ಬೆಂಗಳೂರು, ಜ. ೧: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಘಿPosಚಿಣ ಯೋಜನೆ ಯಶಸ್ವಿ ಉಡಾವಣೆ ಮೂಲಕ ಹೊಸ ವರ್ಷವನ್ನು ಆರಂಭಿಸಿತು. ಶ್ರೀಹರಿಕೋಟಾದ ಸತೀಶ್ ಧವಾನ್ ಬಾಹ್ಯಾಕಾಶ ಕೇಂದ್ರದಿAದ ಇಂದು ಎಕ್ಸೊ÷್ಪÃಸ್ಯಾಟ್ ಉಪಗ್ರಹವನ್ನು ಹೊತ್ತ ಪಿ.ಎಸ್.ಎಲ್.ವಿ ಸಿ-೫೮ ರಾಕೆಟ್, ೨೧ ನಿಮಿಷಗಳ ಪಯಣದ ಬಳಿಕ ಉಪಗ್ರಹವನ್ನು ೩೫೦ ಕಿ.ಮೀ ಎತ್ತರದ ಭೂ-ಕಕ್ಷೆಯಲ್ಲಿ ಇರಿಸಿತು. ಈ ಸ್ಥಳದಿಂದಲೇ ಯಂತ್ರಗಳನ್ನು ಹೊಂದಿರುವ ಈ ಉಪಗ್ರಹವು ಸಂಶೋಧನೆಗಳನ್ನು ಕೈಗೊಳ್ಳಲಿದೆ.

ಉಡಾವಣೆ ಬಳಿಕ ಮಾತನಾಡಿದ ಇಸ್ರೋ ಅಧ್ಯಕ್ಷ ಸೋಮನಾಥ್ ಅವರು, ಪ್ರಸ್ತುತ ವರ್ಷ ಅತ್ಯಂತ ಪ್ರಮುಖವಾಗಿರುವ ಗಗನಯಾನ ಯೋಜನೆ ಸೇರಿದಂತೆ ಹತ್ತು-ಹಲವಾರು ಉಡಾವಣೆಗಳನ್ನು ಇಸ್ರೋ ಕೈಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಘಿPosಚಿಣ - ಪೋಲರೈಸ್ಡ್ ಎಕ್ಸ್-ಕಿರಣಗಳ ಅಧ್ಯಯನ

ಘಿPosಚಿಣ ಉಪಗ್ರಹವು ಎಕ್ಸ್-ರೆ ಪೋಲಾರಿಮೀಟರ್ ಹಾಗೂ ಎಕ್ಸ್-ರೆ ಸ್ಪೆಕ್ಟೊçÃಸ್ಕಪಿ - ಟೈಮಿಂಗ್ ಯಂತ್ರಗಳನ್ನು ಹೊಂದಿದೆ. ಸುಮಾರು ೫ ವರ್ಷಗಳ ಕಾಲಾವಧಿ ಹೊಂದಿರುವ ಈ ಯಂತ್ರಗಳು, ಬಾಹ್ಯಾಕಾಶದ ಮೂಲೆ-ಮೂಲೆಗಳಿಂದ ಬರುವ (ಠಿoಟಚಿಡಿiseಜ x-ಡಿಚಿಥಿ) ಧ್ರುವೀಕೃತ ಎಕ್ಸ್ ಕಿರಣಗಳನ್ನು ಅಧ್ಯಯನ ನಡೆಸಲಿವೆ. ಗೋಚರ ಕಿರಣಗಳಂತೆಯೇ ವಿದ್ಯುತ್ ಹಾಗೂ ಅಯಸ್ಕಾಂತ ಶಕ್ತಿಗಳ ಸಮ್ಮುಖದಲ್ಲಿ ಸೃಷ್ಟಿಯಾಗುವ ಎಕ್ಸ್-ರೆಗಳು, ನೈಸರ್ಗಿಕವಾಗಿಯೂ ಕೆಲವೊಮ್ಮೆ ಧ್ರುವೀಕೃತಗೊಳ್ಳುತ್ತವೆ (ಠಿoಟಚಿಡಿise), ಅಂದರೆ - ಒಂದು ಮೂಲದಿಂದ ಹೊರಬರುವ ಎಕ್ಸ್-ಕಿರಣಗಳು ಒಂದೇ ಸಮತಲದಲ್ಲಿ (ಠಿಟಚಿಟಿe) ಚಲಿಸುತ್ತವೆ. ಅತಿಯಾದ ಅಯಸ್ಕಾಂತ ಶಕ್ತಿಯಿಂದ ಮಾತ್ರ ಇದು ನೈಸರ್ಗಿಕವಾಗಿ ಸಾಧ್ಯವಾಗಿದ್ದು, ಇಂತಹ ಅತಿಯಾದ ಅಯಸ್ಕಾಂತ ಶಕ್ತಿ ಮೂಲಗಳಾದ ನ್ಯೂಟ್ರಾನ್ ಸ್ಟಾರ್ ಹಾಗೂ ಬ್ಲಾö್ಯಕ್-ಹೋಲ್‌ಗಳೆಡೆಗೆ ಉಪಗ್ರಹದ ಯಂತ್ರಗಳು ಮುಖಮಾಡಿ, ಅವುಗಳ ಸುತ್ತಲಿನಿಂದ ಹೊರಸೂಸುವ ಎಕ್ಸ್-ರೇಗಳ ಅಧ್ಯಯನ ನಡೆಸಲಿವೆ.