ಜನವರಿ: ೨೪. ವಿಶ್ವದ ೩ನೆಯ ಶ್ರೀಮಂತ ವ್ಯಕ್ತಿ ಗೌತಮ್ ಅದಾನಿ ಮಾಲೀಕತ್ವದ ಅದಾನಿ ಸಂಸ್ಥೆಯು ಸ್ಟಾಕ್ ಮ್ಯಾನಿಪ್ಯುಲೇಷನ್ ಮಾಡುತ್ತಿದೆ ಎಂದು ಆರೋಪಿಸಿ ಅಮೇರಿಕಾದ ಹಿಂಡೆನ್‌ಬರ್ಗ್ ರಿಸರ್ಚ್ ವರದಿ ಪ್ರಕಟಿಸಿದ ಬೆನ್ನಲ್ಲೇ ೧೦.೮ ಕೋಟಿ ಡಾಲರ್‌ನಷ್ಟು ಮೌಲ್ಯವನ್ನು ಸಂಸ್ಥೆಯು ಕಳೆದು ಕೊಂಡಿತು.

೨೫. ನ್ಯೂ-ಜಿಲ್ಯಾಂಡ್ ಪ್ರಧಾನಿಯಾಗಿದ್ದ ಜಸಿಂಡ ಆರ್ಡೆನ್ ಅವರ ರಾಜಿನಾಮಿಯಿಂದಾಗಿ ತೆರೆಯಲ್ಪಟ್ಟ ಪ್ರಧಾನಿ ಸ್ಥಾನವನ್ನು ಕ್ರಿಸ್ ಹಿಪ್‌ಕಿನ್ಸ್ ಅವರು ಅಲಂಕರಿಸಿದರು.

೩೦. ಪಾಕಿಸ್ತಾನದ ಪೇಶಾವರದಲ್ಲಿನ ಮಸೀದಿಯೊಂದರ ಮೇಲೆ ಆತ್ಮಾಹುತಿ ದಾಳಿ ನಡೆದ ಪರಿಣಾಮ ೧೦೦ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡರು.

ಫೆಬ್ರವರಿ: ೬ ಟರ್ಕಿ, ಸಿರಿಯಾದಲ್ಲಿ ಸಂಭವಿಸಿದ ೭.೮ ಮ್ಯಾಗ್ನಿಟ್ಯೂಡ್ ಭೂಕಂಪನದಿAದ ಟರ್ಕಿ ಯಲ್ಲಿ ೫೯ ಸಾವಿರ ಹಾಗೂ ಸಿರಿಯಾದಲ್ಲಿ ೮ ಸಾವಿರ ಮಂದಿ ಪ್ರಾಣ ಕಳೆದುಕೊಂಡರು.

ಮಾರ್ಚ್: ೧೦. ಕ್ಷಿ ಝಿನ್‌ಪಿಂಗ್ ಅವರು ೩ನೆ ಬಾರಿಗೆ ಚೀನಾದ ರಾಷ್ಟçಪತಿಯಾಗಿ ಆಯ್ಕೆಯಾದರು

ಏಪ್ರಿಲ್: ೧೫. ಜರ್ಮನಿಯಲ್ಲಿನ ಚಲನೆ ಯಲ್ಲಿದ್ದ ಕೊನೆಯ ೩ ನ್ಯೂಕ್ಲಿಯರ್ ವಿದ್ಯುತ್ ಉತ್ಪಾದನಾ ಕೇಂದ್ರವನ್ನು ಸ್ಥಗಿತಗೊಳಿಸಲಾಯಿತು

ಮೇ: ೬. ಕೆನಡಾ ರಾಷ್ಟç ದಲ್ಲಿ ಅತಿಯಾದ ಕಾಡ್ಗಿಚ್ಚಿ ನಿಂದಾಗಿ ೨೫,೦೦೦ ನಿವಾಸಿ ಗಳನ್ನು ಸ್ಥಳಾಂತರಿಸಲಾಯಿತು. ಸುಮಾರು ೧ ರಿಂದ ೨ ತಿಂಗಳು ಗಳ ಕಾಲ ಕಾಡ್ಗಿಚ್ಚು ಸಕ್ರಿಯ ವಾಗಿತ್ತು

೯. ಮಾಜಿ ಪಾಕಿಸ್ತಾನಿ ಕ್ರಿಕೆಟ್ ತಂಡದ ನಾಯಕ ಹಾಗೂ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ ಖಾನ್ ಅವರನ್ನು ಬಂಧನಕ್ಕೆ ಒಳಪಡಿಸಲಾಯಿತು.

