ಮಡಿಕೇರಿ, ಜ. ೧: ಕೊಡವ ಜನಾಂಗದ ಹಕ್ಕೋತ್ತಾಯಗಳಿಗಾಗಿ ಹೋರಾಟ ಮಾಡುತ್ತಿರುವ ಕೊಡವ ನ್ಯಾಷನಲ್ ಕೌನ್ಸಿಲ್‌ನ ಅಧ್ಯಕ್ಷ ನಂದಿನೆರವAಡ ನಾಚಪ್ಪ ಅವರನ್ನು ಬಹುಜನ ಸಮಾಜ ಪಕ್ಷದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಬಿಎಸ್‌ಪಿ ಪಕ್ಷದ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಪಕ್ಷದ ಅಧ್ಯಕ್ಷ ಆಟ್ರಂಗಡ ದಿವಿಲ್‌ಕುಮಾರ್ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಕಳ್ಳೀರ ಹರೀಶ್ ಅವರುಗಳು ಕಾರ್ಯಕರ್ತರ ಸಮ್ಮುಖದಲ್ಲಿ ಸನ್ಮಾನಿಸಿದರು. ಈ ಸಂದರ್ಭ ಮಾತನಾಡಿದ ನಾಚಪ್ಪ; ಎಲ್ಲ ಜನಾಂಗ ಹಾಗೂ ಬಡವರ್ಗದವರಿಗೂ ಸಮಾನತೆ, ಸೌಲಭ್ಯ ದೊರಕಬೇಕೆಂಬ ನಿಟ್ಟಿನಲ್ಲಿ ಹೋರಾಟ ಮಾಡಿದ ಡಾ. ಬಿ. ಆರ್. ಅಂಬೇಡ್ಕರ್ ಅವರ ತತ್ವಗಳೇ ತನ್ನ ಹೋರಾಟಕ್ಕೆ ಅಡಿಪಾಯವಾಗಿದೆ. ಬಿಎಸ್‌ಪಿ ಪಕ್ಷ ಈ ತತ್ವ ಸಿದ್ಧಾಂತದಡಿ ಎಲ್ಲರಿಗೂ ಅವಕಾಶ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಇನ್ನಷ್ಟು ವಿಸ್ತಾರ ಮಾಡಬೇಕೆಂದು ಹೇಳಿದರು.

ಪಕ್ಷದ ಅಧ್ಯಕ್ಷ ದಿವಿಲ್‌ಕುಮಾರ್ ಮಾತನಾಡಿ; ಕೊಡವ ಸಮುದಾಯಕ್ಕೆ ಸವಲತ್ತು, ಸೌಲಭ್ಯ ಒದಗಿಸಿಕೊಡುವಲ್ಲಿ ಹೋರಾಟ ಮಾಡುತ್ತಿರುವ ಸಮುದಾಯದ ನಾಯಕ ನಾಚಪ್ಪ ಜನಾಂಗದ ಪ್ರತಿಧ್ವನಿಯಾಗಿದ್ದಾರೆ. ಅಂಬೇಡ್ಕರ್ ಅವರ ಮೇಲೆ ನಾಚಪ್ಪ ಅವರಿಗಿರುವ ಗೌರವ ಮೆಚ್ಚುವಂತದ್ದೆAದು ಹೇಳಿದರು. ಕಳ್ಳೀರ ಹರೀಶ್ ಮಾತನಾಡಿ; ಕೊಡವ ಜನಾಂಗಕ್ಕೆ ಸ್ಥಾನಮಾನಕ್ಕಾಗಿ ದೆಹಲಿವರೆಗೆ ಹೋರಾಟ ಮಾಡಿದ ನಾಚಪ್ಪ ಆವರ ಕಾರ್ಯವೈಖರಿಯನ್ನು ಶ್ಲಾಘಿಸಿದರು.