ಗೋಣಿಕೊಪ್ಪಲು, ಡಿ. ೩೧: ‘ವಿವಿಧತೆಯಲ್ಲಿ ಏಕತೆ’ ಕಾಣುವ ಭಾರತದ ನೆಲದಲ್ಲಿ ಕೊಡಗಿನ ಸಂಸ್ಕೃತಿ, ಜೀವನ ಶೈಲಿ, ಸಾಂಸ್ಕೃತಿಕ ಚಟುವಟಿಕೆ ತನ್ನದೇ ಐತಿಹ್ಯ ಹಾಗೂ ಖ್ಯಾತಿಯನ್ನು ಜಾಗತಿಕ ಮಟ್ಟದಲ್ಲಿ ಪಸರಿಸಿದೆ. ಅದೇ ರೀತಿ ಭಾರತದ ಶಿಖರವಾಗಿರುವ ಕಾಶ್ಮೀರವೂ ಹಲವು ವಿಶೇಷತೆಯಿಂದ ಕೂಡಿರುವ ಪ್ರದೇಶವಾಗಿದೆ. ಕೊಡಗಿನ ಕಲೆ, ಸಂಸ್ಕೃತಿ, ಆಚಾರ-ವಿಚಾರ ಕಣ್ತುಂಬಿಕೊಳ್ಳಲು ಆಸೆಯಲ್ಲಿ ಆಗಮಿಸಿದ್ದ ಕಾಶ್ಮೀರ ಮಂದಿಗೆ ‘ಯುವ ವಿನಿಮಯ’ ಕಾರ್ಯಕ್ರಮ ಸಂತೃಪ್ತಿ ತಂದಿದೆಯಲ್ಲದೆ, ಕಾಶ್ಮೀರದ ಜೀವನಶೈಲಿ, ಸಾಂಸ್ಕೃತಿಕ ಶ್ರೀಮಂತಿಗೆ ಜಿಲ್ಲೆಯ ಮಂದಿಗೆ ಖುಷಿ ತರಿಸಿತು.
ಹೌದು..ಕಳೆದ ೬ ದಿನಗಳಿಂದ ಗೋಣಿಕೊಪ್ಪದ ಕಾಪ್ಸ್ ಶಾಲೆಯಲ್ಲಿ ಭಾರತ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ಗೃಹ ಸಚಿವಾಲಯದ ಮಾರ್ಗದರ್ಶನದಲ್ಲಿ ಕೂರ್ಗ್ ಪಬ್ಲಿಕ್ ಶಾಲೆ ಮತ್ತು ಪದವಿ ಪೂರ್ವ ಕಾಲೇಜು, ರಾಜ್ಯ ನೆಹರು ಯುವ ಕೇಂದ್ರ ಸಂಘಟನೆ ಹಾಗೂ ಜಿಲ್ಲಾ ಯುವ ಒಕ್ಕೂಟದ ಸಹಯೋಗದಲ್ಲಿ ಆಯೋಜಿಸಿದ್ದ ಕಾಶ್ಮೀರ ಯುವ ವಿನಿಮಯಕ್ಕೆ ಗಣ್ಯರು ಭಾಗವಹಿಸುವುದರೊಂದಿಗೆ ಕಾರ್ಯಕ್ರಮಕ್ಕೆ ವರ್ಣರಂಜಿತ ತೆರೆ ಎಳೆಯಲಾಯಿತು.
ಜಮ್ಮು-ಕಾಶ್ಮೀರದ ಪುಲ್ವಾಮ, ಬದಗಾಂ, ಬಾರಮುಲ್ಲ, ಕುಪ್ವಾರ, ಅನಂತನಾಗ್, ಶ್ರೀನಗರ ಜಿಲ್ಲೆಗಳ ೧೨೦ ಯುವಕ, ಯುವತಿಯರು ಭಾಗವಹಿಸಿ ಇಲ್ಲಿನ ಅಚಾರ-ವಿಚಾರ, ಕಲೆ, ಸಂಸ್ಕೃತಿ, ಉಡುಗೆ-ತೊಡುಗೆ, ಅಹಾರ ಪದ್ಧತಿ, ಜೀವನ ೩ಆರನೇ ಪುಟಕ್ಕೆ
(ಮೊದಲ ಪುಟದಿಂದ) ಶೈಲಿಗಳ ಬಗ್ಗೆ ಅರಿತುಕೊಂಡರು.
ರಾಜ್ಯಪಾಲರು ಭಾಗಿ
ಯುವ ಜನರು ದೇಶದ ಸಾಮಾಜಿಕ ಮತ್ತು ಆರ್ಥಿಕ ಪರಿ ವರ್ತನೆಗಾಗಿ ಹಾಗೂ ಪ್ರಜಾಪ್ರಭುತ್ವ ಮತ್ತು ಅಭಿವೃದ್ಧಿಯನ್ನು ಬಲಪಡಿಸುವ ಜೊತೆಗೆ ಪ್ರಮುಖ ಮಾನವ ಸಂಪನ್ಮೂಲಗಳಾಗಿದ್ದಾರೆ ಎಂದು ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.
