ಮಡಿಕೇರಿ, ಜ. ೧: ಉತ್ತರ ಕರ್ನಾಟಕದ ಶಿರಸಿಯಲ್ಲಿ ನಡೆದ ರಾಜ್ಯಮಟ್ಟದ ವಕೀಲರ ಮೇಳದಲ್ಲಿ ಮಡಿಕೇರಿ ವಕೀಲರ ಸಂಘದ ತಂಡ ಬಹುಮಾನ ಗಳಿಸುವದರೊಂದಿಗೆ ಉತ್ತಮ ಶಿಸ್ತಿನ ತಂಡವೆAಬ ಪ್ರಶಂಸೆಗೆ ಪಾತ್ರವಾಗಿದೆ.

ಶಿರಸಿಯ ಲೀಗಲ್ ಅಕಾಡೆಮಿ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಡಿಕೇರಿ ವಕೀಲರ ಸಂಘದ ತಂಡ ಥ್ರೋಬಾಲ್ ನಲ್ಲಿ ಪ್ರಥಮ, ಫ್ಯಾಶನ್ ಶೋದಲ್ಲಿ ಪ್ರಥಮ ಹಾಗೂ ಗಾಯನ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದುಕೊಂಡಿದೆ. ಇದರೊಂದಿಗೆ ಮೂರು ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಉತ್ತಮ ಶಿಸ್ತಿನ ತಂಡವೆAಬ ಪ್ರಶಸ್ತಿಗೂ ಪಾತ್ರವಾಗಿದೆ.