣಗಳಲ್ಲಿ, ಕೆಳಹಂತದ ಅಧಿಕಾರಿಗಳಿಂದ ಅನುಮತಿ ಪಡೆದುಕೊಂಡಿರುವ ಬಗ್ಗೆ ದಾಖಲೆಗಳು ದೊರೆತಿರುವುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹೊಸದಾಗಿ ಸಲ್ಲಿಕೆಯಾದ ಅರ್ಜಿಗಳಿಗೆ ಸಂಬAಧಿಸಿದAತೆ ಹೊಸದಾಗಿ ಅಭಿಪ್ರಾಯ ಪಡೆಯುವ ಬದಲಿಗೆ, ೧೦ ವರ್ಷಗಳ ಹಿಂದಿನ ಅಭಿಪ್ರಾಯವನ್ನು ಪರಿಗಣಿಸುವ ಕೆಲಸ ನಡೆದಿರುವುದು ಪತ್ತೆಯಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಅಧಿಕಾರಿಯೊಬ್ಬರು, ‘ಹೀಗೆ ಕಡಿಯಲಾದ ತೇಗ, ರೋಸ್‌ವುಡ್ ಹಾಗೂ ಇತರ ಮರಗಳ ಒಟ್ಟು ಮೌಲ್ಯ ರೂ. ೧೦೦ ಕೋಟಿಯನ್ನೂ ಮೀರಿದ್ದಾಗಿದೆ ಎಂದು ಅಂದಾಜಿಸಲಾಗಿದೆ. ಹಲವು ದಾಖಲೆಗಳನ್ನು ಪರಿಶೀಲಿಸಿದಾಗ, ಎಷ್ಟು ಮರಗಳನ್ನು ಕಡಿಯಲಾಗಿದೆ ಎಂಬ ನಿಖರ ಮಾಹಿತಿಯೇ ಇಲ್ಲದಿರುವುದನ್ನೂ ಗುರುತಿಸಲಾಗಿದೆ. ಪ್ರಕರಣದಲ್ಲಿ ಇನ್ನೂ ಹೆಚ್ಚಿನ ಸೂಕ್ಷö್ಮ ವಿಚಾರಗಳನ್ನು ತಿಳಿಯಲು ಕ್ರಿಮಿನಲ್ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕಾದ ಅಗತ್ಯವಿದೆ ಎನ್ನುತ್ತಾರೆ.

‘ಆ ವರದಿಯನ್ನು ಪರಿ ಶೀಲಿಸಲಾಗುವುದು. ನಿಯಮ ಉಲ್ಲಂಘನೆ ಆಗಿರುವುದು ಕಂಡುಬAದಿದ್ದರೆ ಸೂಕ್ತ ಕ್ರಮ ಜರುಗಿಸಲಾಗುವುದು' ಎಂದು ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಪ್ರತಿಕ್ರಿಯಿಸಿದರು. ನಿಯಮ ಉಲ್ಲಂಘನೆ ಆಗಿರುವ ಬಗ್ಗೆ ಚಕ್ರಪಾಣಿ ಪ್ರತಿಕ್ರಿಯಿಸಲಿಲ್ಲ.