೧೭. ನೇಪಾಳಿ ಶೆರ್ಪಾ ಕಮಿ ರೀಟಾ ಅವರು ದಾಖಲೆಯ ೨೭ನೆ ಬಾರಿ ಎವರೆಸ್ಟ್ ಪರ್ವತವನ್ನು ಏರಿದರು.

ಜೂನ್: ೭. ವಿಶ್ವದಲ್ಲಿಯೇ ಅತ್ಯಂತ ಆಘಾತಕಾರಿ ಏರ್ ಕ್ವಾಲಿಟಿ ಇಂಡೆಕ್ಸ್ ನ್ಯೂ ಯಾರ್ಕ್ನಲ್ಲಿ ದಾಖಲೆಯಾಯಿತು. ಕೆನಡಾದಲ್ಲಿನ ಕಾಡ್ಗಿಚ್ಚಿನ ಹೊಗೆಯು ಇಲ್ಲಿಯವರೆಗೆ ಆಗಮಿಸಿದ ಪರಿಣಾಮ ಏರ್ ಕ್ವಾಲಿಟಿ ಇಂಡಕ್ಸ್ ಸುಮಾರು ೨೧೮ ಎಂದು ದಾಖಲಾಯಿತು.

೯. ಕೊಲಂಬಿಯಾದಲ್ಲಿ ಅಮೆಜಾನ್ ಕಾಡಿನಲ್ಲಿ ಪತನಕ್ಕೀಡಾಗಿದ್ದ ವಿಮಾನದಲ್ಲಿದ್ದ ೩ ಮಕ್ಕಳು ೪೦ ದಿನಗಳು ಕಾಡಿನಲ್ಲಿಯೇ ಜೀವಂತವಾಗಿದ್ದುದು, ಅವರನ್ನು ರಕ್ಷಿಸಲಾಯಿತು. ಇನ್ನುಳಿದ ೩ ಹಿರಿಯ ಪ್ರಯಾಣಿಕರು ವಿಮಾನ ಪತನ ಸಂದರ್ಭ ತಮ್ಮ ಪ್ರಾಣ ಕಳೆದುಕೊಂಡಿದ್ದರು.

೧೮. ಟೈಟಾನಿಕ್ ಹಡಗಿನ ಅವಶೇಷಗಳನ್ನು ವೀಕ್ಷಿಸಲು ಓಷನ್‌ಗೇಟ್ ಸಂಸ್ಥೆಯ ಮೂಲಕ ೩ ಪ್ರವಾಸಿಗರು ಹಾಗೂ ಇಬ್ಬರು ಸಿಬ್ಬಂದಿ ಗಳೊಂದಿಗೆ ತೆರಳಿದ್ದ ಜಲಾಂತರ್ಗಾಮಿ ತಾಂತ್ರಿಕ ಸಮಸ್ಯೆಯಿಂದ ಒಳ-ಸ್ಫೋಟಗೊಂಡು ೫ ಮಂದಿಯೂ ಪ್ರಾಣ ಕಳೆದುಕೊಂಡರು.

೨೭. ಟ್ರಾಫಿಕ್ ನಿಯಮ ಉಲ್ಲಂಘಿಸಿದ ೧೭ ವರ್ಷದ ಯುವಕನ್ನು ಫ್ರೆಂಚ್ ಪೊಲೀಸರು ಹತ್ಯೆಗೈದ ಪರಿಣಾಮ ವಾರಗಳ ಕಾಲ ದೇಶದಲ್ಲಿ ತೀವ್ರ ತರಹದ ಪ್ರತಿಭಟನೆ ನೆರವೇರಿತು.

ಜುಲೈ: ೫. ಮೀಟಾ(ಫೇಸ್‌ಬುಕ್) ಸಂಸ್ಥೆಯು ಹೊಸ ಜಾಲತಾಣ ಥ್ರಡ್ಸ್ ಅನ್ನು ಬಿಡುಗಡೆಗೊಳಿಸಿತು.

೩೦. ಪಾಕಿಸ್ತಾನದಲ್ಲಿ ಜಮಿಯಾತ್ ಉಲಾಮಾ ಇಸ್ಲಾಮ್ ರಾಜಕೀಯ ಪಕ್ಷದ ರ‍್ಯಾಲಿಯಲ್ಲಿ ನೆರೆದಿದ್ದವರ ಮೇಲೆ ಆತ್ಮಾಹುತು ದಾಳಿ ನಡೆದ ಪರಿಣಾಮ ೪೫ ಮಂದಿ ಪ್ರಾಣ ಕಳೆದುಕೊಂಡರು.

