ಜನವರಿ: ೧೮. ವ್ರೆಸ್‌ಲಿಂಗ್ ಫೆಡರೇಷನ್ ಆಫ್ ಇಂಡಿಯಾದ ಅಧ್ಯಕ್ಷ ಬ್ರಿಜ್ ಭೂಷಣ್ ಅವರ ಮೇಲೆ ಅತ್ಯಾಚಾರ ಆರೋಪವೆಸಗಿ ಭಾರತದ ಪ್ರಖ್ಯಾತ ಕುಸ್ತಿಪಟು ಗಳಾದ ಬಜರಂಗ್ ಪೂನಿಯ, ಸಾಕ್ಷಿ ಮಲ್ಲಿಕ್ ಹಾಗೂ ವಿನೇಶ್ ಫೋಗಾಟ್ ಅವರುಗಳು ಪ್ರತಿಭಟಿಸಿ ತನಿಖೆಗೆ ಒತ್ತಾಯಿಸಿದರು.

ಫೆಬ್ರವರಿ: ೨೬.ನವದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬಹುಕೋಟಿ ‘ಲಿಕರ್ ಪಾಲಿಸಿ’ ಹಗರಣದಲ್ಲಿ ಬಂಧಿತರಾದರು

ಮಾರ್ಚ್: ೨. ತ್ರಿಪುರ, ನಾಗಾಲ್ಯಾಂಡ್ ರಾಜ್ಯ ಚುನಾವಣೆಯಲ್ಲಿ ಬಿ.ಜೆ.ಪಿ ವಿಜಯ ಪತಾಕೆ ಹಾರಿಸಿದ್ದು, ಮೇಗಾಲಯದಲ್ಲಿ ನ್ಯಾಷನಲ್ ಪೀಪಲ್ಸ್ ಪಾರ್ಟಿ ಅಧಿಕಾರಕ್ಕೆ ಬಂತು.

೨೪. ಮಾನನಷ್ಟ ಪ್ರಕರಣ ಹಿನ್ನೆಲೆ ಮಾಜಿ ಭಾರತೀಯ ರಾಷ್ಟಿçÃಯ ಕಾಂಗ್ರಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಂಸದ ಸ್ಥಾನ ರದ್ದುಗೊಂಡಿತು.

ಏಪ್ರಿಲ್: ೧೫. ಉತ್ತರಪ್ರದೇಶದ ಗ್ಯಾಂಗ್ಸ÷್ಟರ್ ಅತೀಖ್ ಅಹ್ಮದ್ ಹಾಗೂ ಸಹೋದರ ಅಶ್ರಫ್ ಅಹ್ಮದ್ ಅವರುಗಳನ್ನು ಪೊಲೀಸ್ ಬಂದೋಬಸ್ತ್ ನಡುವೆಯೇ ಶೂಟ್ ಮಾಡಿ ಕೊಲೆಗೈಯಲಾಯಿತು. ಇದರ ನೇರ ಪ್ರಸಾರ ಟಿ.ವಿ ಚ್ಯಾನಲ್ ಕ್ಯಾಮರಾದಲ್ಲಿಯೇ ಸೆರೆಹಿಡಿಯಲಾಗಿತ್ತು.

ಮೇ : ೩. ಮಣಿಪುರದಲ್ಲಿನ ಬುಡಕಟ್ಟು ಜನಾಂಗಗಳ ನಡುವೆ ಜನಾಂಗೀಯ ಸಂಘರ್ಷ ತೀವ್ರ ಸ್ವರೂಪ ಪಡೆದು ೭೩ ಮಂದಿ ಪ್ರಾಣ ಕಳೆದುಕೊಂಡರು. ನಂತರದ ದಿನಗಳಲ್ಲಿ ಸಂಘರ್ಷ ಮಿತಿಮೀರಿ ನೂರಾರು ಮಂದಿ ಗಲಭೆಯಲ್ಲಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.

೧೯. ಚಾಲ್ತಿಯಲ್ಲಿರುವ ರೂ.೨,೦೦೦ ನೋಟುಗಳನ್ನು ಹಿಂಪಡೆಯುವುದಾಗಿ ಆರ್.ಬಿ.ಐ ಘೋಷಿಸಿತು.

೨೮. ಐತಿಹಾಸಿಕ ನೂತನ ಸಂಸದ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆಗೊಳಸಿಸಿದರು.

ಜೂನ್ : ೨. ಒಡಿಶ್ಶಾದಲ್ಲಿ ೩ ರೈಲುಗಳ ನಡುವೆ ಸಂಭವಿಸಿದ ಅಪಘಾತದ ಪರಿಣಾಮ ೨೯೬ ಮಂದಿ ಪ್ರಾಣ ಕಳೆದುಕೊಂಡರು. ಈ ಶತಕದಲ್ಲಿಯೇ ಅತಿ ದೊಡ್ಡ ರೈಲು ಅಪಘಾತ ಇದಾಗಿತ್ತು.

ಜುಲೈ : ೭. ರೈಲು ಅಪಘಾತದಲ್ಲಿ ನಿರ್ಲಕ್ಷö್ಯ ವಹಿಸಿದ್ದ ಇಬ್ಬರು ಅಭಿಯಂತರರು ಹಾಗೂ ಓರ್ವ ತಾಂತ್ರಿಕ ತಜ್ಞನನ್ನು ಸಿ.ಬಿ.ಐ ಬಂಧಿಸಿತು.