ಕಾಶ್ಮೀರಿ ಯುವ ವಿನಿಮಯ ಕಾರ್ಯಕ್ರಮದ ಸಮಾರೋಪ ಸಮಾರಂಭ "ವತನ್ ಕೋ ಜಾನೋ" ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಭಾರತ ಯುವಕರ ದೇಶ. ಭಾರತದ ಜನಸಂಖ್ಯೆಯ ಸುಮಾರು ೬೫ ಪ್ರತಿಶತದಷ್ಟು ಜನರು ೩೫ ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ ಮತ್ತು ಯುವಜನಾಂಗ ದೇಶದ ಭವಿಷ್ಯ ಮತ್ತು ದೇಶದ ಅಭಿವೃದ್ಧಿಯ ಪ್ರಮುಖ ಭಾಗವಾಗಿದ್ದಾರೆ ಎಂದರು.
ಸ್ವಾತAತ್ರö್ಯದ ೭೫ ವರ್ಷಗಳಲ್ಲಿ ದೇಶವು ಎಲ್ಲಾ ಕ್ಷೇತ್ರಗಳಲ್ಲಿ ಅಭೂತಪೂರ್ವ ಪ್ರಗತಿಯನ್ನು ಸಾಧಿಸಿದೆ. ಸ್ವಾವಲಂಬಿ ಭಾರತವನ್ನು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇಂದು ನಮ್ಮ ಆರ್ಥಿಕತೆಯು ವಿಶ್ವದ ೫ನೇ ಅತಿದೊಡ್ಡ ಆರ್ಥಿಕತೆಯಾಗಿದೆ ಮತ್ತು ವಿಶ್ವದ ೩ನೇ ಅತಿದೊಡ್ಡ ಆರ್ಥಿಕತೆಯತ್ತ ಸಾಗುತ್ತಿದೆ. ೨೦೪೭ ರವರೆಗಿನ ಸ್ವಾತಂತ್ರö್ಯದ ಶತಮಾನವು ಭವ್ಯವಾದ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ಮತ್ತು ನಮ್ಮ ದೇಶವನ್ನು ವಿಶ್ವದ ಅತ್ಯುತ್ತಮ ದೇಶಗಳ ವರ್ಗಕ್ಕೆ ತರುವ ಕರ್ತವ್ಯದ ಅವಧಿಯಾಗಿದೆ. ಈ ಕರ್ತವ್ಯದ ಅವಧಿಯನ್ನು ಅವಕಾಶವನ್ನಾಗಿ ಪರಿವರ್ತಿಸಲು ನಾವು ಪಾಲುದಾರರಾಗಬೇಕು ಎಂದು ಕರೆ ನೀಡಿದರು.
ಕರ್ನಾಟಕವು ದೇಶದ ಪ್ರಗತಿಪರ, ಉತ್ತಮವಾಗಿ ಅಭಿವೃದ್ಧಿ ಹೊಂದಿದ ಮತ್ತು ಸಮೃದ್ಧ ರಾಜ್ಯವಾಗಿದೆ. ಶಿಕ್ಷಣ, ಆರೋಗ್ಯ, ಕೃಷಿ, ಮಾಹಿತಿ ಮತ್ತು ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಕೈಗಾರಿಕೆ ಮತ್ತು ವಾಣಿಜ್ಯ, ಸ್ಟಾರ್ಟ್ಅಪ್ಗಳು, ಏರೋಸ್ಪೇಸ್, ಕೃತಕ ಬುದ್ಧಿಮತ್ತೆ, ಇಂಧನ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಕರ್ನಾಟಕ ಗಮನಾರ್ಹ ಪ್ರಗತಿ ಸಾಧಿಸಿದೆ ಎಂದು ಶ್ಲಾಘಿಸಿದರು.
ಈ ಕಾರ್ಯಕ್ರಮದಲ್ಲಿ, ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳ ಜೊತೆಗೆ ಯೋಗ, ಶಿಕ್ಷಣ, ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ವ್ಯಾಪಾರ ಮತ್ತು ಹೊಸ ತಂತ್ರಜ್ಞಾನದ ಬಗ್ಗೆ ಮಾಹಿತಿಯ ಜೊತೆಗೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡೆಸಿರುವುದು ಶ್ಲಾಘನೀಯ. ಇದರೊಂದಿಗೆ ಕರ್ನಾಟಕದ ಭಾಷೆ, ಸಂಪ್ರದಾಯ, ಸಂಸ್ಕೃತಿ, ವೇಷಭೂಷಣ ಮತ್ತು ಇತರ ಅಂಶಗಳನ್ನು ತಿಳಿದುಕೊಳ್ಳುವ ಅವಕಾಶವನ್ನು ಕಾಶ್ಮೀರದ ಜನತೆ ಪಡೆದಿದೆೆ ಎಂದರು.