ಆಗಸ್ಟ್ : ೯. ಹವಾಯ್ ಅಲ್ಲಿ ಸಂಭವಿಸಿದ ಕಾಡ್ಗಿಚ್ಚಿನಲ್ಲಿ ೯೭ ಮಂದಿ ಪ್ರಾಣ ಕಳೆದುಕೊಂಡರು.

೧೦. ವರ್ಜಿನ್ ಗಲಾಕ್ಟಿಕ್ ಎಂಬ ಬಾಹ್ಯಾಕಾಶ ಸಂಶೋಧನಾ - ಪ್ರವಾಸಿ ಸಂಸ್ಥೆಯು ಮೊದಲ ಬಾರಿಗೆ ಪ್ರವಾಸಿಗರನ್ನು ಬಾಹ್ಯಾಕಾಶಕ್ಕೆ ಕರೆದೊಯ್ಯಿತು.

ಸೆಪ್ಟೆಂಬರ್: ೧೮. ಕೆನಡಾದಲ್ಲಿ ನೆಲೆಸಿದ್ದ ಖಲಿಸ್ತಾನಿ ಪ್ರಚೋದಕ

ನಾಯಕನು ಭಾರತದ ಹಸ್ತಕ್ಷೇಪದಿಂದ ಕೊಲೆಯಾಗಿ ದ್ದಾನೆ ಎಂಬುದಾಗಿ ಕೆನಡಾ ದೇಶದ ಪ್ರಧಾನಿ ಜಸ್ಟಿನ್ ಟ್ರುಡೇವು ಆರೋಪಿಸಿದರು. ನಂತರದ ದಿನಗಳಿಂದ ೨ ದೇಶಗಳ ನಡುವನಿನ ರಾಜತಾಂತ್ರಿಕ ಸಂಬAಧವು ಕುಗ್ಗುತ್ತಾ ಸಾಗಿದೆ.

೨೪. ಕ್ಷÄದ್ರಗ್ರಹದಿಂದ ಮಾದರಿ ಸಂಗ್ರಹಿಸಿದ ನಾಸಾ ದ ಒಸಿರಿಸ್-ಎಕ್ಸ್ ನೌಕೆಯು ಭೂಮಿಗೆ ವಾಪಸ್ಸು ಆಗಮಿಸಿತು.

ಅಕ್ಟೋಬರ್ : ೭. ಭಯೋತ್ಪಾದನಾ ಗುಂಪು ಹಮಾಸ್ ಇಸ್ರೇಲ್ ದೇಶದ ಮೇಲೆ ದಾಳಿ ನಡೆಸಿ ಸಾವರಕ್ಕೂ ಹೆಚ್ಚಿನ ಮಂದಿ ಯನ್ನು ಕೊಂದು ನೂರಕ್ಕೂ ಅಧಿಕ ಮಂದಿ ಯನ್ನು ಜೀತದಾಳುಗಳಾಗಿ ಪಡೆಯಿತು. ಇದಕ್ಕೆ ಪ್ರತಿಕಾರ ವಾಗಿ ಇಸ್ರೇಲ್ ಕೂಡ ಮುಂದಿನ ದಿನಗಳಲ್ಲಿ ಪ್ಯಾಲಿಸ್ಟೆöÊನ್‌ಬಲ್ಲಿ ನೆಲೆ ಕಂಡಿರುವ ಭಯೋತ್ಪಾದನಾ ಗುಂಪಿನ ಮೇಲೆ ದಾಳಿ ನಡೆಸಿದ್ದು, ಇಂದಿಗೂ ಕೂಡ ಯುದ್ಧ ತಿಳಿಯಾಗಿಲ್ಲ

೭. ೬.೮ ಮ್ಯಾಗ್ನಿಟ್ಯೂಡ್ ಭೂಕಂಪನವು ಅಫ್ಘಾನಿಸ್ತಾನದಲ್ಲಿ ಸಂಭವಿಸಿದ್ದು, ೨,೪೦೦ ಮಂದಿ ಪ್ರಾಣ ಕಳೆದುಕೊಂಡರು

ನವೆAಬರ್ : ೧೯. ಅಹ್ಮದಾಬಾದ್‌ನಲ್ಲಿ ನಡೆದ ಕ್ರಿಕೆಟ್ ವಿಶ್ವಕಪ್ ಅಂತಿಮ ಪಂದ್ಯದಲ್ಲಿ ಆಸ್ಟೆçÃಲಿಯಾ ತಂಡವು ಭಾರತವನ್ನು ಮಣಿಸಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿತು.