ಮೂರ್ನಾಡು, ಜ. ೨: ಇಲ್ಲಿಗೆ ಸಮೀಪದ ಮರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟೆಮಾಡುವಿನಲ್ಲಿ ನವೀಕರಣಗೊಂಡಿರುವ ಶ್ರೀ ಮಹಾ ಮೃತ್ಯುಂಜಯ ಮಹದೇಶ್ವರ ಕ್ಷೇತ್ರದಲ್ಲಿ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮ ಕಲಶೋತ್ಸವ ವಿವಿಧ ವೈದಿಕ ಕೈಂಕರ್ಯಗಳೊAದಿಗೆ ಸಹಸ್ರಾರು ಭಕ್ತಾದಿಗಳ ಸಮಕ್ಷಮ ಶ್ರದ್ಧಾ ಭಕ್ತಿಯಿಂದ ಸಮಾಪನಗೊಂಡಿತು.
ಕಳೆದ ಡಿ.೨೩ರಿಂದ ವಿವಿಧ ಪೂಜಾ ಕಾರ್ಯಗಳೊಂದಿಗೆ ಆರಂಭಗೊAಡು ತಾ.೨೯ರಂದು ಅದ್ದೂರಿಯಾಗಿ ಸಮಾಪ್ತಿಗೊಂಡಿತು. ಅಂದು ಬೆಳಿಗ್ಗೆ ಮಹಾಗಣಪತಿ ಹೋಮ, ಉಷಃ ಪೂಜೆ, ಧ್ವಜಕ್ಕೆ ಪ್ರಾಯಶ್ಚಿತ್ತ ನಾಂದಿ ಮುಖ ಪುಣ್ಯಾಹ, ವಾಹನವನ್ನು ಕರ್ಕರೀ ಸಮೇತ ಒಳಗೆ ಕರೆದುಕೊಂಡು ಹೋಗಿ ಆವಾಹನೆ, ಧ್ವಜದ ಮೇಲೆ ಪರಾವಾಹನ, ಮೂಲಾವಾಹನ, ವಾಹನ ಪ್ರತಿಷ್ಠೆ, ವಾಹನ ಕಲಶಾಭಿಷೇಕ, ಜೀವಾವಾಹನ, ಸ್ಥೂಲಾವಾಹನ, ಪಾಯಸ ಪೂಜೆ, ಧ್ವಜ ಪ್ರತಿಷ್ಠೆ, ಪೀಠ ಪ್ರತಿಷ್ಠೆ,ಕರ್ಕರೀ ಪರಿಶೇಕ, ಕುಂಭೇಶ ಕಲಶಾಭಿಷೇಕ, ಇಂದ್ರಾದಿ ದಿಕ್ಪಾಲ ಕಲಶಾಭಿಷೇಕ, ನಿವೇದ್ಯ ಪೂಜೆ, ಪರಿಕಲಶಾಭಿಷೇಕದೊಂದಿಗೆ ಮಹಾದೇವ ದೇವರಿಗೆ ಬ್ರಹ್ಮ ಕಲಶಾಭಿಷೇಕ ನೆರವೇರಿತು. ಬಳಿಕ ಮಹಾಪೂಜೆ, ಅವಸ್ರಾವ ಪ್ರೋಕ್ಷಣೆ, ಪ್ರಸಾದ ವಿತರಣೆ, ವೈದಿಕ ಮಂತ್ರಾಕ್ಷತೆ ನೆರವೇರಿತು. ರಾತ್ರಿ ಮಹಾಪೂಜೆ, ದೇವರ ಬಲಿಹೊರಟು, ಶ್ರೀಭೂತ ಬಲಿ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಧ್ವಜ ಅವರೋಹಣ, ಪ್ರಸಾದ ವಿತರಣೆ ನಡೆಯಿತು. ಬ್ರಹ್ಮಶ್ರೀ ಕೆಮ್ಮಿಂಜೆ ಲಕ್ಷಿö್ಮÃಶ ತಂತ್ರಿ ಹಾಗೂ ಬ್ರಹ್ಮಶ್ರೀ ಇರುವೈಲು ಕೃಷ್ಣದಾಸ ತಂತ್ರಿಗಳ ಮಾರ್ಗದರ್ಶನದಲ್ಲಿ ಅರ್ಚಕರು ಪೂಜಾದಿ ಕಾರ್ಯಗಳನ್ನು ನೆರವೇರಿಸಿದರು.
ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರಿಗೆ ಮಧ್ಯಾಹ್ನ ಹಾಗೂ ರಾತ್ರಿ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ದೇವಾಲಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕಟ್ಟೆಮನೆ ಜನಾರ್ದನ, ಕಾರ್ಯದರ್ಶಿ ಕಳ್ಳೀರ ಗಣಪತಿ, ಪದಾಧಿಕಾರಿಗಳಾದ ತೋರೇರ ಕಾಶಿ ಕಾರ್ಯಪ್ಪ, ಚೊಕ್ಕಂಡ ಕಟ್ಟಿ ಪಳಂಗಪ್ಪ, ಪಾರೆ ಬೋಪಯ್ಯ ಹಾಗೂ ಸದಸ್ಯರುಗಳು ದೇವತಾ ಕಾರ್ಯಗಳಲ್ಲಿ ತೊಡಗಿಸಿ ಕೊಂಡಿದ್ದರು.
-ಟಿ.ಸಿ.ನಾಗರಾಜು