ಶನಿವಾರಸಂತೆ, ಜ. ೧: ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಕಸೂರು ಗ್ರಾಮದ ಕ್ಯಾತೆ ಹೊಳೆಯ ಸೇತುವೆ ಕೆಳಭಾಗದಲ್ಲಿ ಅಪರಿಚಿತ ಪುರುಷನ ಮೃತ ದೇಹ ಕಂಡು ಬಂದಿದೆ.

ಅದೇ ಗ್ರಾಮದ ಕೆ.ವಿ.ಅಬ್ದುಲ್ ನವಾಜ್ ಎಂಬವರು ತಮ್ಮ ಹೊಲಕ್ಕೆ ತೆರಳಿದ ಸಂದರ್ಭ ಮೃತದೇಹ ಕಂಡುಬAದಿದ್ದು, ಕೊಡ್ಲಿಪೇಟೆ ಪೊಲೀಸ್ ಉಪ ಠಾಣೆಗೆ ದೂರು ನೀಡಿದ್ದಾರೆ.

ಕಲ್ಲುಗಳ ಮೇಲೆ ಕಾಲಿಟ್ಟಾಗ ಆಕಸ್ಮಿಕವಾಗಿ ಕಾಲುಜಾರಿ ಬಿದ್ದಿರಬಹುದು ಎಂದು ಅಂದಾಜಿಸಲಾಗಿದ್ದು, ಮುಖ ಮತ್ತು ಸೊಂಟ ಭಾಗದಲ್ಲಿ ಗಾಯಗಳಾಗಿವೆ.

ಕೆ.ವಿ.ಅಬ್ದುಲ್ ನವಾಜ್ ನೀಡಿದ ದೂರಿನ ಅನ್ವಯ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಶವದ ವಿಳಾಸ ಪತ್ತೆಗಾಗಿ ಕಾನೂನು ಕ್ರಮ ಕೈಗೊಂಡಿರುತ್ತಾರೆ. ಮೃತ ದೇಹವನ್ನು ಮಡಿಕೇರಿಯ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಟ್ಟಿರುತ್ತಾರೆ. ವಾರಸುದಾರರು ಯಾರಾದರೂ ಇದ್ದಲ್ಲಿ ಶನಿವಾರಸಂತೆ ಪೊಲೀಸ್ ಠಾಣೆಯನ್ನು ಸಂಪರ್ಕಿಸುವAತೆ ಪ್ರಕಟಣೆ ತಿಳಿಸಿದೆ.