ಮಡಿಕೇರಿ, ಡಿ. ೩೧: ಮಡಿಕೇರಿ ಕೊಡವ ಸಮಾಜ ಕಲ್ಚರಲ್ ಮತ್ತು ಸೋಷಿಯಲ್ ವೆಲ್‌ಫೇರ್ ಸೆಂಟರ್‌ನ ವಾರ್ಷಿಕ ಮಹಾಸಭೆ ಸಂಸ್ಥೆಯ ಸಭಾಂಗಣದಲ್ಲಿ ಅಧ್ಯಕ್ಷ ಮೂವೆರ ಕೆ. ಸುಬ್ಬಯ್ಯ (ಶಂಭು) ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಸಂಘದ ಚಟುವಟಿಕೆ- ನೂತನ ಕಟ್ಟಡ ಕೆಲಸ ಮತ್ತಿತರ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು. ಸಂಸ್ಥೆಯ ಗೌರವ ಅಧ್ಯಕ್ಷರಾದ ಕೊಡವ ಸಮಾಜದ ಅಧ್ಯಕ್ಷ ಮಂಡುವAಡ ಪಿ. ಮುತ್ತಪ್ಪ ಅವರು ಮಾತನಾಡಿ, ಕೊಡವ ಸಮಾಜ ಹಾಗೂ ಅಂಗ ಸಂಸ್ಥೆಯಾದ ವೆಲ್‌ಫೇರ್ ಸೆಂಟರ್ ಸೌಹಾರ್ದಯುತವಾಗಿ ಮುಂದುವರಿಯಬೇಕೆAದರು.

ಅಧ್ಯಕ್ಷ ಶಂಭು ಸುಬ್ಬಯ್ಯ ಅವರು ಮಾತನಾಡಿ, ಸಂಸ್ಥೆಯ ಮುಂದಿನ ಕಾರ್ಯಯೋಜನೆ ಕುರಿತು ಸದಸ್ಯರ ಸಲಹೆ ಅಗತ್ಯವೆಂದರು.

ಕಾರ್ಯದರ್ಶಿ ಬಿದ್ದಂಡ ಬೆನ್ ಬೆಳ್ಯಪ್ಪ, ಖಜಾಂಚಿ ಪಡೇಟಿರ ಹರೀಶ್ ಮುತ್ತಪ್ಪ ಅವರುಗಳು ಲೆಕ್ಕಪತ್ರ-ವರದಿ ಮಂಡಿಸಿದರು. ಉಪಾಧ್ಯಕ್ಷ ಮುಳ್ಳಂಡ ರತು ಚಂಗಪ್ಪ ವಂದಿಸಿದರು.