ಭಾರತೀಯತೆ ಇರಲಿ - ಪೊನ್ನಣ್ಣ
ವೀರಾಜಪೇಟೆ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಮಾತನಾಡಿ ಯುವಕರ ಬಲದಿಂದ ಈ ದೇಶವನ್ನು ಅತ್ಯುತ್ತಮವಾಗಿ ನಿರ್ಮಾಣ ಮಾಡಲು ಸಾಧ್ಯವಾಗ ಬಲ್ಲದು. ಈ ನಿಟ್ಟಿನಲ್ಲಿ ಯುವಕರು ತರಬೇತಿಯನ್ನು ಹೊಂದುವ ಮೂಲಕ ಭಾರತ ದೇಶದ ಆರ್ಥಿಕತೆ, ಸಂಸ್ಕೃತಿ ಮತ್ತು ಸಂಪ್ರದಾಯ ಭಾಷೆಗಳ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ಈ ಹಿಂದೆ ಆದಿವಾಸಿಗಳ ಸಂಸ್ಕೃತಿ ವಿನಿಮಯ ಕಾರ್ಯಕ್ರಮ ಆರಂಭಿಸಲಾಗಿತ್ತು, ಈಗ ಯುವ ವಿನಿಮಯ ಕಾರ್ಯಕ್ರಮ ಜರುಗುತ್ತಿದೆ. ಇಂತಹ ಕಾರ್ಯಕ್ರಮಗಳಿಂದ ಉತ್ತಮ ವಿಚಾರಗಳು ವಿನಿಮಯಗೊಳ್ಳಲು ಸಾಧ್ಯವಾಗಿದೆ ಎಂದು ಸಂತಸಪಟ್ಟರು.
ಭಾರತವು ಶಾಂತಿಯನ್ನು ಮೂಲ ಮಂತ್ರವಾಗಿಸಿಕೊAಡಿರುವ ದೇಶ. ಸ್ವಾತಂತ್ರö್ಯ ಕೂಡ ಶಾಂತಿ ಯಿಂದಲೇ ದೊರೆತದ್ದು. ಉತ್ತರದಿಂದ ದಕ್ಷಿಣದವರೆಗೆ ಸಾಗಿದರೆ ಏಕತೆಯೊಂದೇ ಕಾಣುತ್ತದೆ. ಅವರವರ ಆಚಾರ ವಿಚಾರಗಳನ್ನು ಅನುಸರಿಸಿ ದರೂ ಸಹ, ದೇಶ ಎಂದಾಗ ಎಲ್ಲರೂ ಭಾರತೀಯರೇ ಎನ್ನುವ ಭಾವ ನಮ್ಮಲ್ಲಿರಬೇಕು ಎಂದರು. ಕೊಡಗು ಮತ್ತು ಕಾಶ್ಮೀರಿ ಕಲಾವಿದರಿಂದ ಪ್ರಸ್ತುತಗೊಂಡ ಸಾಂಸ್ಕೃತಿಕ ಕಾರ್ಯಕ್ರಮ ಜನಮನ ಸೆಳೆಯಿತು.
ಜಿಲ್ಲಾಧಿಕಾರಿ ವೆಂಕಟ್ ರಾಜಾ, ನೆಹರು ಯುವ ಕೇಂದ್ರದ ಪ್ರಾದೇಶಿಕ ಅಧಿಕಾರಿ ನಟರಾಜು, ಕಾಪ್ಸ್ ಶಾಲೆಯ ಪ್ರಾಂಶುಪಾಲರಾದ ಎಂ.ರಾಮ ಚಂದ್ರನ್, ನಾಗಲಕ್ಷಿö್ಮ, ತಹಶೀಲ್ದಾರ್ ಪ್ರಶಾಂತ್, ಕಾಶ್ಮೀರಿ ಯುವ ವಿನಿಮಯ ಕಾರ್ಯಕ್ರಮದ ಸಂಘಟಕ ಕುಲ್ಲಚಂಡ ಪ್ರಮೋದ್ ಗಣಪತಿ, ಜಿಲ್ಲಾ ಯುವ ಒಕ್ಕೂಟ ಅಧ್ಯಕ್ಷ ಸುಕುಮಾರ್, ತಾಲೂಕು ಅಧ್ಯಕ್ಷೆ ಮನೆಯಪಂಡ ಶೀಲಾ ಬೋಪಣ್ಣ, ಪ್ರಮುಖರಾದ ಆಪಟ್ಟೀರ ಟಾಟು ಮೊಣ್ಣಪ್ಪ, ಎನ್.ಎಸ್. ಕಂದಾ ದೇವಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಇಂತಹ ಕಾರ್ಯಕ್ರಮಗಳಿಂದ ಉತ್ತಮ ವಿಚಾರಗಳು ವಿನಿಮಯಗೊಳ್ಳಲು ಸಾಧ್ಯವಾಗಿದೆ ಎಂದು ಸಂತಸಪಟ್ಟರು.