೧೮. ೨೦೨೪ರ ಲೋಕಸಭಾ ಚುನಾವಣೆಗೆ ಬಿ.ಜೆ.ಪಿ ಒಳಗೊಂಡ

ಎನ್.ಡಿ.ಎ ಸರಕಾರದ ವಿರುದ್ಧ ಹೋರಾಡಲು ಕಾಂಗ್ರಸ್ ಹಾಗೂ ಇತರ ಪ್ರಮುಖ ಪಕ್ಷಗಳು IಓಆIಂ ಹೆಸರಿನಲ್ಲಿ ಹೊಸ ಒಕ್ಕೂಟವನ್ನು ಸೃಷ್ಟಿಸಿತು.

೨೦. ಮೇನಲ್ಲಿ ಮಣಿಪುರ ಹಿಂಸಾಚಾರ ಪ್ರಾರಂಭವಾದಾಗ ಇಬ್ಬರು ಮಹಿಳೆಯರನ್ನು ಒಂದು ಗುಂಪಿನವರು ಬೆತ್ತಲೆ ಮೆರವಣಿಗೆ ಮಾಡಿಸಿದ್ದ ವೀಡಿಯೋ ವೈರಲ್ ಆಗಿದ್ದು, ಇಡೀ ದೇಶವೇ ಆಘಾತಕ್ಕೆ ಒಳಗಾದಂತಾಯಿತು.

ಆಗಸ್ಟ್: ೭. ಮಾನನಷ್ಟ ಮೊಕದ್ದಮೆಯಡಿಯಲ್ಲಿ ಸಂಸದೀಯ ಸ್ಥಾನ ಕಳೆದುಕೊಂಡ ರಾಹುಲ್ ಗಾಂಧಿ ಅವರಿಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ಅವರು ಸಲ್ಲಿಸಿದ್ದ ಅರ್ಜಿ ಸಂಬAಧ, ಅವರ ಸ್ಥಾನ ಮರಳಿ ದೊರಕಿತು.

೨೩. ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಚಂದ್ರಯಾನ್-೩ ಯೋಜನೆಯಡಿಯ ನೌಕೆಯು ಚಂದ್ರನ ದಕ್ಷಿಣ ಧ್ರುವದ ಸಮೀಪ ಲ್ಯಾಂಡ್ ಆದ ಮೊದಲ ನೈಕೆ ಎಂಬ ಹಗ್ಗಳಿಕಯನ್ನು ಪಡೆಯಿತು.

ಸೆಪ್ಟೆಂಬರ್: ೨. ಚಂದ್ರಯಾನ ಯೋಜನೆಯ ಯಶಸ್ಸಿನ ಬೆನ್ನಲ್ಲೇ ಸೂರ್ಯನ ಅಧ್ಯಯನ ನಡೆಸುವ ಉದ್ದೇಶದಿಂದ ಆದಿತ್ಯ-ಎಲ್-೧ ನೌಕೆಯನ್ನು ಇಸ್ರೋ ಕೈಗೊಂಡಿತು.

೧೯. ಲೋಕಸಭೆಯಲ್ಲಿ ಶೇ.೩೩ ರಷ್ಟು ಸ್ಥಾನವನ್ನು ಮಹಿಳೆಯರಿಗೆ ಮೀಸಲಿಡುವ ವಿಮೆನ್ಸ್ ರಿಸರ್ವೇಷನ್ ಬಿಲ್ ಅನ್ನು ವಿಶೇಷ ಸಂಸದೀಯ ಸೆಷನ್‌ನಲ್ಲಿ ಪ್ರಸ್ತಾಪಿಸಲಾಯಿತು

ಅಕ್ಟೋಬರ್: ೧೭. ಸಲಿಂಗ ಮದುವೆಗೆ ಕಾನೂನಾತ್ಮಕ ಅನುಮೋದನೆ ನೀಡಲು ಸರ್ವೋಚ್ಚ ನ್ಯಾಯಾಲಯವು ನಿರಾಕರಿಸಿತು.

ನವೆಂಬರ್: ೨೯. ಉತ್ತರಾಖಂಡದಲ್ಲಿ ಕಾಮಗಾರಿ ನಡೆಸುತ್ತಿದ್ದ ಸಂದರ್ಭ ಸುರಂಗ ಕುಸಿತದಿಂದ ಸುಮಾರು ೧೭ ದಿನಗಳ ಕಾಲ ಸಿಲುಕಿಕೊಂಡಿದ್ದ ೪೧ ಕಾರ್ಮಿಕ ರನ್ನು ನಿರಂತರ ಕಾರ್ಯಾಚರಣೆ ನಡೆಸಿ ರಕ್ಷಿಸಲಾಯಿತು.

ಡಿಸೆಂಬರ್: ೧೩. ಲೋಕಸಭಾ ನೂತನ ಭವನದೊಳಗೆ ನುಸುಳಿದ್ದ ಇಬ್ಬರು ಕಿಡಿಗೇಡಿಗಳು ಹಳದಿ ಬಣ್ಣದ ಹೊಗೆ ಸೂಸುವ ಕ್ಯಾನಿಸ್ಟರ್ ಒಂದನ್ನು ಎಸೆದು

ಕೋಲಾಹಲ ಸೃಷ್ಟಿಸಿದ್ದರು.