ಮಡಿಕೇರಿ, ಡಿ. ೩೧: ಹಾಲುಗುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಳೆಯ ವಿದ್ಯಾರ್ಥಿ ಸಂಘ, ಹಾಲುಗುಂದ ಗ್ರಾಮಸ್ಥರು, ಭಗವತಿ ಯೂತ್ ಕ್ಲಬ್ ಹಾಗೂ ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಇವರ ಸಂಯುಕ್ತಾಶ್ರಯದಲ್ಲಿ ಹಾಲುಗುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಾಲ್ಕು ದಿನಗಳ ಕಾಲ ನಡೆದ ಜಿಲ್ಲಾಮಟ್ಟದ ಮುಕ್ತ ೭+೨ ಜನರ ಕಾಲ್ಚೆಂಡು ಪಂದ್ಯಾವಳಿಯಲ್ಲಿ ಕ್ಯಾಪ್ಟನ್ಸ್ ೧೧ ಪಾಲಿಬೆಟ್ಟ ತಂಡ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ. ದ್ವಿತೀಯ ಸ್ಥಾನವನ್ನು ಚಾಮುಂಡಿ ಯುನೈಟೆಡ್ ಒಂಟಿಯAಗಡಿ ತಂಡ ಪಡೆದುಕೊಂಡಿದೆ.
ಜಿದ್ದಾಜಿದ್ದಿನಿAದ ಕೂಡಿದ್ದ ಹಂತಿಮ ಹಣಾಹಣಿಯಲ್ಲಿ ಕ್ಯಾಪ್ಟನ್ಸ್ ೧೧ ಪಾಲಿಬೆಟ್ಟ ಹಾಗೂ ಚಾಮುಂಡಿ ಯುನೈಟೆಡ್ ಒಂಟಿಯAಗಡಿ ತಂಡವು ನಿಗದಿತ ಸಮಯದಲ್ಲಿ ೨-೨ ಗೋಲುಗಳಿಸಿ ಸಮಬಲ ಸಾಧಿಸಿದವು.
ಪೆನಾಲ್ಟಿ ಶೂಟೌಟ್ನಲ್ಲಿ ಕ್ಯಾಪ್ಟನ್ಸ್ ೧೧ ತಂಡದ ಗೋಲ್ ಕೀಪರ್ ಮಣಿ ಎರಡು ಪೆನಾಲ್ಟಿ ಹೊಡೆತವನ್ನು ತಡೆಯುವುದರ ಮೂಲಕ ಕ್ಯಾಪ್ಟನ್ಸ್ ೧೧ ಪಾಲಿಬೆಟ್ಟ ತಂಡವು ೫-೩ ಗೋಲುಗಳ ಅಂತರದಿAದ ಪೆನಾಲ್ಟಿ ಶೂಟೌಟ್ನಲ್ಲಿ ಗೆಲುವು ಸಾಧಿಸಿ ಭಗವತಿ ಕಪ್ ಚಾಂಪಿಯನ್ ಪ್ರಶಸ್ತಿ ಅಲಂಕರಿಸಿತು. ರನ್ನರ್ಸ್ ಪ್ರಶಸ್ತಿಗೆ ಚಾಮುಂಡಿ ಯುನೈಟೆಡ್ ತಂಡ ತೃಪ್ತಿಪಟ್ಟುಕೊಂಡಿತು.
ಇದಕ್ಕೂ ಮೊದಲು ನಡೆದ ಮೊದಲ ಸೆಮಿಫೈನಲ್ ಪಂದ್ಯವು ವೈಷ್ಣವಿ ಯುವಕ ಸಂಘ ಮರಗೋಡು ಹಾಗೂ ಕ್ಯಾಪ್ಟನ್ಸ್ ೧೧ ಪಾಲಿಬೆಟ್ಟ ತಂಡಗಳ ನಡುವೆ ನಡೆಯಿತು.
ಕ್ಯಾಪ್ಟನ್ಸ್ ೧೧ ಪಾಲಿಬೆಟ್ಟ ತಂಡವು ೪-೧ ಗೋಲುಗಳ ಅಂತರದಿAದ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತು. ಎರಡನೇ ಸೆಮಿಫೈನಲ್ ಪಂದ್ಯವು ಚಾಮುಂಡಿ ಯುನೈಟೆಡ್ ಒಂಟಿಯAಗಡಿ ಹಾಗೂ ಅಯ್ಯಪ್ಪ ಫ್ರೆಂಡ್ಸ್ ಹಾಲುಗುಂದ ತಂಡಗಳ ನಡುವೆ ನಡೆದು ಚಾಮುಂಡಿ ಯುನೈಟೆಡ್ ತಂಡವು ೩-೧ ಗೋಲುಗಳ ಅಂತರದಿAದ ಗೆದ್ದು ಫೈನಲ್ ಪ್ರವೇಶಿಸಿತು.
ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ನಲ್ಲಿ ನೋಂದಾವಣಿಗೊAಡ ೧೬ ತಂಡಗಳ ನಡುವೆ ನಡೆದ ಪಂದ್ಯಾವಳಿಯಲ್ಲಿ ಅತ್ಯುತ್ತಮ ತಂಡ ಪ್ರಶಸ್ತಿಯನ್ನು ಗಾಂಧಿ ಯುವಕ ಸಂಘ ಕಂಡಕರೆ ಪಡೆದುಕೊಂಡಿತು. ಅತೀ ಹೆಚ್ಚು ಗೋಲು ಬಾರಿಸಿದ ಆಟಗಾರ ಪ್ರಶಸ್ತಿಗೆ ಕ್ಯಾಪ್ಟನ್ಸ್ ೧೧ ತಂಡದ ಮುನ್ನಡೆ ಆಟಗಾರ ಜುನೈದ್ ಭಾಜನರಾದರು. ಅತ್ಯುತ್ತಮ ಆಟಗಾರ ಪ್ರಶಸ್ತಿ ಚಾಮುಂಡಿ ಯುನೈಟೆಡ್ ತಂಡದ ಪಾಂಡಿಯನ್ ಹಾಗೂ ಅತ್ಯುತ್ತಮ ಗೋಲ್ ಕೀಪರ್ ಪ್ರಶಸ್ತಿಯನ್ನು ಅಯ್ಯಪ್ಪ ಫ್ರೆಂಡ್ಸ್ ತಂಡದ ರಾಖಿ ಪಡೆದುಕೊಂಡರು. ಲಯನ್ಸ್ ವಿದ್ಯಾಸಂಸ್ಥೆ ಗೋಣಿಕೊಪ್ಪ ಹಾಗೂ ಮರಗೋಡು ಎಫ್.ಸಿ ಮಹಿಳಾ ತಂಡಗಳ ನಡುವೆ ಪ್ರದರ್ಶನ ಪಂದ್ಯ ನಡೆಯಿತು.
೪-೦ ಗೋಲುಗಳ ಅಂತರದಿAದ ಲಯನ್ಸ್ ವಿದ್ಯಾಸಂಸ್ಥೆ ಗೆಲುವು ಪಡೆಯಿತು. ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆಯ ತೀರ್ಪುಗಾರರಾದ ಇಮ್ರಾನ್ ಖಾನ್ ಹುಬ್ಬಳ್ಳಿ, ದರ್ಶನ್ ಸುಕುಮಾರ್ ಮರಗೋಡು ಹಾಗೂ ಗೇಬ್ರಿಯಲ್ ಬೆಳಗಾವಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.
(ಕೆ.ಎಂ ಇಸ್ಮಾಯಿಲ್ ಕಂಡಕರೆ)